ವಿಜಯಪುರ: 2025-26ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ. ಹಿಂದುಳಿದವರು, ದಲಿತರಿಗೆ ಕೊಟ್ಟಿದ್ದೇವೆ. ಮುಸ್ಲಿಂ ಬಜೆಟ್ ಎನ್ನುವವರ ಕಣ್ಣು ಹಳದಿಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಮುಸ್ಲಿಮರಿಗೆ ನೀಡಿದ್ದು ಮಾತ್ರ ಯಾಕೆ ಕಾಣುತ್ತದೆ? ಬಿಜೆಪಿಯವರು ನಾಲ್ಕು ವರ್ಷ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಿಯಾಂಕ್ ಖರ್ಗೆ (Priyank Kharge) ಸರಿಯಾಗಿ ಹೇಳಿದ್ದಾರೆ ಎಂದರು.ಇದನ್ನೂ ಓದಿ: ನನ್ನ ಜೀವನವು ಕೋಟ್ಯಂತರ ತಾಯಂದಿರ ಆಶೀರ್ವಾದ: ಲಕ್‌ಪತಿ ದೀದಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತು
ಹಲಾಲ್ ಬಜೆಟ್ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇ ಹಲಾಲ್ ತಿನ್ನುತ್ತಿರುತ್ತಾರೆ ಎಂದು ಟಾಂಗ್ ಕೊಟ್ಟರು.
ಇನ್ನೂ ನಾಳೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಕುರಿತು ಮಾತನಾಡಿದ ಅವರು, ಭಾರತ ತಂಡ ಫೈನಲ್‌ನಲ್ಲಿ ಗೆಲ್ಲಲಿದೆ. ಇದೀಗ ಟೀಂ ಇಂಡಿಯಾ ಒಳ್ಳೆಯ ಫಾರ್ಮ್ನಲ್ಲಿದೆ. ತಂಡದಲ್ಲಿ ಯಾರು ಒಳ್ಳೆಯ ಆಟ ಆಡುತ್ತಾರೆ ಎನ್ನುವುದರ ಮೇಲೆ ಗೆಲುವು ನಿಂತಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.ಇದನ್ನೂ ಓದಿ: ಮೈಸೂರು | ಲವ್ ಜಿಹಾದ್‌ಗೆ ನಕಲಿ ವಿಳಾಸ ಬಳಕೆ – ಹಿಂದೂ ಯುವತಿ ಮದ್ವೆಗೆ ಅನ್ಯಕೋಮಿನ ಯುವಕ ಯತ್ನ