ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಇಮ್ರಾನ್‍ಖಾನ್ ಸದ್ಯ ದೇಶದ ಆಡಳಿತ ನಡೆಸಲು ದುಡ್ಡಿಲ್ಲ ಎಂದು ಹೇಳುವ ದೇಶದ ಆರ್ಥಿಕ ಪರಿಸ್ಥಿತಿಯ ನೈಜತೆಯನ್ನು ಬಿಚ್ಚಿಟ್ಟಿದ್ದಾರೆ.
ಇಸ್ಲಾಮಾಬಾದ್‍ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಈ ಹಿಂದಿನ ಸರ್ಕಾರ ಆಡಳಿತ ವೈಖರಿಯನ್ನು ಟೀಕೆ ಮಾಡಿದರು. ಅಲ್ಲದೇ ದೇಶಕ್ಕೆ ನಷ್ಟವನ್ನು ಉಂಟು ಮಾಡುವ ಯೋಜನೆಗಳನ್ನು ಮಾತ್ರ ಜಾರಿಗೆ ಮಾಡಲಾಗಿದೆ. ದೇಶದ ಯುವ ಜನ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶವನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ. ಸದ್ಯ ಸರ್ಕಾರ ಈ ಸಾಲದ ಸುಳಿಯಿಂದ ಹೊರ ಬರಲು ಪ್ರಯತ್ನಿಸಬೇಕಿದೆ. ಇದಕ್ಕಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳುವ ಮೂಲಕ ದೇಶದ ಸ್ಥಿತಿಯನ್ನು ಬದಲಿಸಬೇಕಿದೆ ಎಂದು ಹೇಳಿದರು.
ಸರ್ಕಾರ ಜನರ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ಜನರು ಸರ್ಕಾರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಜನರು ಸರ್ಕಾರ ಒಟ್ಟಾಗಿ ನಡೆದರೆ ಸಮಸ್ಯೆ ಬಗೆಹರಿಸಬಹುದು. ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ದೇವರೇ ಈ ಬಿಕ್ಕಟ್ಟನ್ನು ಸೃಷ್ಟಿ ಮಾಡಿರಬಹುದು ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಸ್ನೇಹಿತ ಉದಾಹರಣೆ ನೀಡಿರುವ ಇಮ್ರಾನ್ ಖಾನ್, ನನ್ನ ಕಾಲೇಜು ದಿನಗಳಲ್ಲಿ ತರಗತಿಯಲ್ಲಿ ಮೊದಲು ಬರುತ್ತಿದ್ದ ಗೆಳೆಯನ್ನು ಭೇಟಿ ಮಾಡಿದ್ದೆ. ಆತ ಸದ್ಯ ನಾಗರಿಕ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ತನ್ನ ಮಕ್ಕಳ ಶಾಲೆಯ ಶುಲ್ಕ ಭರಿಸಲು ಕಷ್ಟಪಡುತ್ತಿದ್ದಾನೆ ಎಂದು ಹೇಳಿದರು. ಅಲ್ಲದೇ ಸರ್ಕಾರಿ ಅಧಿಕಾರಿಗಳು ಕೂಡ ಜನರ ಕಷ್ಟ ನಿವಾರಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv