ಬೆಂಗಳೂರು: ಜಾತಿಗಣತಿಗೆ (Caste Census) ನಮ್ಮ ವಿರೋಧ ಇಲ್ಲ. ನಮಗೆ ಕೆಲವು ಆತಂಕಗಳಿವೆ ಎಂದು ಸಚಿವ ಎಂ.ಬಿ.ಪಾಟೀಲ್ (M.B.Patil) ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂತರಾಜು ಕಮಿಟಿ ವಿಚಾರದಲ್ಲಿ ಲಿಂಗಾಯತ ಸಮುದಾಯದ ನಿಲುವಿನ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ನಾವು ವಿರೋಧ ವ್ಯಕ್ತಪಡಿಸಿಲ್ಲ. ನಮಗೆ ಕೆಲ ಆತಂಕಗಳಿವೆ ಅಷ್ಟೆ. ಈ ವಿಚಾರದಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿ ಬಂದ ಬಳಿಕವೇ ಅನುಷ್ಠಾನಕ್ಕೆ ತೀರ್ಮಾನ – ಶಿವರಾಜ್ ತಂಗಡಗಿ
Advertisement
Advertisement
ಲಿಂಗಾಯತ ಸಮುದಾಯದಲ್ಲಿ 40 ಪ್ರಮುಖ ಉಪಜಾತಿಗಳಿವೆ. ಲಿಂಗಾಯತ ಗಾಣಿಗ ಅಂತಿದ್ದರೆ, ಹಿಂದೂ ಗಾಣಿಗ ಅಂತಾ ಬರೆಸಿರುತ್ತಾರೆ. ಸಾದರ ಸಮುದಾಯ, ಹಿಂದೂ ಸಾದರ ಅಂತ ಬರೆಸಿರುತ್ತಾರೆ. ಹೀಗೆ ಉಪಜಾತಿಗಳನ್ನು ಅವರ ಉಪಜಾತಿಯ ಹೆಸರಿನಲ್ಲಿ ಬರೆಸಿರುತ್ತಾರೆ. ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳನ್ನು ಒಂದೇ ಕಡೆ ತನ್ನಿ ಎನ್ನುವುದು ನಮ್ಮ ಬೇಡಿಕೆ. ಜಾತಿಗಣತಿಗೆ ನಮ್ಮ ವಿರೋಧ ಇಲ್ಲ. ನಾವು ಕೇಳ್ತಿರೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಉಪಜಾತಿಗಳನ್ನು ಪ್ರತ್ಯೇಕವಾಗಿ ಬರೆದಿರುವುದನ್ನು ಸರಿಪಡಿಸಿ ಎಂದು ಹೇಳಿದ್ದೇವೆ. ಒಕ್ಕಲಿಗ ಸಮುದಾಯದಲ್ಲೂ ಇದೇ ಸಮಸ್ಯೆ ಇದೆ. ಅವರದ್ದೂ ಸರಿಪಡಿಸಲಿ. ಇದು ಸೆನ್ಸಸ್ (ಜಾತಿಜನಗಣತಿ) ಅಲ್ಲ. ಸೆನ್ಸಸ್ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ. ಇದೊಂದು ಸಮೀಕ್ಷೆ ಆಗಿದೆ. ಅದಕ್ಕೆ ಸ್ಯಾಂಪಲ್ಸ್ ಇರ್ತವೆ. ಇದಕ್ಕೆ ನಮ್ಮ ವಿರೋಧ ಇಲ್ಲ. ಎಲ್ಲಾ ಉಪ ಸಮುದಾಯಗಳನ್ನು ಕೌಂಟ್ ಮಾಡಿ ಒಂದೇ ಹೆಸರಿನಲ್ಲಿ ತನ್ನಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿಯಿಂದ ಲಿಂಗಾಯತರು, ಒಕ್ಕಲಿಗರ ಪ್ರಾಬಲ್ಯ ಕಡಿಮೆಯಾಗಲ್ಲ: ರಾಯರೆಡ್ಡಿ
ವರದಿ ಕೊಡುವ ಮುಂಚೆಯೇ ಇದನ್ನು ಸರಿಪಡಿಸಬೇಕು ಎಂಬ ಬೇಡಿಕೆ ಇದೆ. ಜಾತಿಗಣತಿಗೆ ಆಗ್ರಹಿಸಿ ಅಹಿಂದದವರು ಮಾಡ್ಲಿ, ದಲಿತ ಸಮುದಾಯ ಮಾಡ್ಲಿ, ಲಂಬಾಣಿ ಸಮುದಾಯ ಮಾಡ್ಲಿ, ಪರಿಶಿಷ್ಟ ಪಂಗಡ ಎಲ್ಲ ಸಮುದಾಯದವರು ಮಾಡ್ಲಿ ತಪ್ಪೇನಿಲ್ಲ. ಸಣ್ಣ ಸಣ್ಣ ಸಮುದಾಯಗಳು ಯಾಕೆ ಮಾಡಬಾರದು? ಮಾಡಲಿ ಎಂದಿದ್ದಾರೆ. ಜಾತಿಗಣತಿ ಲೋಕಸಭೆ ಮೇಲೆ ಪರಿಣಾಮ ಬೀರುವ ವಿಚಾರದಲ್ಲಿ ಸಮಸ್ಯೆ ಸರಿಪಡಿಸಿದರೆ ಯಾಕೆ ಪರಿಣಾಮ ಬೀರುತ್ತೆ? ಮುಖ್ಯಮಂತ್ರಿಗಳ ಮೇಲೆ ನಮಗೆ ವಿಶ್ವಾಸ ಇದೆ. ಸರಿಪಡಿಸುತ್ತೇವೆ ಅಂತಾ ಹೇಳಿದ್ದಾರೆ ಎಂದು ಮಾತನಾಡಿದ್ದಾರೆ.