ದಾವಣಗೆರೆ: ತೋಟಗಾರಿಕಾ ಸಚಿವ ಮನಗೋಳಿ ಸೈನಿಕರ ಬಗ್ಗೆ ಬಾಲಿಷ ಹೇಳಿಕೆ ನೀಡಿರುವುದು ಅವರ ಮರೆಗುಳಿತನಕ್ಕೆ ಸಾಕ್ಷಿ. ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗೋದಿಲ್ಲ ಎಂದು ಶಾಸಕ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಗ್ರರನ್ನು ಕೊಲ್ಲಬಾರದು ಎಂಬ ಮನಗೋಳಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಮನಗೋಳಿಯವರಿಗೆ ದೇಶದ ಸಾಮಾನ್ಯ ವ್ಯಕ್ತಿಗಳ ಭಾವನೆ, ಆಕ್ರೋಶ ಹಾಗೂ ನೋವು ಕಾಣಿಸುತ್ತಿಲ್ಲ. ಆದ್ದರಿಂದ ಈ ರೀತಿಯಾಗಿ ಹೇಳಿದ್ದಾರೆ. ಭಯೋತ್ಪಾದನೆಯನ್ನ ಬೇರು ಸಮೇತ ಕಿತ್ತು ಹಾಕಬೇಕು. ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗೋದಿಲ್ಲ ಎಂದು ಮನಗೋಳಿ ಅವರಿಗೆ ತೀರುಗೇಟು ನೀಡಿದ್ದಾರೆ.
Advertisement
Advertisement
ವೀರಯೋಧ ಅಭಿನಂದನ್‍ಗೆ ಇಡೀ ದೇಶವೇ ಸೆಲ್ಯೂಟ್ ಹೊಡೆಯಬೇಕು. ಜಿನೀವಾ ಒಪ್ಪಂದಕ್ಕೆ ಪಾಕಿಸ್ತಾನವು ಸಹಿ ಹಾಕಿದೆ. ಅಭಿನಂದನ್ ಅವರಿಗೆ ಯಾವುದೇ ತೊಂದರೆ ನೀಡದೆ ವಾಪಸ್ ಕಳುಹಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಅಭಿನಂದನ್ ಆದಷ್ಟು ಬೇಗ ಭಾರತಕ್ಕೆ ವಾಪಸ್ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಏರ್ ಸ್ಟ್ರೈಕ್ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಯಡಿಯೂರಪ್ಪ ಯಾವ ಪದ ಬಳಸಿದ್ದಾರೆ ಗೊತ್ತಿಲ್ಲ. ಯಾರೂ ಕೂಡ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಚುನಾವಣೆ ಸಿದ್ಧತೆ ಬೂತ್ ಮಟ್ಟದಿಂದ ಕಳೆದ ಎರಡು ಮೂರು ತಿಂಗಳಿಂದ ಆಗುತ್ತಿದೆ. ಮಾರ್ಚ್ 2ರಂದು ಇಡೀ ರಾಜ್ಯಾದ್ಯಂತ ಒಂದೇ ದಿನ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ. 28 ಸ್ಥಾನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv