ಬೀದರ್: ಪಿಎಸ್‍ಐ ಕೇಸ್‍ನಲ್ಲಿ (PSI case) ನಾವು ಯಾರನ್ನು ಬಿಟ್ಟಿಲ್ಲ, ಡಿಐಜಿ ಮುಟ್ಟುವುಕ್ಕೆ ಸಿದ್ದರಾಮಯ್ಯಗೆ (Siddaramaiah) ಧಮ್ ಇದ್ಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರಶ್ನಿಸಿದ್ದಾರೆ.
Advertisement
ಬೀದರ್ (Bidar) ಔರಾದ್‍ನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ (BJP Sankalpa Yatra) ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ಬಳ್ಳಾರಿ ಪಾದಯಾತ್ರೆ ವೇಳೆ ಎಸ್‍ಸಿ, ಎಸ್‍ಟಿಗೆ ಮೀಸಲಾತಿ ಕಾಂಗ್ರೆಸ್ (Congress) ಕೊಡುಗೆ ಎಂದು ರಾಹುಲ್ (Rahul Gandhi)ಹೇಳಿದ್ದಾರೆ. ಆದರೆ ನಿಮಗೆ ಆತ್ಮಸಾಕ್ಷಿ ಇರಬೇಕಲ್ಲ, ಗಂಡು ಮಗು ಹಡೆದರೆ ಪಕ್ಕದ ಮನೆಯವರು ಪೇಡಾ ಹಂಚುತ್ತಿದ್ದರಂತೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಹಣ ಕೊಟ್ರೆ ನೌಕರಿಗಳು ಸಿಗುತ್ತದೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ, ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಎಲ್ಲಾ ನೇಮಕಾತಿ ದಾಖಲೆಗಳನ್ನು ರಾಹುಲ್‍ಗೆ ಕಳಿಸಿ ಕೊಡುತ್ತೇನೆ, ಏನು ಮಾಡುತ್ತಾರೋ ನೋಡೋಣ. ಇದು ನನ್ನ ಸವಾಲು, ಟೀಚರ್ ನೇಮಕಾತಿಯಲ್ಲಿ ಅರ್ಜಿ ಹಾಕದೇ ನೌಕರಿ ಕೊಡುವ ಕೆಲಸ ಕಾಂಗ್ರೆಸ್‍ನಲ್ಲಿ ನಡೆದಿದ್ದು, ಪೊಲೀಸ್ ನೇಮಕಾತಿಯಲ್ಲಿ ನಾವು ಈಗಾಗಲೇ 20 ಜನರನ್ನು ಅರೆಸ್ಟ್ ಮಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಒಂದೇ ಜಡೆ ಹಾಕಿದ್ದಕ್ಕೆ ವಿದ್ಯಾರ್ಥಿನಿಯನ್ನು ಕ್ಲಾಸ್‍ನಲ್ಲಿ ಕೂಡಿ ಹಾಕಿ ಕೂದಲು ಕತ್ತರಿಸಿದ್ರು!
Advertisement
ಬೀದರ್‌ನಲ್ಲಿ ಕಾಂಗ್ರೆಸ್ ಕಾಲದಲ್ಲಿ ಮಾಡುವುದಕ್ಕೆ ಸಾಧ್ಯವಾಗದ ಅಭಿವೃದ್ಧಿಯನ್ನು ನಾವು ಮಾಡಿದ್ದು, ಬಸವಕಲ್ಯಾಣ ಸಮಗ್ರ ಅಭಿವೃದ್ಧಿಗೆ 500 ಕೋಟಿ, ಬೀದರ್ ಹಾಗೂ ಕಲಬುರಗಿ ಕೋಟೆಗಳಿಗೆ 20 ಕೋಟಿ ನೀಡಿದ್ದೇವೆ. ಈಗಾ 50 ಕೋಟಿ ಬಜೆಟ್‍ನಲ್ಲಿ ಬೀದರ್‌ನಲ್ಲಿ ಸಿಪೆಟ್ ಕಾಮಗಾರಿ ಪೂಜೆ ಕೂಡಾ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅವರಮ್ಮ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ವೋ ಗೊತ್ತಿಲ್ಲ- ಸಿ.ಟಿ ರವಿ
ಕಾಂಗ್ರೆಸ್ ಶಾಸಕರು ಎಲ್ಲರೂ ಜೊಲ್ಲು ಸುರಿಸುತ್ತಿದ್ದು ಹಾಸಿಗೆಯಲ್ಲಿ, ದಿಂಬಿನಲ್ಲಿ ಸೇರಿ ಸಿಕ್ಕ ಸಿಕ್ಕಲ್ಲಿ ಹಣ ಹೊಡೆದಿದ್ದಾರೆ. ಕಾಂಗ್ರೆಸ್ ಅಧಿಕಾರಿ ಬಂದಾಗ ಕಬ್ಬಿನಂತೆ ಇರುತ್ತಾರೆ. ಅಧಿಕಾರ ಹೋದಾಗ ಹತ್ತಿ ಕಟ್ಟಿಗೆ ಇದ್ದಂತೆ, ನಾವು ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಈ ಬಾರಿ ಮತ ಕೇಳುತ್ತೇವೆ ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.