ಉಡುಪಿ: ಆ ಕಾಲ ಹೋಯ್ತು.. ಭಾರತದ ತಂಟೆಗೆ ಬಂದ್ರೆ ನಾವು ಮುಖಮೂತಿ ನೋಡಲ್ಲ ಎಂದು ಶತ್ರು ರಾಷ್ಟ್ರಗಳಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಎಚ್ಚರಿಕೆ ನೀಡಿದ್ದಾರೆ. ಇಡೀ ಪ್ರಪಂಚ ಭಾರತದ ಮಾತು ಕೇಳುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಉಡುಪಿಯ (Udupi) ಮಣಿಪಾಲ ಮಾಹೆ ವಿವಿಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜನಾಥ್ ಸಿಂಗ್, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಐದು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿ ಮಾತನಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ನಾಯಕರೇ ಅಲ್ಲ – ರಾಜ್ಯಕ್ಕೆ ಒಬ್ಬರೇ ಮಾಸ್ ಲೀಡರ್ ಅದು BSY: ವರ್ತೂರು ಪ್ರಕಾಶ್ ವಾಗ್ದಾಳಿ
ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಭಾರತ ನಾಯಕತ್ವ ವಹಿಸಿದೆ. ಕಾಲು ಕೆರೆದುಕೊಂಡು ನಾವು ಯಾರ ಜೊತೆಯೂ ತಗಾದೆ ಶುರು ಮಾಡುವುದಿಲ್ಲ. ಭಾರತದ ತಂಟೆಗೆ ಬಂದರೆ ಮುಖಮೂತಿ ನೋಡದೆ ಉತ್ತರ ಕೊಡುತ್ತೇವೆ ಎಂದರು.
ಐದು ವರ್ಷದಲ್ಲಿ ವಿಶ್ವದ ಮೂರನೇ ಆರ್ಥಿಕ ದೇಶವಾಗಿ ಭಾರತ ಸದೃಢವಾಗಿ ನಿಲ್ಲಲಿದೆ. ಭಾರತ 2047ಕ್ಕೆ ಪ್ರಪಂಚದ ಮೊದಲ ಸ್ಥಾನದಲ್ಲಿರಲಿದೆ. ದೇಶವನ್ನು ಐದು ಟ್ರಿಲಿಯನ್ ಆರ್ಥಿಕ ರಾಷ್ಟ್ರ ಮಾಡುವುದು ಪ್ರಧಾನಿ ಮೋದಿ ಕನಸು. ದೇಶದ ಯುವಜನಾಂಗ ಇದಕ್ಕೆ ಕೊಡುಗೆ ನೀಡುತ್ತಿದ್ದೇವೆ. ಗ್ಲೋಬಲ್ ಸಿಟಿಜನ್ ನಿರ್ಮಿಸಲು ಎನ್‌ಇಪಿ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 2025ರ ಜೂನ್‌ಗೆ 175 ಕಿಮೀ ಮೆಟ್ರೋ ಮಾರ್ಗ- ಅಂಜುಂ ಪರ್ವೇಜ್
ಮಾಹೆ ವಿವಿಯ ಸತ್ಯ ನಾದೆಲ್ಲಾ ಮೈಕೋಸಾಫ್ಟ್‌ನ ನೇತೃತ್ವ ವಹಿಸಿದ್ದಾರೆ. ಮೈಕ್ರೋಸಾಫ್ಟ್ ಮೀರಿಸುವಂತಹ ಕಂಪನಿ ಭಾರತದಲ್ಲಿ ಸ್ಥಾಪನೆ ಆಗಬೇಕು. ಅಂತಾರಾಷ್ಟ್ರೀಯ ಕಂಪನಿ ಸಿಇಒಗಳು ಭಾರತ ಮೂಲದವರು ಎಂಬುದು ನಮ್ಮ ಹೆಗ್ಗಳಿಕೆ ಎಂದು ಮಾತನಾಡಿದರು.