ವಾಷಿಂಗ್ಟನ್: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲವನ್ನು ಖರೀದಿಸುತ್ತಿರುವ ಕುರಿತು ಪ್ರಶ್ನಿಸಿದ ವಿದೇಶಿ ಪತ್ರಕರ್ತೆಗೆ ಭಾರತ ವಿದೇಶಾಂಗ ಸಚಿವ ಜೈಶಂಕರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಯೂರೋಪ್ ರಷ್ಯಾದಿಂದ ಅರ್ಧ ದಿನಕ್ಕೆ ಖರೀದಿಸುವಷ್ಟು ಪ್ರಮಾಣದ ತೈಲವನ್ನು ಭಾರತ ಒಂದು ತಿಂಗಳ ಅವಧಿಗೆ ಖರೀದಿಸುತ್ತದೆ ಎಂದು ಉತ್ತರಿಸುವ ಮೂಲಕ ಪತ್ರಕರ್ತನಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಾ ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿ ಏನ್ಮಾಡ್ತಿದ್ದಾರೆ: ನಾಸೀರ್ ಹುಸೇನ್ ಪ್ರಶ್ನೆ
Advertisement
Advertisement
ಭಾರತ ಮತ್ತು ಅಮೆರಿಕ ನಡುವೆ ನಡೆದ 2+2 ಸಭೆಯಲ್ಲಿ ಮಾತನಾಡಿದ ಅವರು, ನೀವು ತೈಲ ಖರೀದಿಯನ್ನು ಉಲ್ಲೇಖಿಸುವುದನ್ನು ನಾನು ಗಮನಿಸಿದ್ದೇನೆ. ರಷ್ಯಾದಿಂದ ಇಂಧನ ಖರೀದಿಗೆ ಸಂಬಂಧಿಸಿದಂತೆ ನಿಮ್ಮ ಗಮನವನ್ನು ಯುರೋಪ್ ಕಡೆಗೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಬಹುಶಃ ನಾವು ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸುತ್ತೇವೆ. ಆದರೆ ಅಂಕಿಅಂಶಗಳನ್ನು ನೋಡುವಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಯು ಯುರೋಪ್‌ನ ಅರ್ಧ ದಿನಕ್ಕಿಂತಲೂ ಕಡಿಮೆಯಿರಬಹುದು. ಆದ್ದರಿಂದ ನೀವು ಅದರ ಬಗ್ಗೆ ಯೋಚಿಸಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.
Advertisement
ರಷ್ಯಾವನ್ನು ಭಾರತ ಯಾಕೆ ಖಂಡಿಸುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ನಾವು ಯುಎನ್‌ನಲ್ಲಿ, ನಮ್ಮ ಸಂಸತ್ತಿನಲ್ಲಿ ಮತ್ತು ಇತರ ವೇದಿಕೆಗಳಲ್ಲಿ ನಮ್ಮ ನಿಲುವನ್ನು ತಿಳಿಸಿದ್ದೇವೆ. ನಾವು ಸಂಘರ್ಷಕ್ಕೆ ವಿರುದ್ಧವಾಗಿದ್ದೇವೆ. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಿನ್ನಾಭಿಪ್ರಾಯವನ್ನು (ರಷ್ಯಾ-ಉಕ್ರೇನ್) ಬಗೆಹರಿಸಿಕೊಳ್ಳಬೇಕು ಎಂದು ಈಗಾಗಲೇ ತಿಳಿಸಿದ್ದೇವೆ. ಆ ನಿಟ್ಟಿನಲ್ಲಿ ನಡೆಯುವುದಾದರೆ ಸೂಕ್ತ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು
Advertisement
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಮಾತನಾಡಿ, ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್ ಖರೀದಿಸಲು ಕಾಟ್ಸಾ ಕಾನೂನಿನಡಿಯಲ್ಲಿ ಅಮೆರಿಕವು ತನ್ನ ಪ್ರಮುಖ ಪಾಲುದಾರರಲ್ಲಿ ಒಂದಾದ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಬೇಕೇ ಅಥವಾ ನಿರ್ಬಂಧವನ್ನು ಮನ್ನಾ ಮಾಡಬೇಕೇ ಎಂಬ ಬಗ್ಗೆ ಅಮೆರಿಕ ಯಾವುದೇ ನಿರ್ಣಯ ಮಾಡಿಲ್ಲ ಎಂದು ಹೇಳಿದ್ದಾರೆ.
ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ಬ್ಲಿಂಕೆನ್ ಮಾತನಾಡಿ, ಮಾನವ ಹಕ್ಕುಗಳನ್ನು ರಕ್ಷಿಸುವಂತಹ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಾವು ಬದ್ಧರಾಗಿದ್ದೇವೆ. ನಾವು ಈ ಮೌಲ್ಯಗಳೊಂದಿಗೆ ನಮ್ಮ ಪಾಲುದಾರ ಭಾರತದೊಂದಿಗೆ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇವೆ. ಸರ್ಕಾರ, ಪೋಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಹೆಚ್ಚಳ ಸೇರಿದಂತೆ ಭಾರತದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯಾದ ಕೈದಿಗಳ ಶಿಕ್ಷಣ ಖರ್ಚನ್ನು ಭರಿಸುತ್ತಿದೆ ಇಂದೋರ್ ಜೈಲು