ಬೆಂಗಳೂರು: ಸಿದ್ದರಾಮಯ್ಯನಿಂದ ನಾವು ರಾಷ್ಟ್ರಭಕ್ತಿ ಕಲಿಯುವ ಅವಶ್ಯಕತೆ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನ ಬಿಜೆಪಿಯ ನಾಟಕ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರಧ್ವಜ ಹಾರಿಸುವುದಕ್ಕೆ ಯಾರಿಗೆ ಹಕ್ಕು ಇರೋದು? ಸಿದ್ದರಾಮಯ್ಯಗೆ ವಯಸ್ಸು ಈಗ 75. ಸಿದ್ದರಾಮಯ್ಯ ಏನಾದರೂ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ.
Advertisement
Advertisement
ಸಿದ್ದರಾಮಯ್ಯ ನಾನು ಏನ್ ಹೇಳಿದರೂ ಜನ ಕೇಳುತ್ತಾರೆ ಅಂತ ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ಜನರು ನಂಬುವುದಿಲ್ಲ. ರಾಷ್ಟ್ರಭಕ್ತಿ ಪಾಠ ನಾವು ಇವರಿಂದ ಕಲಿಯಬೇಕಿಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೈಕ್, ರಿಕ್ಷಾಗೆ ಗುದ್ದಿದ ಕಾರ್ – 6 ಜನರ ಸಾವಿಗೆ ಕಾರಣವಾದ ಕಾಂಗ್ರೆಸ್ ಶಾಸಕನ ಅಳಿಯ
Advertisement
ನಾವು ಚಿಕ್ಕವಯಸ್ಸಿನಿಂದ ಬಿಜೆಪಿ, ಆರ್‌ಎಸ್‍ಎಸ್‍ನಲ್ಲಿ ಇದ್ದು ಸಂಸ್ಕಾರದಲ್ಲಿ ಎದ್ದು ಬಂದಿದ್ದೇವೆ. ಸ್ವಾತಂತ್ರದ ನಂತರ ಹುಟ್ಟಿದವರಿಗೆ ರಾಷ್ಟ್ರದ ಕಲ್ಪನೆ ಬರಲು ಮೋದಿ ತಿರಂಗ ಅಭಿಯಾನಕ್ಕೆ ಕರೆ ಕೊಟ್ಟರು. ಸಿದ್ದರಾಮಯ್ಯ ಅಂತಹವರಿಗೆ ರಾಷ್ಟ್ರದ ಪರಿಕಲ್ಪನೆ ಗೊತ್ತಾಗಬೇಕು. ಹೀಗಾಗಿ ಮೋದಿ ಅವರು ಕರೆ ಕೊಟ್ಟಿದ್ದಾರೆ ಎಂದಿದ್ದಾರೆ.
Advertisement
ಮನೆ ಮನೆಯಲ್ಲಿ 75 ವರ್ಷದ ಸಂಭ್ರಮ ನಡೆಯುತ್ತಿದೆ. ಸಾವಿರಾರು ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ ತಂದುಕೊಟ್ಟಿದ್ದಾರೆ. ಅವರನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಹೀಗಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ ಅಂತ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ದೃಷ್ಟಿ ವಿಕಲಚೇತನರಿಗಾಗಿ ಚೆಸ್ ಪಂದ್ಯಾಟ – 35 ಸಾವಿರ ರೂ. ಬಹುಮಾನ