ನವದೆಹಲಿ: ದೇಶಕ್ಕೆ ಮಹಾತ್ಮಾ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಅವರತಂಹ ನಾಯಕರು ಬೇಕೇ ಹೊರತು, ಸರ್ವಾಧಿಕಾರಿಗಳಾದ ಹಿಟ್ಲರ್, ಮುಸ್ಲೋನಿ, ಮೋದಿಗಳಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ವಿರುದ್ಧ ಕಿಡಿಕಾರಿದ್ದಾರೆ.
ನ್ಯೂಜಿಲ್ಯಾಂಡ್‍ನಲ್ಲಿ ನಡೆದ ಮಸೀದಿ ದಾಳಿಯನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಇದನ್ನು ರೀ ಟ್ವೀಟ್ ಮಾಡಿದ ದಿಗ್ವಜಯ್ ಸಿಂಗ್ ಅವರು, ಕೇಂದ್ರ ಸರ್ಕಾರ ಹಾಗು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
I totally agree with Rahul ji. World needs the Doctrine of Love Peace and Compassion promoted by Sanatan Dharm Gautam Budha and Mahavir and not that of Hatred and Violence. We need Mahatma Gandhis Martin Luther Kings and not Hitlers Mussolinis and Modis. https://t.co/Q9Ay0Ro5Tj
— digvijaya singh (@digvijaya_28) March 16, 2019
Advertisement
ರಾಹುಲ್ ಜೀ ಅವರ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಜಗತ್ತು ಪ್ರೀತಿ, ಶಾಂತಿಯ ಸಿದ್ಧಾಂತವನ್ನು ಬಯಸುತ್ತದೆ. ಹೀಗಾಗಿ ಮಹಾವೀರ್ ಹಾಗೂ ಗೌತಮ ಬುದ್ಧನ ಶಾಂತಿ ಹಾಗೂ ಸಹಬಾಳ್ವೆಯನ್ನು ಜನರಿಗೆ ನೀಡಲು ಯತ್ನಿಸಬೇಕೇ ಹೊರತು ದ್ವೇಷ, ಯುದ್ಧಗಳನ್ನಲ್ಲ ಎಂದು ದಿಗ್ವಜಯ್ ಸಿಂಗ್ ತಿಳಿಸಿದ್ದಾರೆ.
Advertisement
ರಾಹುಲ್ ಗಾಂಧಿ ಹೇಳಿದ್ದೇನು?:
ನ್ಯೂಜಿಲ್ಯಾಂಡ್‍ನಲ್ಲಿ ಉಗ್ರರು ನಡೆಸಿದ ಅಮಾನವೀಯ ಕೃತ್ಯ ಖಂಡನೀಯವಾಗಿದೆ. ವಿಶ್ವದಲ್ಲಿ ಸಹಾನುಭೂತಿ ಮತ್ತು ತಿಳುವಳಿಕೆ ಅವಶ್ಯಕವಾಗಿದೆ. ಭಯೋತ್ಪಾದನೆಯನ್ನು ದ್ವೇಷಿಸಬೇಕೇ ಹೊತು ಧರ್ಮವನಲ್ಲ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಂತಾಪ ತಿಳಿಸುತ್ತಿರುವೆ. ಜೊತೆಗೆ ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Advertisement
The #NewZealandShooting is a despicable act of terrorism, that must be condemned unequivocally. The world stands in need of compassion & understanding. Not bigotry & hate filled extremism. My condolences to the families of the victims. My prayers go out to those who were injured.
— Rahul Gandhi (@RahulGandhi) March 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv