ಶಿವಮೊಗ್ಗ: ದುಷ್ಕರ್ಮಿಗಳಿಂದ ಭಯ ಹುಟ್ಟಿಸುವ ಪ್ರಕರಣ ಹಿನ್ನೆಲೆಯಲ್ಲಿ ಇದೀಗ ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹಿಂದೂ ಕಾರ್ಯಕರ್ತ ದಿ. ಹರ್ಷ (Harsha) ಸಹೋದರಿ ಅಶ್ವಿನಿ (Ashwini) ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಗೆ ಹರ್ಷ ತಾಯಿ ಪದ್ಮಾವತಿ ಹಾಗೂ ಹರ್ಷ ಸಹೋದರಿ ಅಶ್ವಿನಿ ಮಾತನಾಡಿ, ರಾತ್ರಿ 11.15 ರ ಸಮಯಕ್ಕೆ 3-4 ಬೈಕ್ ನಲ್ಲಿ ಯುವಕರು ಬಂದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರು ಎಂದು ಹೇಳಿದರು.
Advertisement
Advertisement
ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಅವಾಜ್ ಹಾಕಿದ್ದಾರೆ. ಇನ್ನು ಎಷ್ಟು ಮಂದಿ ಹಿಂದೂ ಯುವಕರ ಬಲಿಯಾಗಬೇಕು..?. ನನ್ನ ಸಹೋದರ ಹರ್ಷ ಹೋದ, ಪ್ರವೀಣ್ ನೆಟ್ಟಾರ್ (Praveen Nettar) ಹೋದ. ಆದರೂ ಅವರ ದಾಹ ಇನ್ನೂ ತೀರಿಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR
Advertisement
Advertisement
ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ 2 ಬೈಕ್‍ಗಳಲ್ಲಿ ಬಂದ 6 ಮಂದಿ ಮುಸ್ಲಿಂ ಯುವಕರು ಮಚ್ಚು-ಲಾಂಗ್ ಹಿಡಿದು ಭಯ ಹುಟ್ಟಿಸಿದ್ದಾರೆ. ಮುಸ್ಲಿಂ ಪರ ಘೋಷಣೆ ಕೂಗುತ್ತಾ, ಲಾಂಗ್ ಬೀಸಿದ್ದಾರೆ. ಮತ್ತೊಂದೆಡೆ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದ್ದು, ಪ್ರಕಾಶ್ (25) ಎಂಬಾತ ಗಾಯಗೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿ ಹರ್ಷನ ಸಹೋದರಿ ಅಶ್ವಿನಿ ಸೇರಿ 10-15 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಫೆ.20ರಂದು ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೀಡಾಗಿದ್ದ.