ಹಾವೇರಿ: ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ದೇಶವನ್ನು ಪಾಕಿಸ್ತಾನ (Pakistan) ಮಾಡಲು ಸಹ ಹಿಂದೇಟು ಹಾಕಲ್ಲ ಎಂದು ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಕುರಿತು ಬಿ.ಸಿ.ಪಾಟೀಲ್ (B.C.Patil) ಎಚ್ಚರಿಕೆಯ ಮಾತುಗಳನ್ನಾಡಿದರು.
ಹಾವೇರಿ (Haveri) ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣದ ಬಳಿಕ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ (Sangolli Rayanna) ಮತ್ತು ಶಿವಾಜಿ (Shivaji) ಮಹಾರಾಜರು ಹಿಂದುತ್ವಕ್ಕಾಗಿ ಹೋರಾಟ ಮಾಡಿದ ಎರಡು ಮುತ್ತುಗಳು. ಹೀಗಾಗಿ ಇವರಿಬ್ಬರ ಮೂರ್ತಿಯನ್ನೂ ಪ್ರತಿಷ್ಠಾನ ಮಾಡಿದ್ದೇವೆ. ಸಂಗೊಳ್ಳಿ ರಾಯಣ್ಣನವರ ಸಾಧನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಆದರೆ ರಾಯಣ್ಣ ಪ್ರತಿಮೆ ಮೆರವಣಿಗೆ ವೇಳೆ ಕಲ್ಲು ಹೊಡೆಯುವವರನ್ನು ರಕ್ಷಣೆ ಮಾಡುವ ಪಕ್ಷಗಳಿವೆ. ನಾವೇನು ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಕಲ್ಲು ತೂರಾಟ ಮಾಡಿದವರ ವಿರುದ್ಧ ಗರಂ ಆದರು. ಇದನ್ನೂ ಓದಿ: ಮತ್ತೊಮ್ಮೆ ಸಿಎಂ ಆಗಲೆಂದು ಹರಕೆ- ಸಿದ್ದು ಭಾವಚಿತ್ರ ಹಿಡಿದು ಅಭಿಮಾನಿ ಶ್ರೀಶೈಲ ಪಾದಯಾತ್ರೆ
Advertisement
Advertisement
ನಾನು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ನನಗೆ ಎಲ್ಲಾ ಸಮುದಾಯದ ಜನರು ಮತ ಹಾಕಿದ್ದಾರೆ. ಎಲ್ಲಾ ಸಮುದಾಯದವರನ್ನು ಪ್ರೀತಿಸುವ ಗುಣ ನನ್ನಲ್ಲಿದೆ. ಇಡೀ ಸಮುದಾಯ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಕೊಡುಗೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಸಹಾಯ ಮಾಡಿದ್ದು ನನ್ನ ಪುಣ್ಯ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆ ಹೋಗುವ ವೇಳೆ ಕಲ್ಲು ಹೊಡೆಯುವ ಜನರನ್ನು ರಕ್ಷಣೆ ಮಾಡುವ ಪಕ್ಷಗಳಿವೆ. ಮಂಗಳೂರಿನಲ್ಲಿ (Mangaluru) ಕುಕ್ಕರ್ ಬ್ಲಾಸ್ಟ್ ಮಾಡಿದವರಿಗೆ ರಕ್ಷಣೆಯನ್ನು ನೀಡುತ್ತಿದ್ದಾರೆ. ಮೊದಲು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ನಮ್ಮ ದೇಶವನ್ನು ಪಾಕಿಸ್ತಾನ ಮಾಡಲು ಸಹ ಹಿಂದೇಟು ಹಾಕುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಚಕ್ರವ್ಯೂಹ ಮಾಡಿ ಸೋಲಿಸಿದ್ರು, ರಾಮನಗರದಲ್ಲೂ ಆ ಸಂಚು ನಡೀತಿದೆ- ನಿಖಿಲ್ ಕಿಡಿ
Advertisement
Advertisement
ಕಲ್ಲು ತೂರಾಟ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ನನಗೆ ಇನ್ನೂ ಅದರ ಬಗ್ಗೆ ಮಾಹಿತಿ ಬರಲಿಲ್ಲ. ಪೊಲೀಸ್ ಅಧಿಕಾರಿಗಳ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ. ಅಂತಹ ಕೀಳುಮಟ್ಟಕ್ಕೆ ಬಿ.ಸಿ.ಪಾಟೀಲ್ ಎಂದಿಗೂ ಹೋಗುವುದಿಲ್ಲ. ಅವರು ಶಾಂತರೀತಿಯಿಂದ ಹೋಗಬೇಕು ಎಂದು ಪ್ರಾರಂಭದಲ್ಲಿಯೇ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಏರಿಯಾದಲ್ಲಿ ಹೋಗುವ ಸಮಯದಲ್ಲಿ ಸ್ವಾಗತ ಮಾಡಬೇಕಾದವರು, ಕಲ್ಲು ತೆಗೆದುಕೊಂಡು ಹೆದರಿಸಿ ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: Karnataka Politics: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಪರ್ವ ಏಳು ಬೀಳುಗಳು
ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಪ್ರಾಣಕೊಟ್ಟ ವ್ಯಕ್ತಿ. ಅವರು ಜನಾಂಗ ಅಥವಾ ಧರ್ಮದ ಪರವಾಗಿ ಹೋರಾಟ ಮಾಡಿದವರಲ್ಲ. ರಾಷ್ಟ್ರಕ್ಕಾಗಿ ಪ್ರಾಣ ತೆತ್ತು, ಬ್ರಿಟಿಷರ ವಿರುದ್ಧ ಕತ್ತಿ ಝಳಪಿಸಿದ ವ್ಯಕ್ತಿಗೆ ಅವಮಾನ ಮಾಡಿದ್ದಾರೆ. ಅದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಯಾರೇ ಕೈಮುಗಿದರೂ ಮೋದಿ ವಾಪಸ್ ಕೈಮುಗಿಯುತ್ತಾರೆ- ಕೋಟ ಶ್ರೀನಿವಾಸ ಪೂಜಾರಿ