ರಾಯಚೂರು: ಮಂತ್ರಿಸ್ಥಾನ ಬೇಕು ಅನ್ನೋರು ದೆಹಲಿಗೆ ಹೋಗಬೇಕು, ಅವರಿವರನ್ನ ಭೇಟಿ ಮಾಡ್ಬೇಕು, ಮತಕ್ಷೇತ್ರ ಬಿಟ್ಟು ಬೆಂಗಳೂರಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಮನೆಗೆ ಅಡ್ಡಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸ್ವಪಕ್ಷದ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಜಿಲ್ಲೆಯ ದೇವದುರ್ಗದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮಗೇನು ಸಚಿವ ಸ್ಥಾನದ ಅವಶ್ಯಕತೆಯಿಲ್ಲ. ಇನ್ನು ಉಳಿದಿರೋದೇ 6 ತಿಂಗಳು. ನಾನು ಮಂತ್ರಿ ಸ್ಥಾನ ಕೇಳಿಲ್ಲ ಆರಾಮಗಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ-ರಾಮದಾಸ್ ಇಬ್ರೂ ಬ್ಯಾಚುಲರ್ಸು, ತಬ್ಬಾಡಿದ್ರು: KPCC ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯ
Advertisement
ಮಂತ್ರಿ ಸ್ಥಾನ ಬೇಕು ಅಂದ್ರೆ ದೆಹಲಿಗೆ ಹೋಗಬೇಕು. ಅವರಿವರನ್ನ ಭೇಟಿ ಮಾಡಬೇಕು, ಮತಕ್ಷೇತ್ರ ಬಿಟ್ಟು ಬೆಂಗಳೂರಲ್ಲಿ ಬರೀ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರ ಮನೆಗೆ ಅಡ್ಡಾಡಬೇಕು. ನಮಗೇನು ಬೇಡ ಅರಾಮಾಗಿದ್ದೇವೆ. ಮಂತ್ರಿ ಆಗೋದಕ್ಕಿಂತಲೂ ಹೆಚ್ಚು ಅಧಿಕಾರದಲ್ಲಿ ನಾವಿದ್ದೇವೆ ಅನ್ನೋದೇ ಸಾಕು. ಮುಖ್ಯಮಂತ್ರಿಗಳು ನಮ್ಮ ಕೆಲಸ ಮಾಡಿಕೊಡ್ತಿದ್ದಾರೆ. ನಮಗೆ ಮಂತ್ರಿ ಸ್ಥಾನ ಏನೂ ಉಪಯೋಗ ಇಲ್ಲ ಎಂದು ತಿರಸ್ಕರಿಸಿದ್ದಾರೆ. ಇದನ್ನೂ ಓದಿ: ತೆಲುಗಿನ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಯಶ್ ಅತಿಥಿ ಪಾತ್ರ?
Advertisement
Advertisement
ಮೋದಿ ಹೆಸರಲ್ಲೇ ಚುನಾವಣೆ ಎದುರಿಸ್ತೇವೆ: ಎಲ್ಲಾ ನಿಗಮ ಮಂಡಳಿಗಳನ್ನ ವಿಸರ್ಜನೆ ಮಾಡಿ, ಕಾರ್ಯಕರ್ತರಿಗೆ ಅವಕಾಶ ಕೊಡಬೇಕಿತ್ತು. ಆದ್ರೆ ಕೊಡಲಿಲ್ಲ. ಮುಂದಿನ ಚುನಾವಣೆಯನ್ನ ನರೇಂದ್ರ ಮೋದಿಯವರ ಹೆಸರಲ್ಲಿ ಎದುರಿಸುತ್ತೇವೆ. ಅವರ ಹೆಸರಲ್ಲೇ ಮುಂದೆ ಬರ್ತಿವಿ ಎಂದು ತಿಳಿಸಿದ್ದಾರೆ.