ಬೆಂಗಳೂರು: ಎಲ್ಲಾ ಜ್ಯಾತ್ಯಾತೀತ ಜನತಾ ದಳದ ಕಾರ್ಯಕರ್ತರಿಗೆ ತ್ಯಾಗದಿಂದ ಬೆಂಬಲ ಕೊಟ್ಟಿದ್ದೇವೆ ಅಂತ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಆರ್ ಆರ್ ನಗರ ಅಭ್ಯರ್ಥಿ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ನವರಿಗೆ ಬಹಳ ಗೌರವದಿಂದ ಹೇಳಿದ್ದೇವೆ. ಬಿಜೆಪಿ ದೂರ ಇಡೋಕೆ ಒಳ್ಳೆಯ ಅವಕಾಶ ಅಂತಾ ಹೇಳಿದ್ದೇವೆ ಅಂದ್ರು.
Advertisement
ನಾವು ಬಹಳ ಉದಾರದಿಂದ ದೊಡ್ಡ ತ್ಯಾಗದಿಂದ ಜೆಡಿಎಸ್ ಗೆ ಸಹಾಯ ಮಾಡಿದ್ದೇವೆ. ಅದಕ್ಕಾಗಿ ನಮ್ಮ ಸಿಟ್ಟಿಂಗ್ ಅಭ್ಯರ್ಥಿ ಗೆಲುವಿಗೆ ಸಹಾಯ ಮಾಡಿ ಅಂತಾ ಕೇಳಿದ್ದೇವೆ. ದೆಹಲಿಗೆ ಹೋಗೋ ವಿಚಾರ ಇನ್ನೂ ಇಲ್ಲ. ಆರ್ ಆರ್ ನಗರ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಅಂತ ಹೇಳಿದ್ರು.
Advertisement
ನಿನ್ನೆಯಷ್ಟೆ ಬಹುಮತ ಗೆದ್ದ ಸರ್ಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಸವಾಲಾಗಿ ಪರಿಣಮಿಸಿದೆ. ಸಂಪುಟದಲ್ಲಿ ಸಿಎಂ ಸ್ಥಾನ ಸೇರಿ 12 ಸ್ಥಾನಗಳು ಜೆಡಿಎಸ್‍ಗೆ, ಉಪ ಮುಖ್ಯಮಂತ್ರಿ ಸೇರಿ 22 ಸ್ಥಾನಗಳು ಕಾಂಗ್ರೆಸ್ಸಿಗೆ ಹಂಚಿಕೆಯಾಗಿವೆ. ಆದ್ರೆ, ಉಭಯ ಪಕ್ಷಗಳಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ದೊಡ್ಡ ಪಟ್ಟಿ ಇದೆ. ಹೀಗಾಗಿ ಜೆಡಿಎಸ್ ಒಂದು, ಕಾಂಗ್ರೆಸ್ 3 ಸಚಿವ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳುವ ಚಿಂತನೆಯಲ್ಲಿವೆ.
Advertisement
ಲೋಕೋಪಯೋಗಿ, ಕಂದಾಯ, ಹಣಕಾಸು, ಜಲ ಸಂಪನ್ಮೂಲ, ಇಂಧನ, ಕೈಗಾರಿಕೆ, ಬೆಂಗಳೂರು ಅಭಿವೃದ್ಧಿ ಈ 5 ಖಾತೆಗಳ ಪೈಕಿ ಐದನ್ನು ತಮಗೆ ಬಿಟ್ಟು ಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಉಪ ಸಭಾಧ್ಯಕ್ಷ ಸ್ಥಾನ ಜೆಡಿಎಸ್‍ಗೆ ಹಂಚಿಕೆಯಾಗಿದ್ದು, ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಉಪಸಭಾಧ್ಯಕ್ಷರಾಗುವ ಸಾಧ್ಯತೆ ಇದೆ.