Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 2047ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ರಾಮನ ಗುಣ ಮೈಗೂಡಿಸಿಕೊಳ್ಳಬೇಕು: ಮೋದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 2047ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ರಾಮನ ಗುಣ ಮೈಗೂಡಿಸಿಕೊಳ್ಳಬೇಕು: ಮೋದಿ

Latest

2047ರಲ್ಲಿ ವಿಕಸಿತ ಭಾರತ ನಿರ್ಮಾಣಕ್ಕೆ ರಾಮನ ಗುಣ ಮೈಗೂಡಿಸಿಕೊಳ್ಳಬೇಕು: ಮೋದಿ

Public TV
Last updated: November 25, 2025 1:49 pm
Public TV
Share
2 Min Read
Narendra Modi Ayodhya Ram Mandir
SHARE

– ಧರ್ಮ ಧ್ವಜ ಶ್ರೀರಾಮನ ಆದರ್ಶದ ಉದ್ಘೋಷ
– ಬಸವಣ್ಣನ ಅನುಭವ ಮಂಟಪ ಉಲ್ಲೇಖಿಸಿದ ಪ್ರಧಾನಿ

ಲಕ್ನೋ: 2047ರಲ್ಲಿ ವಿಕಸಿತ ಭಾರತ (Viksit Bharat) ನಿರ್ಮಾಣ ಮಾಡಲು ರಾಮನ (Lord Ram) ಗುಣ ಮೈಗೂಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

ಅಯೋಧ್ಯೆ (Ayodhya) ರಾಮ ಮಂದಿರದಲ್ಲಿ (Ram Mandir) ಧರ್ಮ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಇಂದು ಅಯೋಧ್ಯೆ ನಗರ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಸಂಪೂರ್ಣ ಭಾರತ, ವಿಶ್ವ ರಾಮಮಯವಾಗಿದೆ. 500 ವರ್ಷಗಳ ಯಜ್ಞ ಇಂದು ಪೂರ್ಣಗೊಂಡಿದೆ. ರಾಮ ಭಕ್ತರ ಮನಸ್ಸಿನಲ್ಲಿ ಅಪಾರ ಆನಂದವಿದೆ. ವರ್ಷಗಳ ಪ್ರಾರ್ಥನೆ ಇಂದು ಸಿದ್ಧಿಯಾಗಿದೆ. ಇದು ಕೇವಲ ಧ್ವಜ ಅಲ್ಲ, ಭಾರತೀಯ ಸಭ್ಯತೆಯ ಪ್ರತೀಕ. ಈ ಧ್ವಜ ರಾಮರಾಜ್ಯವನ್ನು ಪ್ರತಿರೂಪಿಸುತ್ತದೆ. ಈ ಧ್ವಜ ಸಂತರ ಸಾಧನೆ, ಶ್ರೀರಾಮನ ಆದರ್ಶದ ಉದ್ಘೋಷವಾಗಿದೆ. ಧ್ವಜ ರಾಮ ಮಂದಿರದ ಕಿರೀಟ. ಗೆಲುವು ಸತ್ಯಕ್ಕೆ ಸಿಗಲಿದೆ ಎಂದರು.

Ayodhya Ram Mandir Dharma Dhwaja Narendra Modi 1

ಈ ಧ್ವಜ ದೂರದಿಂದಲೇ ರಾಮ ಮಂದಿರದ ದರ್ಶನ ಮಾಡಿಸುತ್ತದೆ. ರಾಮ ಮಂದಿರಾ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ವಿಕಸಿತ ಭಾರತ ನಮ್ಮ ಸಂಕಲ್ಪವಾಗಿದೆ. ಒಂದೇ ಸ್ಥಳದಲ್ಲಿ ವಾಲ್ಮೀಕಿ, ಅಹಲ್ಯ ಸೇರಿ ಎಲ್ಲ ಪ್ರಮುಖರಿದ್ದಾರೆ. ರಾಮ ಮಂದಿರಕ್ಕೆ ಬರುವವರು ಆವರಣದಲ್ಲಿರುವ ಏಳು ಮಂದಿರಕ್ಕೆ ಭೇಟಿ ನೀಡಿ ಅವರ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ರಾಮನಿಂದ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ವರ್ತಮಾನದ ಬಗ್ಗೆ ಯೋಚಿಸುವವರು ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಿದಂತೆ. ನಾವು ಭವಿಷ್ಯದ ಪೀಳಿಗೆ ಬಗ್ಗೆ ಯೋಚಿಸಬೇಕು. ನಾವು ದೂರದೃಷ್ಟಿಯೊಂದಿಗೆ ಕೆಲಸ ಮಾಡಬೇಕು. ಅದಕ್ಕಾಗಿ ನಾವು ಶ್ರೀರಾಮನ ವ್ಯಕ್ತಿತ್ವದಿಂದ ಕಲಿಯಬೇಕು. ರಾಮ ಅಂದರೆ ಆದರ್ಶ, ರಾಮ ಅಂದರೆ ಪುರುಷೋತ್ತಮ. ರಾಮ ಅಂದರೆ ಧರ್ಮದ ದಾರಿಯಲ್ಲಿ ನಡೆಯುವವ, ಕ್ಷಮೆಯ ಗುಣ, ಜ್ಞಾನ ವಿವೇಕ, ಕೃತಜ್ಞತೆ, ಸೌಮ್ಯ ಸ್ವಭಾವದ ಧೃಡತೆ, ರಾಮ ಅಂದರೆ ಸತ್ಯದ ಬುನಾದಿ, ನಿಷ್ಕಲ್ಮಶ ಮನಸ್ಸು. ರಾಮ ಓರ್ವ ವ್ಯಕ್ತಿಯಲ್ಲ ಅವರೊಂದು ಮೌಲ್ಯ, ಅವರೊಂದು ದಿಕ್ಕು ಎಂದು ಅಭಿಪ್ರಾಯಪಟ್ಟರು.

Ayodhya Ram Mandir Dharma Dhwaja Narendra Modi 2

ಭರತ ತನ್ನ ಸೇನೆ ಜೊತೆಗೆ ಚಿತ್ರಕೂಟ ತಲುಪಿದಾಗ ಲಕ್ಷ್ಮಣ ದೂರದಿಂದಲೇ ಅಯೋಧ್ಯೆ ಸೇನೆಯನ್ನು ಕಂಡು ಹಿಡಿದರು. ವಾಲ್ಮೀಕಿಯವರು ಇದನ್ನು ಉಲ್ಲೇಖಿಸಿದ್ದಾರೆ. ಅದೇ ರೀತಿ ಧ್ವಜ ದೂರದಿಂದಲೇ ಅಯೋಧ್ಯೆಯನ್ನು ಸಂಕೇತಿಸುತ್ತದೆ. ಭಾರತ ಪ್ರಜಾಪ್ರಭುತ್ವದ ಮೂಲವಾಗಿದೆ. ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದ ಉಲ್ಲೇಖ ಇದೆ. ಬಸವಣ್ಣನ ಅನುಭವ ಮಂಟಪ ಇನ್ನೊಂದು ಉದಾಹರಣೆ. ಸಾಮಾಜಿಕ, ಆರ್ಥಿಕ ಎಲ್ಲ ಆಯಾಮದ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಇದು ಬರೀ ಧ್ವಜ ಡಿಸೈನ್ ಬದಲಾವಣೆ ಅಲ್ಲ, ಈ ಧ್ವಜ ಗುಲಾಮಿ ಮನಸ್ಥಿತಿ ತೆಗೆದುಹಾಕಿರುವುದನ್ನು ತೋರಿಸುತ್ತದೆ. ಭಾರತ ಮೆಕಾಲೆ ಮನಸ್ಥಿತಿಯಿಂದ ಹೊರಬಂದಿದೆ ಎಂದರು.

