ಚಿತ್ರದುರ್ಗ: ನಾವು ಶೆಡ್‌ಗೆ ಹೋಗಿಲ್ಲ, ನಟ ದರ್ಶನ್ ಅವರನ್ನು ಭೇಟಿಯಾಗಿಲ್ಲ ಎಂದು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಸ್ಪಷ್ಟಪಡಿಸಿದ್ದಾರೆ.
ಬೇಲ್ ಮೇಲೆ ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಕುಟುಂಬ ಭೇಟಿಯಾಗಿದ್ದು, ಹಣ ಪಡೆದು ರಾಜಿಯಾಗಿದೆ. ಹೊಸ ಕಾರನ್ನು ಆ ಕುಟುಂಬ ಬುಕ್ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಯೊಂದು ಬಾರಿ ವೈರಲ್ ಆಗಿತ್ತು. ಹೀಗಾಗಿ ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾವು ದರ್ಶನ್ ಭೇಟಿಯಾಗಿಲ್ಲ, ಅವರು ಸಹ ನಮ್ಮನ್ನು ಭೇಟಿಯಾಗಿಲ್ಲ. ಅಲ್ಲದೇ ನಾವು ಯಾವುದೇ ಕಾರು ಖರೀದಿಸಿಲ್ಲ. ನಮಗೆ ಹಳೆಯ ಬೈಕ್ ರಿಪೇರಿ ಮಾಡಿಸಲು ಸಹ ದುಡ್ಡಿಲ್ಲ. ಯಾವ ಶೆಡ್‌ಗೂ ಹೋಗಿಲ್ಲ, ಹಣವನ್ನೂ ಪಡೆದಿಲ್ಲ. ಆದರೆ ಫೇಸ್‌ಬುಕ್ಕೊ ಅಥವಾ ಫೇಕ್ ಬುಕ್ಕೊ ನಮಗೆ ಗೊತ್ತಿಲ್ಲ. ನಾವೆಲ್ಲರೂ ರೇಣುಕಾಸ್ವಾಮಿ ಸಾವಿಂದ ಸಾಕಷ್ಟು ನೊಂದಿದ್ದೇವೆ. ದಯವಿಟ್ಟು ಆ ರೀತಿ ವದಂತಿ ಹರಡಿಸಬೇಡಿ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – 8ನೇ ವೇತನ ಆಯೋಗ ರಚನೆಗೆ ಸಂಪುಟ ಅನುಮೋದನೆ
Advertisement
Advertisement
ಹಾಗೆಯೇ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ನ್ಯಾಯಯುತ ತನಿಖೆ ನಡೆಸಿರುವ ಸರ್ಕಾರವು, ದರ್ಶನ್‌ಗೆ ಬೇಲ್ ಸಿಕ್ಕಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಿರುವುದನ್ನು ನಮ್ಮ ಕುಟುಂಬದಿಂದ ಸ್ವಾಗತಿಸುತ್ತೇವೆ. ಈ ಕೇಸಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಭರವಸೆ ಇದೆ. ಜೊತೆಗೆ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸರ್ಕಾರದಿಂದ ಕೆಲಸ ನೀಡಲು ಸಾಧ್ಯವಿಲ್ಲವೆಂದು ನಮಗೆ ಹಿಂಬರಹ ಬಂದಿದೆ. ಇದು ನಮಗೆ ದೊಡ್ಡ ಆಘಾತ ತಂದಿದೆ. ಹೀಗಾಗಿ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ನಮ್ಮ ಸೊಸೆಗೆ ಸರ್ಕಾರಿ ನೌಕರಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ನಾನು ಕ್ಷೇಮವಾಗಿದ್ದೇನೆ: ಚೂರಿ ಇರಿತದ ಬಳಿಕ ಸೈಫ್ ಅಲಿ ಖಾನ್ ಫಸ್ಟ್ ರಿಯಾಕ್ಷನ್
Advertisement
