ಬೆಂಗಳೂರು: ನಾವು ಗಂಡಸರನ್ನ ನಂಬಲ್ಲ, ಹೆಣ್ಣುಮಕ್ಕಳನ್ನು ನಂಬುತ್ತೇವೆ. ಅದಕ್ಕೆ ಅವರಿಗೆ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಲೋಕಸಭಾ ಚುನಾವಣೆ (Lok Sabha Election) ನಿಟ್ಟಿನಲ್ಲಿ ಗ್ಯಾರಂಟಿ ಜಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ 2,000 ರೂ. ಕೊಡುತ್ತೇವೆ. ಅವರು ಆ ದುಡ್ಡಲ್ಲಿ ಮನೆ ನಡೆಸುತ್ತಾರೆ. ನೀವಾಗಿದ್ದರೆ ಎಣ್ಣೆ ಅಂಗಡಿಗೆ ಹೋಗ್ತಿದ್ರಿ, ಅದಕ್ಕೆ ಹೆಣ್ಣುಮಕ್ಕಳಿಗೆ ಹಣ ಕೊಡುತ್ತಿದ್ದೇವೆ. ನಾವು ಐದು ಗ್ಯಾರಂಟಿಗಳನ್ನು (Guarantee Scheme) ತಂದಿದ್ದೇವೆ. ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇವೆ. ತಮಿಳುನಾಡು ನೋಡಿ ಶಕ್ತಿ ಯೋಜನೆ ತಂದೆವು. 4,000 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಖಚಿತ – ಜೋಶಿ ಭವಿಷ್ಯ
Advertisement
Advertisement
ಶಿವಮೊಗ್ಗ ಕಾರ್ಯಕ್ರಮ ನೋಡಿದ್ರೆ ಸೋಲು ಖಚಿತ. ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲ್ಲಲ್ಲ. ಈಗ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ತಲುಪದಿದ್ದರೆ ತಲುಪಿಸುವ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಐವರನ್ನ ನೇಮಿಸಿದ್ದೇವೆ. 50,000 ವೇತನವನ್ನೂ ಕೊಡುತ್ತೇವೆ. ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಯಾಗಲಿವೆ. ತಾಲೂಕು ಮಟ್ಟದಲ್ಲಿ ಸಮಿತಿ ರಚನೆಯಾಗಿದೆ. 15,000 ಸದಸ್ಯರನ್ನು ನೇಮಿಸಿದ್ದೇವೆ. ಕಾರ್ಡ್ ಇಟ್ಟುಕೊಂಡು ವಿಧಾನಸೌಧಕ್ಕೆ ಬರಬಹುದು. ಕಾರ್ಡ್ ಮಿಸ್‌ಯೂಸ್ ಆಗಬಾರದು. ಕೆಟ್ಟ ಹೆಸರು ತಂದರೆ ವಜಾ ಮಾಡುತ್ತೇವೆ. ನೀವು ಜನರ ಸೇವೆ ಮಾಡಬೇಕು. ಯಾವ ರಾಜ್ಯದಲ್ಲೂ ಕಾರ್ಯಕರ್ತರಿಗೆ ಶಕ್ತಿ ತುಂಬಿಲ್ಲ. ನಾವು ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮಾತನಾಡುವ ಭರದಲ್ಲಿ ಬಿಜೆಪಿಗೆ 20 ಸೀಟು ಗೆಲ್ಲಿಸಿ ಎಂದ ಡಿಕೆಶಿ
Advertisement
Advertisement
ನಮ್ಮ ಗ್ಯಾರಂಟಿ ಬಗ್ಗೆ ಅವಹೇಳನ ಮಾಡುತ್ತಿದ್ದರು. ಮಧ್ಯಪ್ರದೇಶದಲ್ಲಿ ಕಾಪಿ ಹೊಡೆದರು. ಈಗ ಮೋದಿ ಗ್ಯಾರಂಟಿ ಅಂತ ಮಾಡಿಕೊಂಡಿದ್ದಾರೆ. ವೋಟಿಗೆ 200, 300 ಕೊಡ್ತಾರಂತೆ ಅನ್ನೋದು ಬೇಡ. ನಾವು 5,000 ಕೊಡುತ್ತಿದ್ದೇವೆ. ನಮಗೆ ಅಷ್ಟೇ ಸಾಕು. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ನಮ್ಮ ದೇವಸ್ಥಾನ ತುಂಬೋಯ್ತು, ಅಂಗಡಿ ಮುಂಗಟ್ಟು ತುಂಬೋಯ್ತು ಎಂದು ಸಿಎಂಗೆ ಪತ್ರ ಬರೆದಿದ್ದಾರೆ. ಅದಕ್ಕೆ ನಮ್ಮ ಗ್ಯಾರಂಟಿಗಳ ಮಹತ್ವ ಇದೆ. ನಮ್ಮದು ಗೃಹಲಕ್ಷ್ಮಿ, ಅವರದ್ದು ಮಹಾಲಕ್ಷ್ಮಿ. ಶ್ರಮಿಕ ನ್ಯಾಯ ನಮ್ಮದು. ಬೆಳೆವಿಮೆ, ಸಾಲಮನ್ನಾ ಎಲ್ಲವೂ ನಮ್ಮ ಮುಂದಿದೆ. ನಾವು ಅರ್ಚಕರಿಗೆ ನೆರವು ಕೊಟ್ಟೆವು. ಅದನ್ನು ಬಿಜೆಪಿ, ಜೆಡಿಎಸ್ ವಿರೋಧ ಮಾಡಿದರು. ಅದನ್ನು ರಾಜ್ಯಪಾಲರು ವಾಪಸ್ ಕಳುಹಿಸಿದರು. ಜೂನ್‌ಗೆ ನಮಗೆ ಬಹುಮತ ಸಿಗಲಿದೆ. ಆಗ ನಾವು ಅದನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ರೆ ಸಿಎಂ ರಾಜೀನಾಮೆ ಕೊಡ್ಬೇಕಾಗುತ್ತೆ: ಎಸ್.ಆರ್. ಶ್ರೀನಿವಾಸ್