ಬೆಂಗಳೂರು: ಮಣ್ಣಿನ ಗಣೇಶನನ್ನು ಹಬ್ಬಕ್ಕೆ ಕೂರಿಸುವಂತೆ ಜಯನಗರ ಶಾಸಕಿ ಸೌಮ್ಯರೆಡ್ಡಿ ಮತ್ತು ಬೆಂಬಲಿಗರು ಜೆಪಿ ನಗರದಲ್ಲಿ ರ‍್ಯಾಲಿ ನಡೆಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಸಿದ ಅವರು, ಬಣ್ಣ ಬಳಿದ ಹಾಗೂ ಪಿಒಪಿ ಗಣೇಶನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತವೆ. ಹೀಗಾಗಿ ಕಳೆದ ವರ್ಷವೇ ಪಿಒಪಿ ಗಣೇಶನ ಮೂರ್ತಿಗಳನ್ನು ರದ್ದುಮಾಡಲಾಗಿದೆ. ನಗರದ ಬಹುತೇಕ ಕೆರೆಗಳು ಮಾಲಿನ್ಯದಿಂದಲೇ ಪ್ರಖ್ಯಾತಿ ಪಡೆದುಕೊಂಡಿವೆ. ಅಲ್ಲದೇ ಗಣೇಶ ಹಬ್ಬದ ಬಳಿಕ ಕೆರೆಗಳ ಮಾಲಿನ್ಯ ಹೆಚ್ಚಾಗುತ್ತವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
Advertisement
The Ganesha idols are made of clay, and air-dried. They are hand-sculpted and are painted using natural substances like turmeric, limestone, areca nut etc.
It's the need of the hour to use the #ClayGanesha to save the earth from the pollution of harmful chemical substances. pic.twitter.com/ZfaksgVide
— Sowmya | ಸೌಮ್ಯ (@Sowmyareddyr) September 2, 2018
Advertisement
ಜನರಲ್ಲಿ ಪರಿಸರ ಸ್ನೇಹಿ ಹಾಗೂ ಬಣ್ಣ ರಹಿತ ಗಣೇಶನ ಮೂರ್ತಿಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಹಬ್ಬದ 10 ಹಾಗೂ 11ನೇ ತಾರೀಖಿನಂದು ಮೂರು ಸಾವಿರ ಮಣ್ಣಿನ ಗಣೇಶನ ಮೂರ್ತಿಗಳನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ. ಈಗಾಗಲೇ ಬಿಟಿಎಂ ಹಾಗೂ ಜಯನಗರದಲ್ಲಿ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
Advertisement
ರ‍್ಯಾಲಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿಯವರಿಗೆ ಬೈರಸಂದ್ರದ ಕಾರ್ಪೋರೇಟರರ್ ನಾಗರಾಜ್ ಹಾಗೂ ಶಾಲಾ ವಿದ್ಯಾರ್ಥಿಗಳು ಸಹ ಸಾಥ್ ನೀಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv