ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವರಿಗೆ ಭದ್ರತೆ ಹೆಚ್ಚಿಸಿದ್ದೇವೆ. ಈ ಬಗ್ಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಧರ್ಮ ಪಶ್ಚಾತ್ತಾಪ ವಿಚಾರದಲ್ಲಿ ಸಿದ್ದು ಯೂಟರ್ನ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸ್ವಾಮೀಜಿ ಮತ್ತು ಸಿದ್ದರಾಮಯ್ಯ ನಡುವೆ ನಡೆದಿರುವ ಸಂಭಾಷಣೆ ಇದ್ದಾಗಿದ್ದು, ಆ ಬಗ್ಗೆ ನಾನು ಮಾತನಾಡಲ್ಲ. ಸಿದ್ದರಾಮಯ್ಯ ನಿನ್ನೆ ಒಂದು. ಇಂದು ಒಂದು ಮಾತನಾಡಿದ್ದಾರೆ. ಸತ್ಯ ಜಗತ್ತಿಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 107ನೇ ಜನ್ಮದಿನಾಚರಣೆ ಸಂಬಂಧ ವಿಧಾನಸೌಧದ ದೇವರಾಜ ಅರಸು ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಇಂದು ಕರ್ನಾಟಕ ಕಂಡಂತಹ ಧೀಮಂತ ನಾಯಕ, ಹಿಂದುಳಿದವರ ನಾಯಕ ದೇವರಾಜ ಅರಸ್ ಅವರು ತಮ್ಮದೇ ಆದಂತಹ ಸೇವೆಯನ್ನ ಮಾಡಿ ಜನಮನ ಗೆದ್ದಿದ್ದಾರೆ. ಅವರಿಗೆ ಬಡವರ ಬಗ್ಗೆ ಕಳಕಳಿ ಇತ್ತು, ಹಿಂದುಳಿದವರ ನಾಯಕ ಅವರಾಗಿದ್ದರು. ಹಿಂದುಳಿದ ವರ್ಗದವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇವೆ ಮಾಡಿದವರು. ಭೂ ಸುಧಾರಣೆ ಬಗ್ಗೆ ಅತೀ ಮೊದಲು ಚಿಂತನೆ ಮಾಡಿ ಕಾರ್ಯರೂಪಕ್ಕೆ ತಂದ ಶ್ರೇಯಸ್ಸು ಅವರಗಿದೆ ಎಂದರು.
Advertisement
Advertisement
ಭೂ ಸುಧಾರಣೆ ಕಾಯ್ದೆಯಿಂದ ಉಳುವುವನೇ ಭೂಮಿಯ ಓಡೆಯ ಅಂತಾ ಕಾನೂನು ಮಾಡಿ ಅನುಷ್ಠಾನಕ್ಕೆ ತಂದವರು. ಜನತಾ ಮನೆ, ವಿದ್ಯತ್ ರಿಯಾಯತಿ ಮಾಡಿ ಬಡವರಿಗೆ ನೆರವಾದರು. ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯನ್ನ ಸಬಲೀಕರಣ ಮಾಡಿದರು. ರಾಜಕೀಯ ರಂಗದಲ್ಲಿ ಎತ್ತರಕ್ಕೆ ಸ್ಥಾನ ತೆಗೆದುಕೊಂಡು ಹೋದವರು ಎಂದು ಹೇಳಿದರು. ಇದನ್ನೂ ಓದಿ: Bigg Boss OTT- ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್: ಕಣ್ಣೀರಿಟ್ಟ ದೊಡ್ಮನೆ
ಯಾರಿಗಾಗಿ ಸಂಘಟನೆ ಮಾಡಿದರು, ಅವರಿಗಾಗಿ ಹೋರಾಟ ಮಾಡಿದರೋ ಕೊನೆಗೆ ಅವರೇ ಅವರ ಜೊತೆ ನಿಲ್ಲಲಿಲ್ಲ, ಇದು ದುರಂತ. ಆದರೆ ದೇವರಾಜ ಅರಸು ಮಹತ್ವ ಇನ್ನು ಕಡಿಮೆಯಾಗಿಲ್ಲ. ಹತ್ತು ಹಲವು ಕಾರ್ಯಕ್ರಮಗಳನ್ನ ನಾವೂ ಕೂಡ ಮಾಡುತ್ತಾ ಅವರ ಹಾದಿಯಲ್ಲಿ ಸಾಗುತ್ತ ನಿಜವಾದ ನಮನಗಳನ್ನ ಮಾಡುತ್ತಿದ್ದೇವೆ. ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಎಲ್ಲರೂ ಒಳಗೊಂಡಂತೆ ಮಾಡಬೇಕು ಅನ್ನುವ ಅವರ ಧ್ಯೇಯೆಯೊಂದಿಗೆ ನಾವೂ ನಡೆಯುತ್ತೇವೆ ಎಂದು ತಿಳಿಸಿದರು.
ಈ ವೇಳೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಸಚಿವ ಅಶ್ವತ್ಥನಾರಾಯಣ್ ಸೇರಿದಂತೆ ಕೆಲ ಶಾಸಕರು, ಪರಿಷತ್ ಸದಸ್ಯರು ಉಪಸ್ಥಿತರಾದರು.