ಹುಬ್ಬಳ್ಳಿ: ಮಹದಾಯಿ ಯೋಜನೆ (Mahadayi River Project) ಅನುಷ್ಠಾನ ವಿಚಾರವಾಗಿ ಗೋವಾ ಸರ್ಕಾರದ ನಡೆಯ ಬಗ್ಗೆ ನಮಗೆ ಗೋತ್ತಿಲ್ಲ. ಈಗಾಗಲೇ ಕಾನೂನು ಹೋರಾಟವಾಗಿ ಸುಪ್ರೀಂ ಕೋರ್ಟ್ (Supreme Court) ಆದೇಶದ ಮೇಲೆ ನ್ಯಾಯಾಧಿಕರಣ ರಚನೆಯಾಗಿದೆ. ಅದರ ಪರಿಶೀಲನೆ ಸಹ ಆಗಿ, ತೀರ್ಪು ನೀಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸ್ಪಷ್ಟಪಡಿಸಿದ್ದಾರೆ.
Advertisement
ಈ ಬಗ್ಗೆ ಹುಬ್ಬಳ್ಳಿಯಲ್ಲಿಂದು (Hubbali) ಮಾತನಾಡಿದ ಅವರು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರಕ್ಕೆ 2016 ರಲ್ಲಿ ಸಮಗ್ರ ಯೋಜನಾ ವರದಿ (DPR) ನೀಡಲಾಗಿತ್ತು. ಸದ್ಯ ಡಿಪಿಆರ್ಗೂ ಅನುಮತಿ ಸಿಕ್ಕಿದೆ. ಕಾನೂನು (Law) ಹೋರಾಟವಾಗಿಯೇ ಇದೆಲ್ಲವೂ ನಡೆದಿದೆ ಎಂದು ಹೇಳಿದ್ದಾರೆ.
Advertisement
ಎಚ್.ವಿಶ್ವನಾಥ್ (H Vishwanath) ಅವರ ಹೇಳಿಕೆಗೆ ನಾನು ಯಾವತ್ತೂ ಪ್ರತಿಕ್ರಿಯಿಸಿಲ್ಲ. ಅವರು ಪದೇ-ಪದೇ ಈ ರೀತಿ ಹೇಳಿಕೆ ನೀಡುತ್ತಿರುತ್ತಾರೆ. ಅದರ ಬಗ್ಗೆ ಹೆಚ್ಚು ಮಾತನಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುತ್ತಾ ತುಳು? – ಅಧ್ಯಯನಕ್ಕೆ ಸಮಿತಿ ರಚನೆ
Advertisement
Advertisement
ಫೆಬ್ರವರಿ 6 ರಂದು ಪ್ರಧಾನಿ ಮೋದಿ ((Narendra Modi) ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ. ಅಂದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ
ಇದರೊಂದಿಗೆ `CD ಬಾಂಬ್’ ಸಿಡಿಸಿದ್ದ ರಮೇಶ್ ಜಾರಕಿಹೊಳಿ (Ramesh Jarkiholi) ಹುಬ್ಬಳ್ಳಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬೆಂಗಳೂರಿನಿಂದ ಸಿಎಂ ಜೊತೆಗೆ ಜಾರಕಿಹೊಳಿ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಹಲವು ಕುತೂಹಲಕ್ಕೆ ಕಾರಣವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k