– ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸದಿದ್ರೆ ಅನುದಾನ ಬರೋದಿಲ್ಲ ಎಂದು ಕಾಂಗ್ರೆಸ್ ಶಾಸಕ ಬೇಸರ
ಬಳ್ಳಾರಿ: ಗ್ಯಾರಂಟಿ ಯೋಜನೆಗಳಿಗೆ (Congress Guarantee) ಕಾಂಗ್ರೆಸ್ ನಾಯಕರೇ ಅಪಸ್ವರ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಸ್ಕೀಂಗಳಿಂದಾಗಿ ಕ್ಷೇತ್ರಗಳಿಗೆ ಅನುದಾನ ಬರುತ್ತಿಲ್ಲ ಎಂದು ‘ಕೈ’ ಶಾಸಕರು ಬೇಸರ ಹೊರಹಾಕಿದ್ದಾರೆ.
Advertisement
ಎರಡು ಗ್ಯಾರಂಟಿಗಳನ್ನ ರದ್ದು ಮಾಡುವುದರಿಂದ ಅನುದಾನ ಸರಿಯಾಗುತ್ತೆ ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆ ಕಾಂಗ್ರೆಸ್ ಶಾಸಕ ಹೆಚ್.ಆರ್.ಗವಿಯಪ್ಪ (H.R.Gaviyappa) ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ; ವಿಚಾರಣೆ ಡಿ.10 ಕ್ಕೆ ಮುಂದೂಡಿದ ಹೈಕೋರ್ಟ್
Advertisement
Advertisement
ಆಡಳಿತ ಪಕ್ಷದ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಭೂಮಿಪೂಜೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರ್ತಿಲ್ಲ. ಬಸ್‌ನಲ್ಲಿ ಓಡಾಡೋದು ಸೇರಿದಂತೆ ಇನ್ನಿರಡು ಗ್ಯಾರಂಟಿಗಳು ಕಡಿಮೆ ಮಾಡೋಕೆ ಸಿಎಂಗೆ ಹೇಳ್ತೀವಿ. ಒಂದೆರಡು ಗ್ಯಾರಂಟಿಗಳು ತೆಗೆಯಿರಿ ಅಂತಾ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳ್ತೀವಿ. ಅವರೇನು ತೀರ್ಮಾನ ಮಾಡ್ತಾರೆ ನೋಡೋಣ ಎಂದು ಹೇಳಿಕೆ ಕೊಟ್ಟಿದ್ದಾರೆ.
Advertisement
ಸದ್ಯ ಈ ಹೇಳಿಕೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲ ಎಂದು ಆರೋಪ ಮಾಡ್ತಿದ್ದ ವಿರೋಧ ಪಕ್ಷದ ನಾಯಕರಿಗೆ ಆಹಾರವಾದಂತಾಗಿದೆ. ಇದನ್ನೂ ಓದಿ: ಅರಸೀಕೆರೆ ನಗರಸಭೆ ವಾರ್ಡ್ ಉಪಚುನಾವಣೆ – ಎಂಟರಲ್ಲಿ ಏಳು ಸ್ಥಾನ ಗೆದ್ದ ಕಾಂಗ್ರೆಸ್; ‘ದೋಸ್ತಿ’ಗೆ ಮುಖಭಂಗ