Ayodhya Ram Mandir Dharma Dhwaja Narendra Modi

ಅಯೋಧ್ಯೆ ಭಾರತದ ಸಾಂಸ್ಕೃತಿಕ ಕೇಂದ್ರ. ಅಯೋಧ್ಯೆ ವಿಕಸಿತ ಭಾರತದ ಪ್ರಭಾರಿಯಾಗಲಿದೆ. ಪ್ರಾಚೀನತೆ ಜೊತೆಗೆ ಆಧುನಿಕತೆಯ ಸಂಗಮ ಅಯೋಧ್ಯೆಯಾಗಲಿದೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್ ಇದೆ. ಅಯೋಧ್ಯೆಯನ್ನು ಜಾಗತಿಕವಾಗಿ ಸಂಪರ್ಕಿಸಲಾಗುತ್ತಿದೆ. ಅಯೋಧ್ಯೆ ಯುಪಿಯ ಅಗ್ರ ನಗರಗಳಲ್ಲಿ ಒಂದಾಗಿ ಬೆಳೆಯುತ್ತಿದೆ, ಸಾಕಷ್ಟು ಅಭಿವೃದ್ಧಿಯಾಗಿದೆ. ಕಳೆದ 11 ವರ್ಷದಲ್ಲಿ ವಿಶ್ವದ 5ನೇ ಬಲಿಷ್ಠವಾಗಿದೆ, ಶೀಘ್ರದಲ್ಲಿ ಮೂರನೇ ಬಲಿಷ್ಠ ಆರ್ಥಿಕತೆಯಾಗಲಿದೆ ಎಂದು ನುಡಿದರು.

TAGGED:AyodhyaDharma DhwajaFlag Hositnarendra modiRam Mandiruttar pradeshಅಯೋಧ್ಯೆಉತ್ತರ ಪ್ರದೇಶಧರ್ಮಧ್ವಜನರೇಂದ್ರ ಮೋದಿರಾಮ ಮಂದಿರ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Donald Trump Strait Of Hormuz
Latest

ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ – ಇರಾನ್‌ನೊಂದಿಗೆ ಜಂಟಿ ಉದ್ಯಮ ಬಯಸಿದ ಟ್ರಂಪ್‌

Public TV
By Public TV
6 hours ago
Gujarat Titans 1
Cricket

ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 

Public TV
By Public TV
6 hours ago
krs party worker arrest
Latest

ಗೃಹಸಚಿವರನ್ನು ಪ್ರಶ್ನೆ ಮಾಡಿದ ಕೆಆರ್‌ಎಸ್ ಪಕ್ಷದ ‌ಮುಖಂಡ ಬಂಧನ

Public TV
By Public TV
7 hours ago
Bhutnal Lake
Bengaluru City

ಪ್ರವಾಸಕ್ಕೆ ಹೋಗಿದ್ದ ಬೆಂಗ್ಳೂರಿನ ಮೂವರು ಕೆರೆಯಲ್ಲಿ ಮುಳುಗಿ ಸಾವು

Public TV
By Public TV
7 hours ago
Strait of Hormuz Ships
Latest

ಒಂದು ಬ್ಯಾರಲ್‌ ತೈಲಕ್ಕೆ 1 ಡಾಲರ್‌ ತೆರಿಗೆ – ಕ್ರಿಪ್ಟೋ ಕರೆನ್ಸಿಯಲ್ಲಿ ಟ್ಯಾಕ್ಸ್‌ ಪಾವತಿಗೆ ಇರಾನ್‌ ಡಿಮ್ಯಾಂಡ್‌

Public TV
By Public TV
8 hours ago
Sanjay Malhotra
Latest

ರೆಪೋ ದರ ಯಥಾಸ್ಥಿತಿ ಮುಂದುವರಿಸಲು RBI ನಿರ್ಧಾರ

Public TV
By Public TV
8 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?