ಕೀವ್: ಉಕ್ರೇನ್ ಪ್ರಜೆಗಳು ರಷ್ಯಾದ ಟ್ಯಾಂಕ್ ವಶಕ್ಕೆ ತೆಗೆದುಕೊಂಡು ಜಾಲಿ ರೈಡ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದೆ.
ಉಕ್ರೇನಿನಲ್ಲಿ ವಾಸಿಸುವ ಪುರುಷರ ಗುಂಪು ಹಿಮಾದಿಂದ ಕೂಡಿದ್ದ ರಸ್ತೆಯಲ್ಲಿ ಸಂತೋಷವಾಗಿ ತಾವು ವಶಕ್ಕೆ ಪಡೆದುಕೊಂಡಿದ್ದ ರಷ್ಯಾದ ಟ್ಯಾಂಕ್‍ನಲ್ಲಿ ಜಾಲಿರೈಡ್ ಮಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ವೀಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ಇದೀಗ ಈ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೇ ಈ ವೀಡಿಯೋ ಸಖತ್ ವೈರಲ್ ಸಹ ಆಗಿದೆ. ಇದನ್ನೂ ಓದಿ: ಭಾರತೀಯರನ್ನು ಒದೆಯುತ್ತಿದ್ದಾರೆ – ದುಃಸ್ವಪ್ನವಾಯ್ತು ಉಕ್ರೇನ್‍ನಿಂದ ಸ್ಥಳಾಂತರಿಸುವ ಆದೇಶ
#Слатино, Харьковская обл.: тероборона где-то отжала российский танк на ходу https://t.co/050tMba0cI #RussiaUkraineWar pic.twitter.com/9jfXPegj4q
— Necro Mancer (@666_mancer) March 2, 2022
ಈ ವೀಡಿಯೋ 24-ಸೆಕೆಂಡ್ ಇದ್ದು, ವೀಡಿಯೋದಲ್ಲಿ ಪ್ರಜೆಗಳ ಗುಂಪು ಹೆಚ್ಚಿನ ವೇಗದ ರಷ್ಯಾದ ಟ್ಯಾಂಕ್ ಓಡಿಸಿಕೊಂಡು ಅವರ ಮೇಲೆ ಕುಳಿತು ಸವಾರಿ ಮಾಡಿದ್ದಾರೆ. ಟ್ಯಾಂಕ್ ಸವಾರಿ ನಮಗೆ ಖುಷಿ ತರುತ್ತಿದೆ ಎಂದು ಹರ್ಷೋದ್ಗಾರವನ್ನು ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ರೈಡ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ಫೋನ್‍ನಲ್ಲಿ ದೃಶ್ಯವನ್ನು ಚಿತ್ರೀಕರಿಸಿದ್ದಾನೆ. ಈ ವೀಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ ಕೊನೆಗೂ ನಾವು ಸಾಧಿಸಿದ್ವಿ. ‘ಉಕ್ರೇನ್‍ಗೆ ವೈಭವ ಮರಳಿದೆ’ ಎಂದು ಫೋಷಣೆಯನ್ನು ಕೂಗುತ್ತ ರೈಡ್ ಎಂಜಯ್ ಮಾಡುತ್ತಿರುವುದನ್ನು ನಾವು ರೆಕಾರ್ಡ್ ಮಾಡಲಾಗಿದೆ. ಈ ನಡುವೆ ವೀಡಿಯೋ ಮಾಡುತ್ತಿದ್ದ ವ್ಯಕ್ತಿ ತನ್ನ ಇತರ ಗೆಳೆಯರನ್ನು ನಕ್ಕು ಹುರಿದುಂಬಿಸುತ್ತಿರುವುದನ್ನು ನಾವು ಗಮನಿಸಬಹುದು.
ಖಾರ್ಕಿವ್‍ನಲ್ಲಿ ಹಿಮದಿಂದ ಆವೃತವಾದ ಮೈದಾನದಲ್ಲಿ ಸಂಚರಿಸುತ್ತಿರುವ ಮಿಲಿಟರಿ ವಾಹನವನ್ನು ಡೈಲಿ ಮೇಲ್‍ನ ಟಿ-80ಬಿವಿಎಂ ಶಸ್ತ್ರಸಜ್ಜಿತ ಯುದ್ಧ ಟ್ಯಾಂಕ್ ಎಂದು ಗುರುತಿಸಲಾಗಿದೆ.
ಹಲವಾರು ಉಕ್ರೇನಿಯನ್ನರು, ರಷ್ಯಾದ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ತ್ಯಜಿಸುವ ವೀಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಯುದ್ಧದಿಂದ ಸೆರೆಹಿಡಿಯಲ್ಪಟ್ಟ ಅಥವಾ ಯುದ್ಧದಿಂದ ಓಡಿಹೋದ ಸೈನಿಕರು ಇವುಗಳನ್ನು ಬಿಟ್ಟುಹೋದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ!
ಉಕ್ರೇನ್‍ನಲ್ಲಿ ಯುದ್ಧದಲ್ಲಿ ಹೋರಾಡುತ್ತಿರುವ ರಷ್ಯಾದ ಸೈನಿಕರು ಅಸ್ತವ್ಯಸ್ತರಾಗಿದ್ದಾರೆ. ‘ಎಲ್ಲರ ಮೇಲೆ ಗುಂಡು ಹಾರಿಸಲು’ ಹೇಳಿದಾಗ ಅವರು ಅಳುತ್ತಿದ್ದಾರೆ ಎಂದು ನಿನ್ನೆ ಪೆಂಟಗನ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತ್ತು.