Bengaluru City

ಮೇಕ್ ಇನ್ ಇಂಡಿಯಾದಿಂದ ನವಭಾರತ ನಿರ್ಮಾಣ: ಡಾ.ಕೆ.ಸುಧಾಕರ್

Published

on

Share this

– ಆತ್ಮನಿರ್ಭರ ಭಾರತ ನಿರ್ಮಾಣ

ಬೆಂಗಳೂರು: ಕೋವಿಡ್ ಆರಂಭದಲ್ಲಿ ವೈದ್ಯಕೀಯ ಸಾಧನಗಳ ಕೊರತೆ ಇತ್ತು. ನಂತರ ಮೇಕ್ ಇನ್ ಇಂಡಿಯಾದಿಂದಾಗಿ ಹೊರದೇಶಗಳಿಗೂ ಸಾಧನಗಳನ್ನು ರಫ್ತು ಮಾಡುವ ಸಾಮಥ್ರ್ಯ ಬಂದಿದ್ದು, ಇದರಿಂದ ನವಭಾರತ ನಿರ್ಮಾಣವಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಐಐಟಿಪಿಎಲ್ ನ ನೂತನ ಕ್ಯಾತ್ ಲ್ಯಾಬ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ‘ಮೇಕ್ ಇನ್ ಇಂಡಿಯಾ’ ಕರೆ ನೀಡಿದ್ದಾರೆ. ಉತ್ಪಾದನಾ ವಲಯದಲ್ಲಿ ಎಫ್‍ಡಿಐ ಹೂಡಿಕೆ 2014 ಕ್ಕಿಂತ ಮುನ್ನ 20 ಬಿಲಿಯನ್ ಡಾಲರ್ ಇತ್ತು. ಈಗ ಮೂರು ಪಟ್ಟು ಹೆಚ್ಚಿದ್ದು, 68 ಬಿಲಿಯನ್ ಡಾಲರ್ ಹೂಡಿಕೆ ಬಂದಿದೆ. ಹೆಚ್ಚಿನ ವೈದ್ಯಕೀಯ ಉಪಕರಣಗಳಿಗಾಗಿ ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವೆ. ಆದರೆ ಐಐಟಿಪಿಎಲ್ ಕಂಪನಿ ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು

ಈ ಹಿಂದೆ ಪಿಪಿಇ ಕಿಟ್ ಗೂ ಚೀನಾವನ್ನು ಅವಲಂಬಿಸಬೇಕಾಗಿತ್ತು. ನಂತರ ಮೋದಿ ಅವರ ಪ್ರಯತ್ನದಿಂದ ಅನೇಕ ದೇಶೀಯ ಕಂಪನಿಗಳು ಮಾಸ್ಕ್, ಪಿಪಿಇ ಕಿಟ್ ತಯಾರಿಸಿ ವಿದೇಶಗಳಿಗೂ ರಫ್ತು ಮಾಡುವಂತಾಯಿತು. ಇದರಿಂದ ನವಭಾರತ ನಿರ್ಮಾಣ ಸಾಧ್ಯವಾಗಿದೆ ಎಂದರು.

ಭಾರತ ಮಧುಮೇಹಿಗಳು ಹೆಚ್ಚಿರುವ ಕೇಂದ್ರವಾಗಿದೆ. ಇದು ಬೇರೆ ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಸಾಂಕ್ರಾಮಿಕ ರೋಗಗಳಲ್ಲಿ ಹೆಚ್ಚಿನವು ಹೃದಯ ಸಂಬಂಧಿ ರೋಗಗಳಿಗೆ ಸಂಬಂಧಿಸಿದೆ. ಇದಕ್ಕಾಗಿ ಚಿಕಿತ್ಸೆ ನೀಡಲು ಅನೇಕ ವೈದ್ಯಕೀಯ ಉಪಕರಣಗಳು ಬೇಕಿದ್ದು, ಇದು ಸಾಮಾಜಿಕ ಪರಿಣಾಮವನ್ನೂ ಬೀರುತ್ತದೆ. ಇದು ಕೇವಲ ಉದ್ಯಮವಾಗಿರದೆ ಜನರ ಜೀವನದ ಮೇಲೆ ಪರಿಣಾಮ ಬೀರುವ ಅಂಶವೂ ಆಗಿದೆ. 3-4 ಲಕ್ಷ ರೂ. ಬೆಲೆಬಾಳುವ ಉಪಕರಣಗಳನ್ನು ಬೆಂಗಳೂರಿನಲ್ಲೇ ಉತ್ಪಾದಿಸಲು ಐಐಟಿಪಿಎಲ್ ಕಂಪನಿ ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದು, ಇದು ಜನರಿಗೆ ಅನುಕೂಲವಾಗಲಿದೆ. ಇಂತಹ ಹೂಡಿಕೆದಾರರು ಹಾಗೂ ಸಂಶೋಧಕರಿಗೆ ಸರ್ಕಾರ ಎಲ್ಲ ಬಗೆಯ ನೆರವು ನೀಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾಪತ್ತೆಗೂ ಮುನ್ನ ಖತರ್ನಾಕ್ ಪ್ಲಾನ್ ಮಾಡಿದ್ದ ಯುವತಿ, ಮಕ್ಕಳು

ಶೀಘ್ರದಲ್ಲೇ ಸಭೆ

ಕೋವಿಡ್ ಗೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದಕ್ಕೂ ಮೊದಲು ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಕೋವಿಡ್ ಒಂದು ರಾಜ್ಯ ಅಥವಾ ದೇಶಕ್ಕೆ ಸೀಮಿತವಾಗಿಲ್ಲ. ರಾಜ್ಯದಲ್ಲಿ 83% ಮೊದಲ ಲಸಿಕೆ ಡೋಸ್, 38% ಎರಡೂ ಡೋಸ್ ನೀಡಲಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ತೀವ್ರ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications