ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ಲೀಗ್ ಬಿಗ್‍ಬಾಶ್ ಲೀಗ್‌ನಲ್ಲಿ (BBL) ಭಾರತೀಯ ಆಟಗಾರರನ್ನು ಖರೀದಿಸಿ ಆಡಿಸುವಷ್ಟು ಹಣ ನಮ್ಮಲ್ಲಿಲ್ಲ ಎಂದು ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಹೇಳಿದ್ದಾರೆ.
Advertisement
ಟಿ20 ಕ್ರಿಕೆಟ್‍ನಲ್ಲಿ ವಿಶ್ವ ರ್‍ಯಾಕಿಂಗ್‌ನಲ್ಲಿ ನ.1 ಸ್ಥಾನದಲ್ಲಿರುವ ಸೂರ್ಯ ಕುಮಾರ್ ಯಾದವ್ (Suryakumar Yadav) ಕುರಿತಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮ್ಯಾಕ್ಸ್‌ವೆಲ್‌ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಮ್ಯಾಕ್ಸ್‌ವೆಲ್ ಸೂರ್ಯ ಕುಮಾರ್ ಯಾದವ್ ಉತ್ತಮ ಆಟಗಾರ ಆದರೆ ನಮ್ಮಲ್ಲಿ ನಡೆಯುವ ಬಿಬಿಎಲ್ ಟೂರ್ನಿಯಲ್ಲಿ ಅವರನ್ನು ಕರೆತಂದು ಆಡಿಸುವಷ್ಟು ದುಡ್ಡು ನಮ್ಮಲ್ಲಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೆ.ಎಲ್.ರಾಹುಲ್
Advertisement
Advertisement
ಸೂರ್ಯ ಕುಮಾರ್ ಯಾದವ್ ಭವಿಷ್ಯದಲ್ಲಿ ಬಿಬಿಎಲ್ ಟೂರ್ನಿಯಲ್ಲಿ ಆಡಬಹುದಾ ಎಂದು ಕೇಳಿದಾಗ ಮ್ಯಾಕ್ಸ್‌ವೆಲ್ ಇದು ಅಸಾಧ್ಯ. ನಾವು ದೊಡ್ಡ ಮೊತ್ತ ಪಾವತಿಸಿ ಆಟಗಾರರನ್ನು ತಂಡಕ್ಕೆ ಸೇರಿಸುವುದಿಲ್ಲ. ಹಾಗಾಗಿ ಬಿಬಿಎಲ್‍ನಲ್ಲಿ ಸೂರ್ಯ ಕುಮಾರ್ ಯಾದವ್ ಅವರಂತಹ ಭಾರತೀಯ ಆಟಗಾರರನ್ನು ನಿರೀಕ್ಷಿಸುವುದು ಕಷ್ಟ ಎಂದಿದ್ದಾರೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್
Advertisement
ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಭಾರತೀಯ ಆಟಗಾರರನ್ನು ವಿದೇಶಿ ಟಿ20 ಲೀಗ್‍ನಲ್ಲಿ ಆಡಲು ಅವಕಾಶ ನೀಡಬೇಕೆಂಬ ಮಾತು ಕೇಳಿ ಬರುತ್ತಿದೆ. ಈವರೆಗೆ ಬಿಸಿಸಿಐ (BCCI) ಭಾರತೀಯ ಆಟಗಾರರಿಗೆ ಐಪಿಎಲ್ (IPL) ಬಿಟ್ಟು ಬೇರೆ ಯಾವುದೇ ವಿದೇಶಿ ಲೀಗ್‍ನಲ್ಲಿ ಆಡಲು ಅವಕಾಶ ನೀಡಿಲ್ಲ. ಬಿಸಿಸಿಐ ಈ ಬಗ್ಗೆ ಚಿಂತಿಸಿ ಆಟಗಾರರಿಗೆ ಅವಕಾಶ ನೀಡಿದರೆ, ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ವಿದೇಶಿ ಲೀಗ್‍ನಲ್ಲಿ ದೊಡ್ಡ ಮೊತ್ತಕ್ಕೆ ಸ್ಟಾರ್ ಆಟಗಾರರನ್ನು ಖರೀದಿಸಲು ಫ್ರಾಂಚೈಸ್‍ಗಳು ಮುಂದಾಗಬಹುದು. ಆದರೆ ಈ ಬಗ್ಗೆ ಬಿಸಿಸಿಐ ಒಲವು ತೋರಿದಂತೆ ಕಾಣಿಸುತ್ತಿಲ್ಲ.