– ನಮ್ಮ ಕವನ ಬೇಡಾ ಎಂದವರಿಗೆ ನಾಚಿಕೆಯಾಗಬೇಕು
– ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ
ಬೆಳಗಾವಿ: 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ. ಕಾನೂನುಬದ್ಧವಾಗಿ ಹೋರಾಟ ಮಾಡಿ ವಾಪಸ್ ಪಡೆಯುತ್ತೇವೆ. ನಾವು, ನೀವು ಒಟ್ಟಾಗಿ ಇರಬೇಕು ಅದ್ರೆ ವಾಪಸ್ ಕೊಡಬೇಕು. ದೇವಾಲಯ ಅಂತ ಗೊತ್ತಾದ ಮೇಲೆ ಬಿಟ್ಟು ಕೊಡಬೇಕು. ಶಾಸಕ ಅಭಯ್ ಪಾಟೀಲ್‍ಗೂ ನಮ್ಮ ಬೆಂಬಲ ಇದೆ. ಮಾಜಿ ಶಾಸಕ ಫಿರೋಜ್ ಸೇಠ್ ಅಕ್ರಮವಾಗಿ ಜಾಗ ಕಬಳಿಕೆ ಮಾಡಿದ್ದಾರೆ. ಮೊದಲು ಅದನ್ನು ವಾಪಸ್ ಕೊಡಲಿ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್‌ಡಿಕೆ ಕಿಡಿ
ರೋಹಿತ್ ಚಕ್ರತೀರ್ಥ ಅವರನ್ನ ಪಠ್ಯ ಪರಿಷ್ಕರಣಾ ಸಮಿತಿಯಿಂದ ತೆಗೆದ ವಿಚಾರವಾಗಿ ಮಾತನಾಡಿದ ಅವರು, ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ನಿಜವಾದ ರಾಷ್ಟ್ರೀಯತೆ, ದೇಶಭಕ್ತಿಯ ಪಠ್ಯದಲ್ಲಿ ಹಾಕಿದ್ರೆ ಇವರಿಗೆ ಯಾಕೆ ಉರಿಯುತ್ತಿದೆ. ಕೆಲವು ಲೇಖಕರು ನಮ್ಮ ಕವನ ಪಠ್ಯದಲ್ಲಿ ಬೇಡಾ ಎಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.
ಹೆಡ್ಗೆವಾರ್ ಅವರ ಭಾಷಣ ಪಠ್ಯದಲ್ಲಿ ಹಾಕಿದ್ದೆ ಇವರಿಗೆ ಉರಿ. ಆರ್‌ಎಸ್‍ಎಸ್ ಸಂಸ್ಥಾಪಕನ ಹೆಸರು ಹಾಕಿದ್ರೇ ಕೋಮುವಾದ, ಜಾತಿವಾದ ಅಂತಾರೆ. ಕೇಸರಿ ಎಂದರೆ ತ್ಯಾಗ, ಭಕ್ತಿಯ ಪ್ರತೀಕ. ಇದನ್ನ ಕೆಟ್ಟದ್ದು ಅಂತಾ ಬೆಂಬಲಿಸುವ ಬುದ್ಧಿ ಜೀವಿಗಳನ್ನ, ಕಾಂಗ್ರೆಸ್ ಅವರನ್ನ ಧಿಕ್ಕರಿಸಬೇಕು. ಬರಗೂರ ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಲೋಪಗಳಿದ್ದರೂ ಬಾಯಿ ಮುಚ್ಚಿಕೊಂಡಿದ್ರು. ನೂರು ಸಲ ಸುಳ್ಳನ್ನು ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಕೆಲವು ಸ್ವಾಮೀಜಿಗಳು ಇವರಿಗೆ ಸಾಥ್ ಕೊಡುವ ಕೆಲಸ ಮಾಡ್ತಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಚರ್ಚೆ ಮಾಡೋಣ ಬನ್ನಿ ಅದ್ರೆ ಯಾರು ಬರಲಿಲ್ಲ. ಪಠ್ಯದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ. ಇದರಲ್ಲಿ ಕೋಮುವಾದವಿಲ್ಲ, ರಾಷ್ಟ್ರೀಯವಾದ ದೇಶಭಕ್ತಿ ಇದೆ. ಮುಸ್ಲಿಂ ದಾಳಿಕೋರರನ್ನ ಪಠ್ಯದಲ್ಲಿ ಕಾಂಗ್ರೆಸ್‍ನವರು ವೈಭವೀಕರಣ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ
ಕಾಂಗ್ರೆಸ್ ಅವರಿಗೆ ಪಠ್ಯಪುಸ್ತಕದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ. ದೇಶಭಕ್ತಿ, ಹಿಂದುತ್ವವನ್ನ, ಆರ್‌ಎಸ್‍ಎಸ್ ನ ಕಾಂಗ್ರೆಸ್ ವಿರೋಧ ಮಾಡ್ತಿದೆ. ಹೋರಾಟ ಮಾಡುವ ಸ್ವಾಮೀಜಿಗಳಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ನಾವೆಲ್ಲಾ ಒಟ್ಟಾಗಿ ದೇಶ ಉಳಿಸಬೇಕಿದೆ ಎಂದು ಕರೆ ಕೊಟ್ಟರು.