ಧಾರವಾಡ: ಪಾಕಿಸ್ತಾನ ನಮ್ಮ ಪಾಲಿಗೆ ಮನೆ ಮುಂದೆ ಬಂದು ನಿಲ್ಲುವ ಬೀದಿ ನಾಯಿ ಇದ್ದಂತೆ, ಮನೆ ಮುಂದೆ ನಾಯಿ ಬಂದು ನಿಂತಾಗ ಹೊಡೆದು ಓಡಿಸುತ್ತೇವೆ. ಹಾಗೆಯೇ ಪಾಕಿಸ್ತಾನವನ್ನು ನಾವು ನಾಲ್ಕು ಸಲ ಯುದ್ಧದಲ್ಲಿ ಹೊಡೆದು ಓಡಿಸಿದ್ದೇವೆ ಎಂದು ಖ್ಯಾತ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, 1947 ಮೊದಲ ಯುದ್ಧದಲ್ಲಿ, 1965 ಎರಡನೇ ಯುದ್ಧದಲ್ಲೂ ಪಾಕಿಸ್ತಾನವನ್ನು ಹೊಡೆದು ಓಡಿಸಿದ್ದೇವೆ. ಇನ್ನೂ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಕಾಲಿಗೆ ಬಿದ್ದು ಬಿಟ್ಟುಬಿಡಿ ಎಂದು ಕೇಳಿದ್ದರು. ಆ ರೀತಿಯಲ್ಲಿ ಅವರನ್ನು ಓಡಿಸಿದ್ದೇವೆ. ಇನ್ನು ಐದನೇ ಸಲ ಕೂಡ ಹೊಡೆದು ಹಾಕುತ್ತೇವೆ ಬಿಡಿ ಎಂದರು. ನಾಲ್ಕು ಸಲ ಬೀದಿನಾಯಿಯಂತೆ ಓಡಿಸಿದ್ದೇವೆ, ಈಗಲೂ ಪಾಕ್ ಓಡಿಸುವುದು ಬಹಳ ಕಷ್ಟ ಅಲ್ಲ. ಅದಕ್ಕೆ ಮತ್ತೊಂದು ಯುದ್ಧ ಆಗಬೇಕು. ಇನ್ನು ಯುದ್ಧದಿಂದ ನಮ್ಮ ದೇಶಕ್ಕೂ ನಷ್ಟ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಭಯೋತ್ಪಾದನೆ, ಕತ್ತೆ ರಫ್ತು ಇವೆರಡೇ ಪಾಕ್‍ಗೆ ಗೊತ್ತಿರೋದು: ಸೂಲಿಬೆಲೆ ಕಿಡಿ
Advertisement
Advertisement
ಭಾರತದಲ್ಲಿ ಇದ್ದು ಪಾಕಿಸ್ತಾನ್ ಜಿಂದಾಬಾದ್ ಅನ್ನೋರನ್ನು ಅಲ್ಲಿಗೆ ಕಳುಹಿಸಿಕೊಡಬೇಕಿದೆ. ಭಿಕಾರಿ ರಾಷ್ಟ್ರದಲ್ಲಿ ಹೋಗಿ ಬದುಕಿ ಅಂತ ಕಳುಹಿಸಬೇಕು ಎಂದು ಕಿಡಿಕಾರಿದರು. ಸೈನಿಕರು ಜನರಿಂದ ಹಣ ಆಪೇಕ್ಷೆ ಮಾಡುವುದಿಲ್ಲ. ಕೇವಲ ಗೌರವ ಅಪೇಕ್ಷೆ ಮಾಡುತ್ತಾರೆ ಎಂದು ಅವರು ಹೇಳಿದರು.
Advertisement
ಸೈನಿಕರು ಹುತಾತ್ಮರಾದಾಗ ಮಾತ್ರ ಗೌರವ ಕೊಡಬೇಡಿ, ಅವರು ಬದುಕಿದ್ದಾಗಲೇ ದೇಶಕ್ಕಾಗಿ ಕಾದಾಡುವಾಗಲೂ ಗೌರವ ಕೊಡಿ. ಸೈನಿಕರ ಬಗ್ಗೆ ಅಯೋಗ್ಯದ ಮಾತುಗಳನ್ನು ಆಡೋರನ್ನು ಮುಲಾಜಿಲ್ಲದೇ ಬಾರಿಸಿ. ಫೇಸ್‍ಬುಕ್, ಟ್ವಿಟ್ಟರ್, ವಾಟ್ಸಪ್ ಎಲ್ಲಿ ಬೇಕಾದರೂ ಸೈನಿಕರ ಬಗ್ಗೆ ಕೆಟ್ಟದಾಗಿ ಮಾಡನಾಡುವವರಿಗೆ ಬಾರಿಸಿ ಎಂದು ಅವರು ಆಕ್ರೋಶವನ್ನು ಹೊರಹಾಕಿದರು.
Advertisement
https://www.youtube.com/watch?v=hNMpEiBR1ao
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv