ಬರ್ಮಿಂಗ್‍ಹ್ಯಾಮ್: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಸೋಲಲು ತಂಡದ ಆಟಗಾರರ ಕಳಪೆ ಬ್ಯಾಟಿಂಗ್ ಕಾರಣ. ಆದರೆ ರೋಚಕ ಪಂದ್ಯದಲ್ಲಿ ಭಾಗವಹಿಸಿದಕ್ಕೆ ಹೆಮ್ಮೆ ಇದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
"I’m proud of the fight that we showed."
Virat Kohli reflects on an epic Test match.#ENGvIND REACTION ????https://t.co/TKJjkJ7Fmf pic.twitter.com/6PWdgK8E99
— ICC (@ICC) August 4, 2018
Advertisement
ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ, ಪಂದ್ಯದಲ್ಲಿ ಹಲವು ಬಾರಿ ನಾವು ಕಮ್ ಬ್ಯಾಕ್ ಮಾಡಿದರೂ ಇಂಗ್ಲೆಂಡ್ ಬೌಲರ್ ಗಳು ನಮ್ಮನ್ನು ರನ್ ಕದಿಯಲು ಬೆವರು ಹರಿಸುವಂತೆ ಮಾಡಿದರು. ಆದರೆ ನಮ್ಮ ಬ್ಯಾಟ್ಸ್ ಮನ್‍ಗಳು ಕಳಪೆ ಹೊಡೆತಗಳಿಗೆ ಕೈ ಹಾಕಿದ್ದು ಸೋಲಿಗೆ ಕಾರಣವಾಗಿದೆ. ಪಂದ್ಯದಲ್ಲಿ ಆಟಗಾರರು ತೋರಿದ ಧನಾತ್ಮಕ ಅಂಶಗಳನ್ನು ಗಮಿನಿಸಿ ಮುಂದಿನ ಪಂದ್ಯಕ್ಕೆ ಅಣಿಯಾಗಬೇಕಿದೆ ಎಂದರು.
Advertisement
ಸೋಲು ಗೆಲುವಿನ ವಿಚಾರ ಹೊರತು ಪಡಿಸಿದರೆ ತಂಡದ ಆಟಗಾರರು ಟೂರ್ನಿಯನ್ನು ರೋಚಕವಾಗಿ ಆರಂಭಿಸಿದ್ದಾರೆ. ಆಟಗಾರರ ಪ್ರದರ್ಶನಕ್ಕೆ ತನಗೆ ಹೆಮ್ಮೆ ಇದೆ ಎಂದು ಹೇಳಿದರು. ಇದೇ ವೇಳೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಪ್ರದರ್ಶನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ ಇಶಾಂತ್, ಉಮೇಶ್ ಯಾದವ್ ಹೋರಾಟ ಆಟವನ್ನು ಪ್ರದರ್ಶಿಸಿದರು.
Advertisement
Standing ovation for Kohli. 200 in the game and the feeling will be "We needed more". The weight a champion carries!
— Harsha Bhogle (@bhogleharsha) August 4, 2018
Advertisement
ಬ್ಯಾಟಿಂಗ್ ನಲ್ಲಿ ಏಕಾಂಗಿ ಹೋರಾಟ ನಡೆಸಿದ ನಾಯಕ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಸಿಡಿಸಿ ತಂಡ ಭಾರಿ ಹಿನ್ನಡೆ ಅನುಭವಿಸುವುದನ್ನು ತಪ್ಪಿಸಿದ್ದರು. 2ನೇ ಇನ್ನಿಂಗ್ಸ್ ನಲ್ಲೂ 51 ರನ್ ಸಿಡಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡ್ಯೊದಿದ್ದರು. ಆದರೆ ತಂಡದ ಇತರೇ ಯಾವೊಬ್ಬ ಆಟಗಾರನ್ನು ಕೊಹ್ಲಿಗೆ ಸಾಥ್ ನೀಡದ ಕಾರಣ ಸೋಲಿನ ಕಹಿ ಸವಿಯಬೇಕಾಯಿತು.
5 ಪಂದ್ಯಗಳ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಲ್ಲಿ 31 ರನ್ ಸೋಲುಂಡ ಟೀಂ ಇಂಡಿಯಾ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆ ಅನುಭವಿದೆ. ನಾಯಕ ವಿರಾಟ್ ಕೊಹ್ಲಿ ಏಕಾಂಗಿ ದಿಟ್ಟ ಹೋರಾಟದ ಬಳಿಕವೂ ತಂಡದ ಇತರೇ ಆಟಗಾರರು ತೋರಿದ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
Indians scoring 200+ runs in a Test most times:
11 KOHLI
10 Tendulkar, Dravid
9 Sehwag
6 Gavaskar
4 Laxman#EngvInd
— Bharath Seervi (@SeerviBharath) August 4, 2018