ಯಾಕೆ ಈ ರೀತಿ ವದಂತಿ ಹರಡಿಸುತ್ತಿದ್ದಾರೆ ಎಂದು ನಾನು ಕಾನೂನು ಪಂಡಿತರನ್ನು ಕೇಳಲು ಇಚ್ಚಿಸುತ್ತೇನೆ. ಅವರು ದರ್ಶನ್ ಅಭಿಮಾನಿಗಳೋ ಮತ್ಯಾರೊ ನಮಗೆ ಗೊತ್ತಿಲ್ಲ. ಆದರೆ ಮತ್ತೊಮ್ಮೆ ಈ ರೀತಿ ವದಂತಿ ಹರಡಿಸಬೇಡಿ. ಒಂದು ವೇಳೆ ದರ್ಶನ್ ಭೇಟಿಗೆ ಧಾವಿಸಿದರೆ ಹಿತೈಷಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಇಂತಹ ಘಟನೆಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ – ಬೀದರ್ ದರೋಡೆ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ
Advertisement
ಇದೇ ವೇಳೆ ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ, ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆಗೆ ಫಾಸ್ಟ್ ಟ್ರಾಕ್ ಸಮಿತಿ ರಚಿಸುವಂತೆ ಒತ್ತಾಯಿಸಿದರು. ಅಲ್ಲದೇ ಫೇಸ್‌ಬುಕ್‌ಗಳಲ್ಲಿ ನಮ್ಮ ಕುಟುಂಬದ ಬಗ್ಗೆ ಸುಳ್ಳು ಸಂದೇಶ ಕಳುಹಿಸದಂತೆ ಮನವಿ ಮಾಡುದರು. ರೇಣುಕಾಸ್ವಾಮಿ ಸಾವಿಂದ ನೊಂದಿರುವ ಸಹನಾಗೆ ಸರ್ಕಾರದಿಂದ ಉದ್ಯೋಗ ನೀಡಬೇಕು. ರೇಣುಕಾಸ್ವಾಮಿ ಮಗು ಹಾಗೂ ತಾಯಿಗೆ ಜೀವನ ಸಾಗಿಸಲು ಸರ್ಕಾರ ಸಹಾಯ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಪೆಟ್ರೋಲ್ ಸುರಿದು ಟೆಕ್ಕಿ ಯುವತಿ ಆತ್ಮಹತ್ಯೆ
ಈ ರೀತಿಯ ಫೇಕ್ ಸುದ್ದಿಯಿಂದ ಮನನೊಂದಿದ್ದೇವೆ. ದಯವಿಟ್ಟು ಫೇಸ್‌ಬುಕ್‌ನಲ್ಲಿ ವದಂತಿ ಹರಡಿಸಬೇಡಿ. ಜೊತೆಗೆ ಸಿಎಂ, ಡಿಸಿಎಂ ತನಿಖೆಗೆ ಸಹಕಾರ ನೀಡಿದ್ದು, ಸರ್ಕಾರದಿಂದ ನ್ಯಾಯ ಸಿಗುವ ಭರವಸೆ ಇದೆ. ಜೊತೆಗೆ ಗಣ್ಯರು ನೀಡಿರುವ ನೆರವಿನ ಹಣದಿಂದ ರೇಣುಕಾಸ್ವಾಮಿ ಪತ್ನಿ ಸಹನ ಹಾಗೂ ಕಾಶೀನಾಥ್ ಶಿವನಗೌಡ್ರು ಕುಟುಂಬದ ಮಧ್ಯೆ ಬಿರುಕು ವದಂತಿ ವಿಚಾರಕ್ಕೂ ಸ್ಪಷ್ಟನೆ ನೀಡಿದ್ದು, ಸೊಸೆಯಾದ ಸಹನ ಕುಟುಂಬ, ರೇಣುಕಾಸ್ವಾಮಿ ಕುಟುಂಬದ ಮಧ್ಯೆ ಯಾವುದೇ ವೈಮನಸ್ಸು ಇಲ್ಲ. ಎಲ್ಲಾ ಕುಟುಂಬಗಳು ಒಟ್ಟಾಗಿವೆ. ಸಾಂಪ್ರದಾಯಿಕ ವಾ ಗಿ ಮೊಮ್ಮಗು, ಸೊಸೆ ತವರುಮನೆಯಲ್ಲಿದ್ದಾರೆ. 5 ತಿಂಗಳು ಕಳೆದ ಬಳಿಕ ನಮ್ಮ ಮನೆಗೆ ಬರಲಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಸ್ಥಾನದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ತಂತ್ರ.. ಈಗ ಡಿಕೆಶಿ ಒಬ್ಬಂಟಿ: ಆರ್.ಅಶೋಕ್ ಲೇವಡಿ