DistrictsKarnatakaLatestMain PostUttara Kannada

ರಾಜ್ಯ ಸರ್ಕಾರದ ನದಿ ಜೋಡಣೆ ವಿರೋಧಿಸಿ ಸಮಾವೇಶ : ಸ್ವರ್ಣವಲ್ಲಿ ಶ್ರೀ

ಕಾರವಾರ : ರಾಜ್ಯ ಸರ್ಕಾರ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕೈ ಬಿಡಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಲು ಜೂನ್ ಮೊದಲ ವಾರ ಜನ ಸಮಾವೇಶ ನಡೆಸಲಾಗುವುದು ಎಂದು ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಶಿರಸಿ ತಾಲೂಕಿನ ಸೋಂದಾದ ಸ್ವರ್ಣವಲ್ಲಿ ಮಠದ ಸಭಾಂಗಣದಲ್ಲಿ ಬೇಡ್ತಿ ಅಘನಾಶಿನಿಕೊಳ್ಳ ಸಂರಕ್ಷಣಾ ಸಮಿತಿಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಾಂದೋಲನದ ಮೂಲಕ ಯೋಜನೆಯ ವಿರುದ್ಧ ಅಭಿಪ್ರಾಯ ಸಂಗ್ರಹವಾಗಬೇಕು. ಜನ ಜಾಗೃತಿ ಕಾರ್ಯಗಳ ಮೂಲಕ ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಇದನ್ನೂ ಓದಿ: ಕೇಂದ್ರದ ಮರು ಪರಿಶೀಲನೆ ಪೂರ್ಣಗೊಳ್ಳುವವರೆಗೂ ದೇಶದ್ರೋಹ ಕೇಸ್‌ ದಾಖಲಿಸುವಂತಿಲ್ಲ: ಸುಪ್ರೀಂ

ಸಮಿತಿಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ, ನದಿ ಜೋಡಣೆ ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ ಹಲವು ಲೋಪದೋಷಗಳಿವೆ. ಸಮೀಕ್ಷೆ ನಡೆಸದೇ ವಿವರ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು ಸರ್ಕಾರ ಡಿಪಿಆರ್(ಸಮಗ್ರ ಯೋಜನಾ ವರದಿ) ರದ್ದು ಮಾಡಬೇಕು ಎಂದು ಒತ್ತಾಯಿಸಿದರು.  ಇದನ್ನೂ ಓದಿ: ಕಾಂಗ್ರೆಸ್ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ? ಡಿಕೆಶಿಗೆ ನಟಿ ರಮ್ಯಾ ಪ್ರಶ್ನೆ

ಭೂ ವಿಜ್ಞಾನಿ ಡಾ.ಜಿ.ವಿ. ಹೆಗಡೆ ಮಾತನಾಡಿ, ಶಾಲ್ಮಲಾ ಮತ್ತು ಬೇಡ್ತಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಬೇಡ್ತಿ, ವರದಾ ಯೋಜನೆ ಜಾರಿ ಸಾಧ್ಯವಾಗದು. ಇದರಿಂದ ಅಪಾರ ಅರಣ್ಯ ನಾಶವಾಗಲಿದೆ ಎಂದರು.

Leave a Reply

Your email address will not be published.

Back to top button