ಬೆಳಗಾವಿ: ದೇಶದಲ್ಲಿ ಕರ್ನಾಟಕವನ್ನ ನಂ.1 ರಾಜ್ಯ ಮಾಡಲು ಬಿಜೆಪಿ (BJP) ಯೋಜನೆ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.
ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ʻಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಾಡಿನ ಜನರಿಗೆ ನನ್ನ ನಮಸ್ಕಾರಗಳುʼ ಎನ್ನುತ್ತಾ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ನಾನು ಮೊದಲು ನಿಮ್ಮೆಲ್ಲರ ಕ್ಷಮೆ ಕೇಳುವೆ, ಬರಲು ಸ್ವಲ್ಪ ತಡವಾಯಿತು ಎಂದು ಕ್ಷಮೆ ಕೋರಿದರು.
Advertisement
Advertisement
ಮುಂದುವರಿದು, ಕಳೆದ 4 ದಿನಗಳಿಂದ ಕರ್ನಾಟಕದ ವಿವಿಧೆಡೆ ಭೇಟಿ ನೀಡಿದ್ದೇನೆ. ಈ ಸಲ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ನಗರ, ಹಳ್ಳಿ ಸೇರಿ ಎಲ್ಲ ಕಡೆ ಉತ್ಸಾಹ ಇದೆ. 4 ದಿಕ್ಕಿನಿಂದಲೂ ಒಂದೇ ಧ್ವನಿ ಕೇಳಿ ಬರುತ್ತಿದೆ. ʻಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರʼ ಎಂಬುದು ಕೇಳಿ ಬರುತ್ತಿದೆ. ಮತದಾನಕ್ಕೆ ಒಂದೇ ವಾರ ಬಾಕಿ ಇದೆ. ಡಬಲ್ ಇಂಜಿನ್ ಸರ್ಕಾರ ಪುನರಾಯ್ಕೆಯ ಶಂಖನಾದ ಜನರಿಂದ ಕೇಳಿ ಬಂದಿದೆ. ಇದಕ್ಕೆಲ್ಲ ಕಾರಣ ಬಡವರ, ಮಧ್ಯಮವರ್ಗದ ವಿಶ್ವಾಸ ಗಳಿಸಿದ್ದು ಎಲ್ಲರ ವಿಶ್ವಾಸ ಗಳಿಸಿದ್ದೆ ಇದಕ್ಕೆಲ್ಲ ಕಾರಣ ಎಂದು ಹೇಳಿದರು. ಇದನ್ನೂ ಓದಿ: ಎಸಿಎಫ್ ಆಯ್ಕೆ ಮುಸುಕಿನ ಗುದ್ದಾಟ – ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ
Advertisement
Advertisement
ಕರ್ನಾಟಕದಲ್ಲಿ ಈಗ ವಿಮಾನ ನಿಲ್ದಾಣ, ಆಧುನಿಕ ರೈಲ್ವೆ ನಿಲ್ದಾಣಗಳು ಆಗುತ್ತಿವೆ. ಕರ್ನಾಟಕವನ್ನು ನಂ.1 ಮಾಡಲು ಬಿಜೆಪಿ ಯೋಜನೆ ರೂಪಿಸಿದೆ. ಹಾಗಾಗಿ ಬಿಜೆಪಿಗೆ ಮತ ಹಾಕಿದರೆ, ದೇಶದಲ್ಲೇ ಕರ್ನಾಟಕವನ್ನು ನಂ.1 ಮಾಡಲು ಮತ ಹಾಕಿದಂತೆ ಎಂದು ಎಚ್ಚರಿಸಿದರು.
ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್‌ನ ಶಾರ್ಟ್ ಕಟ್ ಸರ್ಕಾರದ ಬಗ್ಗೆ ಎಚ್ಚರಬಾಗಿರಬೇಕು. ಶಾರ್ಟ್ ಕಟ್ ರಾಜಕಾರಣ ಮಾಡುವುದು ಅಂದ್ರೆ ಸಮಾಜವನ್ನು ವಿಭಜಿಸಿದಂತೆ. ಇಂತಹ ರಾಜಕೀಯ ಮಾಡುವವರು ಒಡೆದು ಆಳುವ ನೀತಿ ಅನುಸರಿಸಿದಂರತೆ. ಇದು ವಿಕಾಸದ ದಾರಿ ಆಗುವುದಿಲ್ಲ. ಈ ಶಾರ್ಟ್ ಕಟ್ ರಾಜಕಾರಣದಿಂದ ಅಭಿವೃದ್ಧಿ ಆಗುವುದಿಲ್ಲ. ಹಿಂದೆಲ್ಲ ಅವರು ಮಾಡಿರಬಹುದು. ಆದರೆ, ಇದು 3ನೇ ಪೀಳಿಗೆಯ ಸಮಾಜ ಇದೆ. ಈ ಯುವ ಪೀಳಿಗೆ ಶಾರ್ಟ್ ಕಟ್ ನವರ ಕೈಗೆ ಅಧಿಕಾರ ಕೊಡುವುದಿಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸಿದ್ದು ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಸಮತೋಲನದ ಆಡಳಿತ ಮಾಡುತ್ತಿದೆ. ಒಗ್ಗಟ್ಟಿನಲ್ಲಿ ಕರ್ನಾಟಕ ಸರ್ಕಾರದ ಭವಿಷ್ಯ ಇದೆ ಎಂಬುದನ್ನ ಅರಿತು, ನೀವೆಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಜನಸೇವೆಯೇ ಜನಾರ್ಧನ ಸೇವೆ. ಬಿಜೆಪಿ ನಿಮ್ಮ ಸೇವಕನಂತೆ ಕೆಲಸ ಮಾಡುತ್ತದೆ. ನಾನು ಸೇವಕನಂತೆ ಕೆಲಸ ಮಾಡುತ್ತಿರುವೆ. ಆದ್ರೆ ಕಾಂಗ್ರೆಸ್ ಸೇವೆ ದೆಹಲಿಯಲ್ಲಿನ ಕುಟುಂಬದ ಮೇಲೆ ಇದೆ. ಕಾಂಗ್ರೆಸ್ ರಿಮೋಟ್ ಇರುವುದು ದೆಹಲಿಯ ಒಂದು ಕುಟುಂಬದ ಮನೆಯಲ್ಲಿ. ಜೆಡಿಎಸ್ ಒಂದು ಪರಿವಾರದ ಪ್ರೈವೆಟ್ ಲಿಮಿಟೆಡ್ ಕಂಪನಿ. ಆದರೆ ಮೋದಿಗೆ ಈ ಕುಟುಂಬ ರಾಜಕಾರಣ ಗೊತ್ತಿಲ್ಲ. ಜನರೇ ನನ್ನ ಪರಿವಾರ, ನನ್ನ ಕುಟುಂಬ. ಜನರ ಸುಖ-ದುಃಖಗಳೇ ನನಗೆ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ ಎಂದು ಭಾವುಕರಾದರು. ಇದನ್ನೂ ಓದಿ: ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು
ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನ ಎಲ್ಲ ಕಡೆ ತಿರಸ್ಕಾರ ಮಾಡಲಾಗಿದೆ. ದೇಶದಲ್ಲಿ ಮೂರು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಜೆಡಿಎಸ್ ಮೂರು ಜಿಲ್ಲೆಯ ಪಕ್ಷ. 2018ರಲ್ಲಿ ಅವರೊಂದಿಗೆ ಸೇರಿ ಸರ್ಕಾರ ಮಾಡಿದ್ದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಇವರಿಗೆ ತಮ್ಮ ಭವಿಷ್ಯ ನಿರ್ಮಾಣವೇ ಗೊತ್ತಿಲ್ಲ. ಇಂಥವರು ಜನರ ಭವಿಷ್ಯ ನಿರ್ಮಾಣ ಮಾಡುತ್ತಾರಾ. ನಾನು ಹೇಳುತ್ತಿರುವುದು ಕೇವಲ ಭಾಷಣದ ಮಾತುಗಳಲ್ಲ. ಈ ಹಿಂದೆಯೂ ನುಡಿದಂತೆ ನಡೆದಿದ್ದೇನೆ. ಇವತ್ತು ಮೆಡಿಕಲ್, ತಾಂತ್ರಿಕ ಸ್ಪರ್ಧಾತ್ಮಕ ಪರೀಕ್ಷೆ, ಎಲ್ಲ ಭರ್ತಿ ಪರೀಕ್ಷೆಗಳು ಸ್ಥಳೀಯ ಭಾಷೆಯಲ್ಲಿ ಆಗುತ್ತಿವೆ. ಇದನ್ನೆಲ್ಲ ಜನರಿಗಾಗಿ ನಾವು ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನ ಪ್ರಸ್ತುತಪಡಿಸಿದರು.