– ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ಪ್ರಿಯಾಂಕ್ ಯಾಕೆ ಮಾತನಾಡುತ್ತಿಲ್ಲ
ವಿಜಯಪುರ: ನಾವು 2ಎ ಮೀಸಲಾತಿ ಕೇಳಿಲ್ಲ, ಕಾಂಗ್ರೆಸ್ (Congress) ಮಾಜಿ ಶಾಸಕ ಮಾಡಿದ ಅವಾಂತರ ಇದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.
ಜಿಲ್ಲೆಯಲ್ಲಿ ಮಾತನಾಡಿದ ಅವರು, ನಾವು ಆರಂಭದಿಂದಲೂ 2ಎ ಮೀಸಲಾತಿ ಕೇಳಿಲ್ಲ. ಕಾಂಗ್ರೆಸ್ ಮಾಜಿ ಶಾಸಕ, ಈಗ ಹಾಲಿ ಶಾಸಕ ಕೇಳಿದ್ದ. 2ಎದಲ್ಲಿ ಹೋದರೆ ಹಲವು ಸಮುದಾಯದಕ್ಕೆ ಅನ್ಯಾಯ ಆಗುತ್ತದೆ. ಮುಸ್ಲಿಮರಿಗೆ ನೀಡಿದ ಮೀಸಲಾತಿ ಆಸಂವಿಧಾನಿಕವಾಗಿದೆ. 7%ನಲ್ಲಿ ನಾವು ಹಂಚಿಕೊಂಡು ತಿನ್ನುತ್ತೇವೆ ಎಂದು ಹೇಳಿದ್ದೇವೆ. ಇನ್ನೂ ಮೇಲೆ ನಾವು 2ಎನಲ್ಲಿ ಮೀಸಲಾತಿ ಕೇಳುವುದಿಲ್ಲ. ಕಾಂಗ್ರೆಸ್ ಮಾಜಿ ಶಾಸಕ ಮಾಡಿದ ಅವಾಂತರ ಇದು. ಕಾಂಗ್ರೆಸ್ ಮಾಡಿದ ಕೆಲಸ ಇದಾಗಿದೆ. 2ಎ ದಲ್ಲಿ ಮೀಸಲಾತಿ ಕೇಳಿ ಕೈ-ಕಾಲು ಹಿಡಿಯುವುದು ಬೇಡ. ಬೇರೆ ಸಮುದಾಯದಕ್ಕೆ ನೀಡಿದ ಅಸಂವಿಧಾನಿಕ ಮೀಸಲಾತಿಯಲ್ಲಿ ನೀಡಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಅದರಲ್ಲಿ ಕೇವಲ 7% ಇದೆ. ಅದು ಕೇವಲ ಪಂಚಮಸಾಲಿ, ಲಿಂಗಾಯತರಿಲ್ಲ, ಅದರಲ್ಲಿ ಮರಾಠರಿದ್ದಾರೆ, ವೈಷ್ಣವರಿದ್ದಾರೆ, ಕ್ರಿಶ್ಚಿಯನ್‌ರಿದ್ದಾರೆ, ಜೈನರಿದ್ದಾರೆ, ಕುರುಬರಿದ್ದಾರೆ. ನಾವು ತಕರಾರು ಮಾಡಿಲ್ಲ ಇರುವ 7%ನಲ್ಲಿ ನಾವು ಹಂಚಿಕೊಂಡು ತಿನ್ನುತ್ತೇವೆ ಎಂದು ಹೇಳಿದ್ದೇವೆ. ಈ ಕೈ ಹಿಡಿಯುವುದು, ಕಾಲು ಹಿಡಿಯುವಂತಹ ಹೇಳಿಕೆಗಳನ್ನ ನೀಡುತ್ತಿರುವುದು ಸಿದ್ದರಾಮಯ್ಯ. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಮೀಸಲಾತಿ ಕೊಡುವುದಿಲ್ಲ ಎನ್ನುವುದಕ್ಕಿಂತ ನಾವು ಬಿಟ್ಟು ಬಿಟ್ಟಿದ್ದೇವೆ. ಇನ್ನೂ ಮೇಲೆ ಸಿದ್ದರಾಮಯ್ಯ ಬಳಿ ನಾವು ಹೋಗುವುದಿಲ್ಲ ಎಂದು ಗುಡುಗಿದರು.
ಪಿಡಿಒ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ವಿಳಂಬ ಪ್ರತಿಭಟನೆ ಮೇಲೆ ಕೇಸ್ ವಿಚಾರಕ್ಕೆ ಪ್ರತಿಕ್ರಿಯಿಸಿ ಪ್ರಶ್ನೆಪತ್ರಿಕೆ ಎಷ್ಟೊತ್ತಿಗೆ ತೆಗೆದುಕೊಂಡು ಬರುತ್ತಾರೆ ಎಂದು ನಾನು ವಿಡಿಯೋ ಸಮೇತ ಟ್ವೀಟ್ ಮಾಡಿದ್ದೇನೆ. ಉದ್ದೇಶಪೂರ್ವಕವಾಗಿ ತಮಗೆ ಬೇಕಾದವರನ್ನು ನೇಮಕಾತಿ ಮಾಡಲು ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ. ಪಿಎಸ್‌ಐ ನೇಮಕಾತಿ ಹಗರಣ ಎಲ್ಲಿ ಹೋಯ್ತು? ಪ್ರಿಯಾಂಕ ಖರ್ಗೆ ಎಷ್ಟು ಜಿಗಿದಾಡುತ್ತಿದ್ದರು. ಈಗೇಕೆ ಪಿಎಸ್‌ಐ ಹಗರಣದ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದರಲ್ಲಿ ಪ್ರಿಯಾಂಕ ಖರ್ಗೆ (Priyank Kharge) ಕೈ ಇರಬೇಕು ಎಂದು ನನಗೆ ಅನ್ನಿಸುತ್ತಿದೆ. ಅವರಿಗೆ ಸೇರಿದವರು ನೇಮಕಾತಿ ಆಗಿದ್ದಾರೆ ಎಂದು ನಮಗೂ ಗೊತ್ತಿದೆ. ಅದಕ್ಕೆ ಈಗ ಅವರು ಸುಮ್ಮನಿದ್ದಾರೆ. 150 ಕೋಟಿ ರೂ. ಬಗ್ಗೆ ಈಗ ಎಬ್ಬಿಸಿಕೊಂಡಿದ್ದಾರೆ. ಇದನ್ನು ತನಿಖೆ ಮಾಡಲ್ಲ, ತನಿಖೆಗೆ ಕೊಡಲ್ಲ ಸುಮ್ಮನೆ. ಅಷ್ಟೇ ಸಬ್ ಗೋಲ್‌ಮಾಲ್ ಹೈ ಎಂದರು.ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್ ವಿತರಣೆ