ಸಿನಿಮಾ ರಂಗದ ಕಲಾವಿದರ ಸಂಘದಲ್ಲಿ ಇದೇ 13 ಮತ್ತು 14ರಂದು ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಪೂಜೆಯಲ್ಲಿ ಇಡೀ ಸಿನಿಮಾ ರಂಗ ಭಾಗಿಯಾಗಲಿದೆ ಎಂದು ಹೇಳಲಾಗಿತ್ತು. ಸ್ಟಾರ್ ನಟರೂ ಸೇರಿದಂತೆ ಎಲ್ಲ ಕಲಾವಿದರನ್ನು ಪೂಜೆಗೆ ಆಹ್ವಾನ ಕೂಡ ಮಾಡಲಾಗಿತ್ತು. ಇದೇ ವೇಳೆ ಈ ಪೂಜೆಯು ಜೈಲಿಗೆ ಹೋಗಿರೋ ದರ್ಶನ್ (Darshan) ಗಾಗಿ ಅನ್ನೋ ಸುದ್ದಿಯೂ ಹರಿದಾಡುತ್ತಿತ್ತು. ಅದಕ್ಕೀಗ ಸ್ಪಷ್ಟನೆ ಸಿಕ್ಕಿದೆ.
Advertisement
ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rock Line Venkatesh) ಮತ್ತು ನಟ ದೊಡ್ಡಣ್ಣ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಪೂಜೆಯ ಕುರಿತಂತೆ ಮಾತನಾಡಿದರು. ದರ್ಶನ್ ಕುರಿತಂತೆ ಸ್ಪಷ್ಟನೆ ಕೂಡ ನೀಡಿದರು. ರಾಕ್ ಲೈನ್ ವೆಂಕಟೇಶ್ ಮಾತನಾಡಿ, ‘ ಚಿತ್ರರಂಗದ ಒಳಿತಿಗಾಗಿ ಈ ಪೂಜೆ. ದರ್ಶನ್ ಅವ್ರಿಗಾಗಿ ಪೂಜೆ ಮಾಡ್ಬೇಕು ಅಂದ್ರೆ ನಾನು 100 ದೇವಸ್ಥಾನದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಯಾಕೆ ಮಾಡ್ಬೇಕಿತ್ತು. ದರ್ಶನ್ ಮನೇಲಿ ಮಾಡಿಸ್ತಿದ್ದೆ. ಇಲ್ಲಾಂದ್ರೆ ನನ್ನ ಮನೇಲಿ ಪೂಜೆ ಮಾಡಿಸ್ತಿದ್ದೆ. ದರ್ಶನ್ ಸ್ನೇಹಿತ ಆಗಿ ಫೀಲ್ ಮಾಡ್ತೀನಿ. ಅಯ್ಯೋ ಯಾಕೆ ಹೀಗೆ ಮಾಡಿದ್ರು ಅಂತಾ ಅನ್ಕೊತಿವಿ. ದಯವಿಟ್ಟು ದರ್ಶನ್ ವಿಚಾರಕ್ಕೆ ಪೂಜೆ ಮಾಡ್ತಿದಿವಿ ಅಂತಾ ಅನ್ಕೊಂಡ್ರೆ.. ಖಂಡಿತಾ ಅಲ್’ ಅಂದರು.
Advertisement
Advertisement
ಮುಂದುವರೆದು ಮಾತನಾಡಿದ ರಾಕ್ ಲೈನ್ ‘ಚಿತ್ರೋದ್ಯಮದ ಏಳ್ಗೆಗೆ ಹೋಮ ಮಾಡ್ತಿರೋದು ಕಲಾವಿದರ ಸಂಘ. 13 ಮತ್ತು 14ನೇ ತಾರೀಖು ಅಂಬರೀಶ್ ಭವನದಲ್ಲಿ ಪೂಜೆ ನಡೆಯಲಿದೆ. ಕೊವಿಡ್ ಆದ್ಮೇಲೆ ಮಾಡ್ಬೇಕು ಅಂತಾ ಅನ್ಕೊಂಡಿದ್ವಿ. ಕಾರಣಾಂತರಗಳಿಂದ ಮಾಡೋಕೆ ಆಗ್ಲಿಲ್ಲ. ಈ ತಿಂಗಳು 14ಕ್ಕೆ ಒಳ್ಳೆ ದಿನ. ಇಡೀ ಚಿತ್ರರಂಗದ ಉಳಿವಿಗಾಗಿ ಈ ಹೋಮ ಹಾಗೂ ಪೂಜೆ ಮಾಡೋಕೆ ಹಮ್ಮಿಕೊಂಡಿದ್ದೇವೆ. ಇಡೀ ಚಿತ್ರರಂಗ ಭಾಗಿ ಆಗ್ಬೇಕು ಅನ್ನೋದು ನಮ್ಮ ಉದ್ದೇಶ. ಥಿಯೇಟರ್ ಸಮಸ್ಯೆ, ಚಿತ್ರಮಂದಿರ ಮುಚ್ಚುತ್ತಿವೆ. ಇವತ್ತಿನ ಚಿತ್ರರಂಗದ ಸ್ಥಿತಿಗತಿಗೆ ಸೊಲುಷನ್ ಬೇಕಿತ್ತು ಹಾಗಾಗಿ ಪೂಜೆ’ ಎಂದಿದ್ದಾರೆ.
Advertisement
‘ಬೇರೆ ಭಾಷೆಯ ಸೂಪರ್ ಡೂಪರ್ ಹಿಟ್ ಸಿನಿಮಾನ ಕನ್ನಡಕ್ಕೆ ಡಬ್ ಮಾಡಿ ಇಲ್ಲಿ ರಿಲೀಸ್ ಮಾಡ್ತಿದಾರೆ ನಮ್ಮ ಪ್ರೇಕ್ಷಕರು ನೋಡ್ತಿದಾರೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಈ ಧ್ವನಿ ಇದೆ. ದಿನನಿತ್ಯ ಊಟ ಹಾಕ್ತಿರೋರು ನಿರ್ಮಾಪಕರು ಎರಡು ವರ್ಷಕ್ಕೆ ಒಂದು ಚಿತ್ರ ಮಾಡ್ತಿದ್ದೀವಿ ಈಗ. ಹೊಸದಾಗಿ ಸಿನಿಮಾ ಮಾಡೋಕೆ ಬರ್ತಿರೋ ನಿರ್ಮಾಪಕರು ಚಿತ್ರರಂಗಕ್ಕೆ ಅನ್ನ ಹಾಕ್ತಿದ್ದಾರೆ. ಅಂತವ್ರ ಉಳಿವಿಗಾಗಿ ಹೋರಾಟ ಮಾಡ್ಬೇಕು’ ಎಂದರು ರಾಕ್ ಲೈನ್ ವೆಂಕಟೇಶ್.