ಬೆಂಗಳೂರು: ಇಷ್ಟು ಕಾಲ ಸಹಿಸಿದ್ದೇವೆ. ಇನ್ನುಮುಂದೆ ಸಹಿಸಲು ಆಗಲ್ಲ. ಪಕ್ಷ ಸಂಘಟನೆಗೆ ಯತ್ನಾಳ್ (Basanagouda Patil Yatnal) ಸಹಕಾರ ಕೊಡಲಿ. ಇಲ್ಲದಿದ್ದರೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿ ಎಂದು ಯತ್ನಾಳ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Viajyendra) ಹೇಳಿದರು.
ಬಿಜೆಪಿಯ ಬಣ ಜಗಳ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರತಿಧ್ವನಿಸಿದೆ. ಯತ್ನಾಳ್ ಬಣದ ರಾಜಕೀಯದ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್ವಾಲ್ ಸಮ್ಮುಖದಲ್ಲಿ ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಏನಾದರೊಂದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು. ಇದನ್ನೂ ಓದಿ: ಕೇಂದ್ರೀಯ ಶಿಸ್ತು ಸಮಿತಿಗೆ ಮಾತ್ರ ಶಾಸಕರ ವಿರುದ್ಧ ಕ್ರಮದ ಅಧಿಕಾರ: ಸಿ.ಟಿ ರವಿ
Advertisement
Advertisement
ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಕೆಲವರು ಮಾತನಾಡುತ್ತಿರುವುದರ ಬಗ್ಗೆ, ಪಕ್ಷ ವಿರೋಧಿ ಹೇಳಿಕೆಗಳ ಬಗ್ಗೆ ಚರ್ಚೆ ಆಗಿದೆ. ಇದನ್ನ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ಚರ್ಚೆ ಆಗಿದೆ. ಹಾದಿಬೀದಿಯಲ್ಲಿ ಮಾತಾಡುವವರು ಯಾರೇ ಇರಲಿ ಕ್ರಮ ಆಗಬೇಕು ಎಂದು ಚರ್ಚಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು – ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು
Advertisement
ಯತ್ನಾಳ್ ವಿರುದ್ಧ ಕ್ರಮ ವಿಚಾರವಾಗಿ ಪ್ರತಿಕ್ರಿಯಿಸಿ, ಇದರ ಬಗ್ಗೆ ನಾನು ಈಗ ಬಹಿರಂಗ ಚರ್ಚೆ ಮಾಡಲ್ಲ. ಈಗಾಗಲೇ ಈ ವಿಚಾರ ವರಿಷ್ಠರ ಅಂಗಳದಲ್ಲಿದೆ. ಅವರೂ ಕೂಡಾ ಶಿಸ್ತು ಸಮಿತಿ ಎದುರು ಹಾಜರಾಗಿ ಬಂದಿದ್ದಾರೆ. ಬಾಲ್ ಹೈಕಮಾಂಡ್ ಅಂಗಳದಲ್ಲಿದೆ, ಹೈಕಮಾಂಡ್ ತೀರ್ಮಾನ ಮಾಡುತ್ತೆ. ಶಿಸ್ತು ಉಲ್ಲಂಘನೆ ಇನ್ನೂ ಮುಂದುವರೆಸಿದರೆ ಕಾರ್ಯಕರ್ತರಿಗೂ ಬೇಸರವಾಗಿದೆ. ಪಕ್ಷದ ಬೆಳವಣಿಗೆಗೂ ಒಳ್ಳೆಯದಲ್ಲ. ಯಾರೇ ಇದ್ದರೂ ಪಕ್ಷದ ಚೌಕಟ್ಟಿನಲ್ಲೇ ಚರ್ಚೆ ಮಾಡಬೇಕು. ಹಾದಿಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಆಗಬೇಕು. ಯತ್ನಾಳ್ ಮನಸ್ಸಲ್ಲಿ ಏನಿದೆ? ಅವರೇನು ಚರ್ಚೆ ಮಾಡುತ್ತಾರೆ ಎಂದು ಇವತ್ತಿನ ಸಭೆಯಲ್ಲಿ ಚರ್ಚೆ ಆಗಿಲ್ಲ. ಶಿಸ್ತು ಸಮಿತಿ ಮುಂದೆ ಅವರು ಉತ್ತರ ಕೊಟ್ಟು ಬಂದಿದ್ದಾರೆ. ಏನು ಕ್ರಮ ಆಗುತ್ತೆ ಎಂದು ಕಾದು ನೋಡೋಣ ಎಂದು ಹೇಳಿದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಜಾರಿಯಾದ್ರೆ ರಕ್ತಪಾತವಾಗುತ್ತೆ: ಸುರೇಶ್ ಬಾಬು
Advertisement
ಎಸ್‌ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಇದಕ್ಕೆ ಇತಿಶ್ರೀ ಹಾಕಲು, ಬಿಗಿಯಾದ ಕ್ರಮ ಅವರಿಬ್ಬರ ವಿರುದ್ಧ ಕೈಗೊಳ್ಳಲು ತೀರ್ಮಾನ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: DCM ಆದ ಮರುದಿನವೇ ಬೇನಾಮಿ ಆಸ್ತಿ ಆರೋಪದಿಂದ ಮುಕ್ತ; 1,000 ಕೋಟಿ ಮೌಲ್ಯದ ಆಸ್ತಿ ಪವಾರ್‌ಗೆ ರಿಲೀಸ್!
ಇತ್ತೀಚೆಗೆ ನಡೆದ ಉಪಚುನಾವಣೆ ಸೋಲಿನ ಹಿನ್ನೆಲೆ ಬಗ್ಗೆ ಚರ್ಚೆ ಮಾಡಿದ್ದಾರೆ. ಸೋಲಿಗೆ ಸತ್ಯ ಸಂಶೋಧನಾ ಸಮಿತಿ ರಚನೆ ಮಾಡಿದ್ದೇವೆ. ಸದಾನಂದಗೌಡ ಹಾಗೂ ರಾಜ್ಯದ ಎನ್ ಮಹೇಶ್ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚನೆ ಮಾಡಿದ್ದೇವೆ. ಸತ್ಯ ಸಂಶೋಧನಾ ತಂಡ ಶಿಗ್ಗಾಂವಿ ಹಾಗೂ ಸಂಡೂರಿನಲ್ಲಿ ಭೇಟಿ ನೀಡಿ ಸೋಲಿನ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ ಎಂದರು. ಇದನ್ನೂ ಓದಿ: ನಬಾರ್ಡ್‌ನಿಂದ ರಾಜ್ಯಕ್ಕಲ್ಲ ಇಡೀ ದೇಶಕ್ಕೇ ಹಣ ಕಡಿಮೆಯಾಗಿದೆ, ಸಿಎಂ ಸುಳ್ಳು ಹೇಳಿದ್ದಾರೆ: ಜೋಶಿ