ಕೋಲಾರ: 2-3 ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಕೋಲಾರದ ಗಾಂಧಿವನದ ಬಳಿ ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಫಲಾನುಭವಿಗಳು ಸಾಕಷ್ಟು ಜನರು ಇದ್ದೇವೆ. ಸ್ಥಾನಗಳನ್ನು ಪಡೆದುಕೊಂಡಿದ್ದೇವೆ, ಸಂಪನ್ಮೂಲ ಸಹ ಪಡೆದಿದ್ದೇವೆ. ನಾನು ರಾಜಕೀಯ ಹಿನ್ನೆಲೆಯಿಂದ ಬಂದಿರುವ ಕುಟುಂಬದವನಲ್ಲ. ಆದರೂ ನಾನು 2 ಬಾರಿ ಸ್ಪೀಕರ್ ಆಗಿದ್ದೇನೆ. ಹೀಗಾಗಿ ನಾನು ಇದರ ಋಣ ತೀರಿಸಿಕೊಳ್ಳಲು ಈ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟೀಕರಿಸಿದ್ದಾರೆ. ಇದನ್ನೂ ಓದಿ: ಭೂಮಿ ಪೂಜೆ ವೇಳೆ ಶಾಸಕರ ಎದುರೇ JDS, BJP ಮಾರಾಮಾರಿ – ಮುರಿತು ಕಾರ್ಯಕರ್ತನ ಕೈ
ನನ್ನ ಹೇಳಿಕೆಯನ್ನು ಅರ್ಥೈಸಿಕೊಳ್ಳದೆ ಏನೇನೋ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಕೆಂಡಾಮಂಡಲರಾದ ರಮೇಶ್ ಕುಮಾರ್, ಕೋಲಾರದಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಇದ್ದೀವಿ. 2 ಕಡೆ ಬೇರೆ ಬೇರೆ ಪ್ರತಿಭಟನೆ ಮಾಡಿದ್ದು, ಸೋನಿಯಾ ಗಾಂಧಿಗೆ ಜೈಕಾರ ಹಾಕಿದ್ದೇವೆ. ದೇಶದಲ್ಲಿ ಬಿಜೆಪಿಯವರು ದೇಶಕ್ಕಾಗಿ ರಕ್ತ ಚೆಲ್ಲಿದ್ದಾರೆಯೇ? ಗಾಂಧಿಯನ್ನು ಕೊಂದಿದ್ದು ಯಾರು? ಇಡಿಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್
ನೋಟ್ ಬ್ಯಾನ್ ಮಾಡಿದ ಮೋದಿಯವರು ಮಾಡಿದ್ದೇನು? 1 ಸಾವಿರ ರೂ.ಯ ನೋಟನ್ನು ಬ್ಯಾನ್ ಮಾಡಿ, 2 ಸಾವಿರ ರೂ. ನೋಟ್ ತಂದಿದ್ದಾರೆ. 1 ಸಾವಿರ ದೊಡ್ಡದ ಅಥವಾ 2 ಸಾವಿರ ದೊಡ್ಡದ? ನನಗೆ ನಮ್ಮ ಮೇಷ್ಟ್ರು ಹೊಡೆದು ಲೆಕ್ಕ ಹೇಳಿಕೊಟ್ಟಿದ್ದಾರೆ. ನನಗೆ ಲೆಕ್ಕ ಬರುತ್ತದೆ. ನಿನಗೆ ಬರಲ್ವಾ ಮೂರ್ಖ ಎಂದು ಮೋದಿಗೆ ಛೇಡಿಸಿದರು.