– ಜಾತಿ, ಸಮುದಾಯಗಳ ಹೆಸರಿನಲ್ಲಿ ದೇಶ ಒಡೆಯುತ್ತಿದ್ದಾರೆ ಎಂದ ಪ್ರಧಾನಿ
ನವದೆಹಲಿ: ಭಾರತದ ಒಳಗೆ ಮತ್ತು ಹೊರಗೆ, ಕೆಲವು ಶಕ್ತಿಗಳು ತಮ್ಮ ರಾಜಕೀಯ ಉದ್ದೇಶಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ಆದ್ದರಿಂದ ನಾವು ನಗರ ನಕ್ಸಲರನ್ನು (Urban Naxals) ಗುರುತಿಸಿ, ಅವರ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದರು.
#WATCH | At the National Unity Day parade in Gujarat’s Kevadia, Prime Minister Narendra Modi says “This time the National Unity Day has brought a wonderful coincidence. On one hand, today we are celebrating the festival of unity and on the other hand, it is also the festival of… pic.twitter.com/zLvr4nReGl
— ANI (@ANI) October 31, 2024
Advertisement
ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ (National Unity Day) ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಅವರು ಮಾತನಾಡಿದರು. ರಾಷ್ಟ್ರೀಯ ಏಕತೆಗೆ ಕರೆ ನೀಡಿದ ಪ್ರಧಾನಿ ಮೋದಿ, ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವಲ್ಲಿ ಅದರ ಮೌಲ್ಯವನ್ನು ಒತ್ತಿ ಹೇಳಿದರು. ಇದನ್ನೂ ಓದಿ: 2 ದಿನಗಳಿಂದ ನಾಪತ್ತೆಯಾಗಿದ್ದ 50ರ ಮಹಿಳೆಯ ಮೃತದೇಹ 6 ತುಂಡುಗಳಾಗಿ ಪತ್ತೆ
Advertisement
ಬಳಿಕ ಮಾತನಾಡುತ್ತಾ, ʻರಾಷ್ಟ್ರೀಯ ಏಕತಾ ದಿವಸ್’ ಹಾಗೂ ದೀಪಾವಳಿ ಹಬ್ಬದ (Deepavali Festival) ಶುಭಾಶಯ ಕೋರಿದರು. ಪ್ರಪಂಚದ ಹಲವಾರು ದೇಶಗಳಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ಈ ಹಬ್ಬವು ಭಾರತವನ್ನು ಇಡೀ ವಿಶ್ವದೊಂದಿಗೆ ಜೋಡಿಸಿದೆ. ದೇಶಗಳಲ್ಲಿ ಇದನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ಹೊತ್ತಿನಲ್ಲೇ ಏಕತಾ ದಿವಸ್ ಆಚರಣೆ ಮಾಡುತ್ತಿರುವುದು ವಿಶಿಷ್ಟ ಸಂಗತಿ ಎಂದು ಶ್ಲಾಘಿಸಿದರು.
Advertisement
Advertisement
ವಿಕ್ಷಗಳ ವಿರುದ್ಧ ಕೆಂಡಾಮಂಡಲ:
ಇದೇ ವೇಳೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಮಾತನಾಡಿದ ಮೋದಿ, ಕೆಲವು ಶಕ್ತಿಗಳಿಂದ ಭಾರತದ ಒಳಗೆ ಮತ್ತು ಹೊರಗೆ ತೊಂದರೆಯಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಘನತೆಗೆ ಹಾನಿ ಮಾಡುವುದು ಸೇರಿದಂತೆ ದೇಶದಲ್ಲಿ ಅವ್ಯವಸ್ಥೆ ಮತ್ತು ಅಸ್ಥಿರತೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ತಿವಿದರು.
ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿ ಮಾಡುವತ್ತ ಕೆಲ ಶಕ್ತಿಗಳು ಗಮನಹರಿಸಿವೆ. ಅಲ್ಲದೇ ವಿಶ್ವದಾದ್ಯಂತ ಭಾರತದ ಬಗ್ಗೆ ತಪ್ಪು ಸಂದೇಶ ಹರಡಲು ಬಯಸುತ್ತಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಗುರಿ ಹೊಂದಿದ್ದಾರೆ. ಜೊತೆಗೆ ಜಾತಿ, ಸಮುದಾಯಗಳ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಭಾರತೀಯ ಸಮಾಜ ಮತ್ತು ಅದರ ಏಕತೆಯನ್ನು ದುರ್ಬಲಗೊಳಿಸುವುದು ಅವರ ಏಕೈಕ ಉದ್ದೇಶವಾಗಿದೆ ಎಂದು ಕಿಡಿಕಾರಿದರು.
ಮುಂದುವರಿದು, ಭಾರತ ಅಭಿವೃದ್ಧಿ ಹೊಂದುವುದನ್ನು ಅವರು ಎಂದಿಗೂ ಬಯಸುವುದಿಲ್ಲ. ಏಕೆಂದರೆ ʻಬಡ ಭಾರತ, ದುರ್ಬಲ ಭಾರತʼದ ರಾಜಕೀಯ ಅವರಿಗೆ ಸರಿಹೊಂದುತ್ತದೆ. ಹಾಗಾಗಿ ಅವರು ಸಂವಿಧಾನದ ಹೆಸರಿನಲ್ಲಿ ಭಾರತ ದೇಶವನ್ನ ಒಡೆಯುತ್ತಿದ್ದಾರೆ. ನಾವು ಈ ನಗರ ನಕ್ಸಲರ ಮೈತ್ರಿಯನ್ನು ಗುರುತಿಸಿ ಅವರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಆರ್.ಆರ್ ನಗರ ದರ್ಶನ್ ನಿವಾಸದ ಬಳಿ ಪೊಲೀಸರ ಬಿಗಿ ಭದ್ರತೆ – ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
ಹಿಂದಿನ ಕಾಂಗ್ರೆಸ್ ಸರ್ಕಾರದ ನೀತಿಗಳು ದೇಶದಲ್ಲಿ ಏಕೆತೆಯ ಭಾವನೆಯನ್ನು ದುರ್ಬಲಗೊಳಿಸಿದೆ. ಆದ್ರೆ ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ, ಉತ್ತಮ ಆಡಳಿತದ ಹೊಸ ಮಾದರಿಯು ದೇಶದಲ್ಲಿ ತಾರತಮ್ಯದ ಸಾಧ್ಯತೆಯನ್ನು ಕೊನೆಗೊಳಿಸಿದೆ. ಏಕೆಂದರೆ ನಾವು ʻಸಬ್ಕಾ ಸಾಥ್ ಸಬ್ಕಾ ವಿಕಾಸ್ʼ ತತ್ವದಲ್ಲಿ ನಂಬಿಕೆ ಹೊಂದಿದ್ದೇವೆ ಎಂದು ಪ್ರಧಾನಿ ಹೇಳಿದರು. ಇದನ್ನೂ ಓದಿ: ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ – 2 ಕೋಟಿಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಮುಂಬೈನಲ್ಲಿ ಅರೆಸ್ಟ್