ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಂದೆಯನ್ನು ನೆನೆದು ಭಾವುಕ ಪೋಸ್ಟ್ ಹಾಕಿದ್ದಾರೆ.
ಡಿಸೆಂಬರ್ 22 ರಂದು ಅವರ ತಂದೆ ಸುರೇಂದ್ರ ಶೆಟ್ಟಿಯವರ ಜನ್ಮದಿನವಾದ ಹಿನ್ನೆಲೆ ಅವರ ತಂಗಿ ಶಮಿತಾ ಶೆಟ್ಟಿ ಜೊತೆಗೆ ಅಪ್ಪನನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗುವಾಗ ಹೃದಯಾಘಾತದಿಂದ 2016ರಲ್ಲಿ ಸುರೇಂದ್ರ ಶೆಟ್ಟಿ ರಸ್ತೆಯ ಮಧ್ಯೆ ಮೃತಪಟ್ಟಿದ್ದರು. ಈಗ ತಂದೆ ನಮ್ಮೊಂದಿಗಿಲ್ಲ ಎಂಬ ನೋವು ಇಬ್ಬರು ಮಕ್ಕಳಿಗಿದೆ. ಇದನ್ನೂ ಓದಿ: ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ
View this post on Instagram
ಪೋಸ್ಟ್‌ನಲ್ಲಿ ಏನಿದೆ?
ವಿಶ್ಯೂ ಹ್ಯಾಪಿ ಬರ್ತಡೇ ಪಪ್ಪಾ, ನಮಗೆ ಗೊತ್ತು ನೀವು ನಮ್ಮನ್ನ ಬಿಟ್ಟು ಹೋಗಿಲ್ಲ. ಗರ್ಜಿಯನ್ ಎಂಜಲ್ ಆಗಿ ಈಗಲೂ ಕೂಡಾ ನೀವು ನಮ್ಮನ್ನು ಕಾಪಾಡುತ್ತಿದ್ದೀರಿ. ನಮ್ಮ ಕಷ್ಟದ ಸಮಯದಲ್ಲಿ ನೀವು ನಮ್ಮೊಂದಿಗೆ ಇದ್ದಿದ್ದು, ನಿಮ್ಮ ಮೊಮ್ಮಗಳಾದ ಟುಂಕಿ ನೀವು ಬೇಕು ಎಂದು ಬಯಸುತ್ತಿದ್ದಾಳೆ. ಲವ್ ಯೂ ಪಪ್ಪಾ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಶಮಿತಾ ಶೆಟ್ಟಿ ಈಗ ಬಿಗ್ ಬಾಸ್ 15 ರ ಮನೆಯಲ್ಲಿದ್ದು, ಶಿಲ್ಪಾ ಶೆಟ್ಟಿ ಮುಂಬೈನಲ್ಲಿದ್ದಾರೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ತಯಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈಗ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್