ಮುಂಬೈ: ಬಾಲಿವುಡ್‍ನಿಂದ ಹಾಲಿವುಡ್‍ಗೆ ಹೋದ ಪ್ರಿಯಾಂಕ ಚೋಪ್ರ ಕೆಲವು ದಿನಗಳ ಹಿಂದೆ ಮುಂಬೈಗೆ ಬಂದಿದ್ದಾರೆ. ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರು ಮರೀನ್ ಡ್ರೈವ್‍ಯಲ್ಲಿ ಕೆಲವು ಗಂಟೆಗಳ ಕಾಲ ಕಳೆದಿದ್ದಾರೆ. ಈ ವೇಳೆ ಗೆಳೆಯರೊಂದಿಗೆ ತೆಗೆದುಕೊಂಡಿರುವ ಫೋಟೋ ವೈರಲ್ ಆಗಿದೆ.
ಪ್ರಿಯಾಂಕ ತೆಗೆದುಕೊಂಡಿರುವ ಫೋಟೋದಲ್ಲಿ ತುಂಬಾ ಸಾದಾರಣ ಹುಡುಗಿಯಂತೆ ಕಾಣಿಸಿಕೊಂಡಿದ್ದು, ಎಲ್ಲರನ್ನು ಚಕಿತಗೊಳಿಸಿದ್ದಾರೆ. ಮುಂಬೈನ ಪ್ರಸಿದ್ಧ ಲಾಲ್‍ಬಾಗ್‍ನ ರಾಜಾ ಗಣೇಶನ ದೇವರ ದರ್ಶನ ಮಾಡಿದ್ದಾರೆ. ಲಾಲ್‍ಬಾಗ್‍ನಲ್ಲಿ ದೇವರ ದರ್ಶನ ಆದ ನಂತರ ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರು ಮರೀನ್ ಡ್ರೈವ್‍ಯಲ್ಲಿ ಸ್ವಲ್ಪ ಹೊತ್ತು ಕಾಲ ಕಳೆದರು.
Advertisement
Advertisement
ಮರೀನ್ ಡ್ರೈವ್‍ಯಲ್ಲಿ ಪ್ರಿಯಾಂಕ ಮತ್ತು ಅವರ ಸ್ನೇಹಿತರು ಕೆಲ ಹೊತ್ತು ಕಾಲ ಕಳೆಯಲು ಹಾಗೂ ಜನರ ಕಣ್ಣಿಗೆ ಕಾಣಿಸದಿರಲು ಮಧ್ಯ ರಾತ್ರಿಯಲ್ಲಿ ಹೋಗಲು ನಿರ್ಧರಿಸಿದ್ದರು. ನಮಗೆಲ್ಲ ಗೊತ್ತಿರೋ ಹಾಗೆ ಮುಂಬೈ ಯಾವತ್ತೂ ಮಲಗುವುದಿಲ್ಲ. ಮರೀನ್ ಡ್ರೈವ್‍ಯಲ್ಲಿ ಪ್ರಿಯಾಂಕ ಅಂತಹ ದೊಡ್ಡ ನಟಿ ಕಾಲ ಕಳೆಯುವುದು ಕಷ್ಟ ಅಲ್ಲ ಅಸಾಧ್ಯ. ಆದರೆ ಪ್ರಿಯಾಂಕ ಮತ್ತು ಆಕೆಯ ಸ್ನೇಹಿತರಾದ ಮುಶ್‍ತಕ್ ಶೇಕ್ ಮತ್ತು ತಮನ್ನಾ ದತ್ತ್ ಜೊತೆ ಮಧ್ಯರಾತ್ರಿಯಲ್ಲಿ ಸಮುದ್ರದ ದಡದಲ್ಲಿ ಕಾಲ ಕಳೆದಿದ್ದಾರೆ.
Advertisement
ಪ್ರಿಯಾಂಕ ಮತ್ತು ಸ್ನೇಹಿತರು ಮೊದಲು ಲಾಲ್‍ಬಾಗ್ ಚಾರಾಜಾದಲ್ಲಿ ಗಣೇಶನ ದರ್ಶನ ಆದ ನಂತರ ತಮ್ಮ ಪ್ಲಾನ್‍ನ ಪ್ರಕಾರ ಮರೀನ್ ಡ್ರೈವ್‍ಗೆ ಹೋಗಿದ್ದರು. ಮೊದಲು ಅವರು ಕುಫೀಯಾ ಮಿಷನ್‍ನಿಂದ ಮರೀನ್ ಡ್ರೈವ್‍ಗೆ ಹೋಗಲು ನಿರ್ಧರಿಸಿದ್ದರು. ಮರೀನ್ ಡ್ರೈವ್‍ಗೆ ಹೋಗಿದ್ದಾಗ ನನಗಾಗಿ ಜನರು ಇಲ್ಲದ ಜಾಗವನ್ನು ಹುಡುಕಿದ್ದರು. ನಾನು ನನ್ನ ಮುಖವನ್ನು ಮುಚ್ಚಿಕೊಳ್ಳಲು ದುಪ್ಪಟಾವನ್ನು ಉಪಯೋಗಿಸಿದ್ದೆ. ಆ ಕ್ಷಣ ತುಂಬಾನೇ ಸ್ಪೇಷಲ್ ಆಗಿತ್ತು ಏಕೆಂದರೆ ಬೇರೆ ವೇಶದಲ್ಲಿ ಹೋಗುವುದು ನನಗೆ ಇಷ್ಟವಿರಲಿಲ್ಲ. ಗೆಳೆಯರೊಂದಿಗೆ ಕಳೆದರೂ ಸಮಯ ನನಗೆ ಸಂತೋಷವನ್ನು ತಂದಿದೆ ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Advertisement
https://www.instagram.com/p/BYT7LXPgzvQ/?taken-by=priyankachopra
https://www.instagram.com/p/BYT5adIAy1w/?taken-by=priyankachopra
https://www.instagram.com/p/BYTlSABAppM/?taken-by=priyankachopra
https://www.instagram.com/p/BYVF2YWjqIu/?taken-by=mushtaqshiekh
https://www.instagram.com/p/BYT4ohdHksl/?taken-by=sudeepdutt