ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ (AAP) ನಮಗೆ ತೊಂದರೆಯಾಗುತ್ತಿದೆ. ಆಪ್ ಪಕ್ಷದವರು ಬಿಜೆಪಿಗೆ (BJP) ಅನುಕೂಲವಾಗುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ (Dinesh Gundu Rao) ಕಿಡಿ ಕಾರಿದ್ದಾರೆ.
ಗುಜರಾತ್ (Gujarat) ಹಾಗೂ ಹಿಮಾಚಲ ಪ್ರದೇಶದ (Himachal Pradesh) ಚುನಾವಣಾ ಫಲಿತಾಂಶದ (Election Result) ಬಗ್ಗೆ ಪ್ರತಿಕ್ರಿಯಿಸಿದ ಅವರು ಆಪ್ ಪಕ್ಷದಿಂದ ನಮಗೆ ತೊಂದರೆಯಾಗುತ್ತಿದೆ. ಬಿಜೆಪಿಗೆ ಅನುಕೂಲವಾಗುವಂತೆ ಅವರು ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಾವು ಗೋವಾ ಸೇರಿದಂತೆ ಹಲವು ಕಡೆ ನೋಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹಿಮಾಚಲದಲ್ಲಿ ಹಾವು, ಏಣಿ ಆಟ – ಪಕ್ಷೇತರರೇ ನಿರ್ಣಾಯಕ?
Advertisement
Advertisement
ಗುಜರಾತ್‌ನಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರುತ್ತಿಲ್ಲ. ವಿರೋಧ ಪಕ್ಷಗಳಲ್ಲಿನ ವೋಟ್ ವಿಭಜನೆಯಾಗುತ್ತಿದೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ನಮಗೆ ಗುಜರಾತ್‌ನಲ್ಲಿ ಹೆಚ್ಚು ಸೀಟ್‌ಗಳ ನಿರೀಕ್ಷೆಯಿತ್ತು. ಆದರೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ – ಗುಜರಾತ್‌ನಲ್ಲಿ ದಾಖಲೆ ಬರೆಯುತ್ತಾ ಬಿಜೆಪಿ?