ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ಬಾರ್ ವಿರುದ್ಧ ಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಇಂದು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಗೊಂಡಿತ್ತು. ಈ ವೇಳೆ ಹಳ್ಳಿಯಿಂದ ನೂರಾರು ಮಹಿಳೆಯರು ಪ್ರತಿಭಟನೆ ಬಂದಿದ್ದಾರೆ.
ಹಳ್ಳಿಯಿಂದ ಸುಮಾರು 300ಕ್ಕೂ ಅಧಿಕ ಪುರುಷರು ಹಾಗೂ ಮಹಿಳೆಯರು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ತುಸು ದೂರದಲ್ಲಿರುವ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾಯಿಸಿ ಬಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಕೂಡಲೇ ಬಾರ್ ಮುಚ್ಚಿಸುವಂತೆ ಆಗ್ರಹಿಸಿದರು. ಇದನ್ನೂ ಓದಿ: ನಿನ್ನೆಯಷ್ಟೇ ಅಮೆರಿಕದಿಂದ ಬೆಂಗಳೂರಿಗೆ ಲ್ಯಾಂಡ್ – ಇಂದು ಬೆಂಕಿಗೆ ಬಲಿ
Advertisement
Advertisement
ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಬಾರ್ ಓಪನ್ ಆಗಿತ್ತು. ಅಂದಿನಿಂದಲೂ ಕೂಡ ಸ್ಥಳಿಯರು ಬಾರ್ ಮುಂಭಾಗವೇ ಧರಣಿ ಕೂತು ಮುಚ್ಚುವಂತೆ ಧರಣಿ ನಡೆಸಿದ್ದರು. ಆದರೆ ಬಾರ್ ಕ್ಲೋಸ್ ಆಗದ ಹಿನ್ನೆಲೆ ಇಂದು ಇಡೀ ಹಳ್ಳಿ ಜನ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಬಡ ಕೂಲಿ ಕಾರ್ಮಿಕರೇ ವಾಸವಿರೋ ಗ್ರಾಮದಲ್ಲಿ ಬಾರ್ ಓಪನ್ ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
Advertisement
ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ಬಾರ್ ತೆರೆಯಲು ಮುಂದಾದ ಬಾರ್ ಮಾಲೀಕನ ವಿರುದ್ಧ ನೂರಾರು ಮಹಿಳೆಯರು ಸೇರಿ ಗ್ರಾಮಸ್ಥರು ನಗರದ ಅಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದರು. ಕೂಡಲೇ ಬಾರ್ ಬಂದ್ ಮಾಡಿಸುವಂತೆ ಒತ್ತಾಯಿಸಿದರು. ನಮ್ಮ ಗಂಡಂದಿರು ವಾರಕ್ಕೊಮ್ಮೆ ಕುಡಿಯುತ್ತಿದ್ದರು, ಈಗ ದಿನ ಕುಡಿಯಲು ಆರಂಭಿಸುತ್ತಾರೆ. ಹಾಗಾಗಿ, ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಚಿಂತನೆ ಮಾಡಲಾಗುತ್ತಿದೆ: ಅರಗ ಜ್ಞಾನೇಂದ್ರ
Advertisement
ಮುಸ್ಲಾಪುರ ಗ್ರಾಮದಲ್ಲಿ ನಾಲ್ಕು ದಿನದ ಹಿಂದೆ ಬಾರ್ ಓಪನ್ ಆಗಿತ್ತು. ಬಾರಿನಿಂದ ಮುಂದಾಗೋ ಅನಾಹುತ ಹಾಗೂ ತೊಂದರೆಗಳನ್ನು ಮನಗಂಡ ಹಳ್ಳಿ ಮಹಿಳೆಯರು ಹಾಗೂ ಗ್ರಾಮಸ್ಥರು ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ. ಎಮ್ಮೆದೊಡ್ಡಿಯ ಮುಸ್ಲಾಪುರ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ನಾಲ್ಕು ದಿನ ಹಿಂದೆ ನೂತನ ಬಾರ್ ಓಪನ್ ಆಗಿತ್ತು. ಸಾಲದಕ್ಕೆ ಅದೇ ಮಾರ್ಗದಲ್ಲಿ ಶಾಲೆ ಬೇರೆ ಇದೆ. ಕುಡಿದು ದಾರಿಯಲ್ಲಿ ಹೋಗೋ-ಬರೋ ಹೆಣ್ಮಕ್ಕಳು, ಹೆಂಗಸರಿಗೆ ಕಿಟಲೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತೆ.
ಅಷ್ಟೆ ಅಲ್ಲದೆ, ಈ ಭಾಗದಲ್ಲಿ ಇರುವವರೆಲ್ಲಾ ಕೂಲಿ ಕಾರ್ಮಿಕರು. ಅವರು ಇಷ್ಟು ದಿನ ದುಡಿದು ಜೀವನ ಮಾಡುತ್ತಿದ್ದರು. ಸುತ್ತಮುತ್ತ ಬಾರ್ ಇಲ್ಲದ ಕಾರಣ ವಾರಕ್ಕೊಮ್ಮೆ ಸಂತೆಗೆ ಹೋದಾಗ ಕಡೂರಿನಲ್ಲಿ ಕುಡಿದು ಬರುತ್ತಿದ್ದರು. ಈಗ ಇಲ್ಲೇ ಬಾರ್ ಮಾಡಿದ್ದಾರೆ. ಇನ್ನು ಮುಂದೆ ದಿನಾ ಕುಡಿಯಲು ಆರಂಭಿಸುತ್ತಾರೆ. ದುಡಿದದ್ದನ್ನೆಲ್ಲಾ ಬಾರಿಗೆ ಹಾಕುತ್ತಾರೆ. ಆಗ ಹೆಂಡತಿ-ಮಕ್ಕಳ ಕಥೆ ಏನೆಂದು ಪ್ರಶ್ನಿಸಿರೋ ಮಹಿಳೆಯರು ಬಾರ್ ಮುಚ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಯುವತಿಯಿಂದ ಕಾರು ಚಾಲನೆ- ಆಟೋ ಸಂಪೂರ್ಣ ನಜ್ಜುಗುಜ್ಜು
ಈ ಬಾರ್ ನಿಂದ ಸುತ್ತಮುತ್ತಲಿನ 28 ಹಳ್ಳಿಗೆ ತೊಂದರೆಯಾಗಲಿದೆ. ಹಾಗಾಗಿ, ನಮ್ಮ ಹಳ್ಳಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರು-ಪುರುಷರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.