ಲಕ್ನೋ: ನಾವು ಎರಡರಿಂದ ಮೂರು ಮದುವೆ ಮಾಡಿಕೊಂಡರೂ ಸಮಾಜದಲ್ಲಿ ಮೂವರು ಪತ್ನಿಯಂದಿರಿಗೂ (Wives) ಗೌರವ ನೀಡುತ್ತೇವೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಹೊಂದಿರುತ್ತಾರೆ ಎಂದು ಉತ್ತರಪ್ರದೇಶದ ಎಐಎಂಐಎಂ (AIMIM) ರಾಜ್ಯಾಧ್ಯಕ್ಷ ಶೌಕತ್ ಅಲಿ (Shaukat Ali) ವಿವಾದಾತ್ಮಕ ಹೇಳಿಕೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಅವರು, ನಾವು ಎರಡು ಮದುವೆಗಳನ್ನು (Marriage) ಮಾಡಿಕೊಂಡಿದ್ದರೆ, ಅವರನ್ನು ನಾವು ಪರಸ್ಪರ ಅರ್ಥ ಮಾಡಿಕೊಂಡು, ಗೌರವದಿಂದ ಇಡುತ್ತೇವೆ. ಜೊತೆಗೆ ನಮ್ಮ ಮಕ್ಕಳ ಹೆಸರು ಪಡಿತರ ಚೀಟಿಯಲ್ಲಿರುತ್ತದೆ. ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯನ್ನು ಹೊಂದಿರುತ್ತಾರೆ. ಪತ್ನಿಯನ್ನು ಅಥವಾ ಪ್ರೇಯಸಿಯನ್ನು ಅವರು ಗೌರವಿಸುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಹಿಜಬ್‍ನ (Hijab) ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ಯಾರು ಏನು ಧರಿಸುತ್ತಾರೆ ಎಂಬುದನ್ನು ಹಿಂದುತ್ವ ನಿರ್ಧರಿಸುವುದಿಲ್ಲ. ಬದಲಿಗೆ ಸಂವಿಧಾನ ನಿರ್ಧರಿಸುತ್ತದೆ. ಬಿಜೆಪಿ (BJP) ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ದೇಶವನ್ನು ಒಡೆಯುವ ಕೆಲಸ ಮಾಡುತ್ತದೆ. ಮದರಸಾ, ಲಿಂಚಿಂಗ್, ವಕ್ಫ್ ಮತ್ತು ಹಿಜಾಬ್‍ನಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಬಿಜೆಪಿ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದೆ. ಏಕೆಂದರೆ ಬಿಜೆಪಿ ದುರ್ಬಲವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಿವಸೇನೆ ಆಕ್ಷೇಪ – ಕರ್ನಾಟಕದ ಹೆಸರು ಕಿತ್ತು ಹಾಕುವ ಎಚ್ಚರಿಕೆ
Advertisement
Advertisement
ಶಾಲೆ-ಕಾಲೇಜುಗಳ ತರಗತಿ ಒಳಗಡೆ ಹಿಜಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮೂರು ವಾರಗಳ ಹಿಂದೆ ತೀರ್ಪನ್ನು ಕಾಯ್ದಿರಿಸಿತ್ತು. ಸೆ. 22ರವರೆಗೂ ನಿರಂತರವಾಗಿ 10 ದಿನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ವಾದ- ಪ್ರತಿವಾದ ಆಲಿಸಿ ತೀರ್ಪು ಪ್ರಕಟಿಸಿದೆ. ಸುಪ್ರೀಂ ಕೋರ್ಟ್‍ನಿಂದ ಭಿನ್ನ ತೀರ್ಪು ಪ್ರಕಟವಾಗಿದ್ದು ಪ್ರಕರಣದ ವಿಚಾರಣೆ ಮುಖ್ಯ ನ್ಯಾಯಾಧೀಶರು ಇರುವ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಮೇಲೆ ಮುಂದುವರಿದ ದಾಳಿ- ಉಗ್ರರ ಗುಂಡಿಗೆ ಓರ್ವ ಬಲಿ