`ಆ ದಿನಗಳು’ (Aa Dinagalu) ಖ್ಯಾತಿಯ ಚೇತನ್ ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿಯ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ನಾಟಕವೊಂದರಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವ ಆರೋಪ ಕೇಳಿ ಬಂದಿದೆ. ನಾಟಕದಲ್ಲಿ ನಟಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯವು ಅಮಾನತು ಮಾಡಲಾಗಿದೆ. ವಿಶ್ವವಿದ್ಯಾನಿಲಯದ ನಡೆಯ ಬಗ್ಗೆ ನಟ ಚೇತನ್ ಕಿಡಿಕಾರಿದ್ದಾರೆ. ಅಂಬೇಡ್ಕರ್ (Ambedkar) ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ ಎಂದು ನಟ ಚೇತನ್ (Actor Chethan) ವಾಗ್ದಾಳಿ ಮಾಡಿದ್ದಾರೆ.

— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) February 12, 2023
ಇದೀಗ ಈ ಬೆಳವಣಿಗೆಯ ಕುರಿತು ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. ಬಲವಾದ ಪ್ರಜಾಪ್ರಭುತ್ವಕ್ಕಾಗಿ, ಎಲ್ಲವನ್ನೂ ಮತ್ತು ಎಲ್ಲರನ್ನೂ ತಮಾಷೆ ಮಾಡುವ ಹಕ್ಕು ನಮಗಿರಬೇಕು. ನಾವುಗಳು ಮೋದಿಯನ್ನು ಅಪಹಾಸ್ಯ ಮಾಡುವ ಸ್ಟ್ಯಾಂಡ್-ಅಪ್ ಕಾಮಿಕ್ಸ್ ಮತ್ತು ನಾಟಕಗಳನ್ನು ಹೇಗೆ ಸೆನ್ಸಾರ್ ಮಾಡಬಾರದು, ರಾಮ/ ಮಹಮ್ಮದ್/ಬಸವ ಅಂಬೇಡ್ಕರ್/ದಲಿತರ ವಿರುದ್ಧ `ಹಾಸ್ಯ’ವನ್ನು ಕೂಡ ಅಪರಾಧವೆಂದು ಪರಿಗಣಿಸುವುದು ಮಾಡುವುದು ಪ್ರಜಾಪ್ರಭುತ್ವವಲ್ಲ ಎಂದು ನಟ ಟ್ವೀಟ್ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

