ಬಾಗಲಕೋಟೆ: ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ನಮಗೆ ಅನಿಸುತ್ತಿಲ್ಲ. ಇಂದು ಅವರ ಅವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಸರ್ಕಾರ ರಚನೆ ಮಾಡಲು ಹೊರಟ್ಟಿದ್ದೇವೆ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಜನರಲ್ಲಿ ಆಪರೇಷನ್ ಕಮಲದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಬಿಂಬಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಅನ್ನೋದು ನಾಡಿನ ಜನರ ಅಭಿಪ್ರಾಯವಾಗಿದೆ. ಇದೇ 18ರಂದು ಮಂಗಳವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಶೇಷ ಶಾಸಕಾಂಗದ ಸಭೆಯನ್ನು ಕರೆದಿದ್ದಾರೆ. ಸಭೆಗೆ ಬಿಜೆಪಿಯ ಎಲ್ಲ ಶಾಸಕರು ಹಾಜರಾಗಲಿದ್ದೇವೆ. ಅಲ್ಲಿ ಏನು ಆಗುತ್ತೆ ಎಂಬವುದನ್ನು ಸಭೆಯ ಬಳಿಕ ತಿಳಿಸಲಾಗುವುದು ಎಂದು ಹೇಳಿದರು.
Advertisement
ಒಂದು ವೇಳೆ ನಮ್ಮ ಶಾಸಕರು ರೆಸಾರ್ಟ್ ಗೆ ಹೋದ್ರೆ ನಾನು ಬಾಗಲಕೋಟೆ ಬಿಟ್ಟು ಎಲ್ಲಿಯೂ ಹೋಗಲ್ಲ. ನಾನು ಎಂದಿಗೂ ಬಿಜೆಪಿ ಬಿಡುವನಲ್ಲ. ಮ್ಮಲ್ಲಿರುವ 104 ಶಾಸಕರಲ್ಲಿ ಒಬ್ಬರನ್ನ ಟಚ್ ಮಾಡಲಿ ನೋಡೋಣ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದ್ರು. ಮಂಗಳವಾರದ ಶಾಸಕಾಂಗದ ಸಭೆಯ ಬಳಿಕ ಸರ್ಕಾರ ರಚನೆಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv