ರಾಮಮಂದಿರಕ್ಕೆ ನಾವ್ ಕೈ ಜೋಡಿಸ್ತೀವಿ, ಆದ್ರೆ ಒಂದು ಕಂಡೀಷನ್: ಕೈ ಮುಖಂಡ

Public TV
1 Min Read
RAM MANDIR CONGRESS

-ಹಿಂದೂಪರ ಸಂಘಟನೆಗಳೂ ಮೊದಲು ಮೋದಿಯವರನ್ನು ಮಕಾಡೆ ಮಲಗಿಸಿ

ಶಿವಮೊಗ್ಗ: ಆರ್‍ಎಸ್‍ಎಸ್, ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಒಟ್ಟಾಗಿ ಸೇರಿ ಪ್ರಧಾನಿ ಮೋದಿಯವರನ್ನು ಸೋಲಿಸಿದರೆ, ರಾಮಮಂದಿರ ನಿರ್ಮಾಣಕ್ಕೆ ನಾವು ನಿಮ್ಮೊಂದಿಗೆ ಬರುತ್ತೇವೆಂದು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ನಗರದಲ್ಲಿ ರಾಮಮಂದಿರ ನಿರ್ಮಾಣ ಕುರಿತು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಮಮಂದಿರ ಕಟ್ಟಲು ಮುಂದಾಗಲಿ. ನಾವೂ ಸಹ ರಾಮಮಂದಿರ ನಿರ್ಮಾಣಕ್ಕೆ ಬರುತ್ತೇವೆ. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದೂಪರ ಸಂಘನೆಗಳಾದ ಆರ್‍ಎಸ್‍ಎಸ್, ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಒಟ್ಟಾಗಿ ನರೇಂದ್ರ ಮೋದಿಯವರನ್ನು ಮಕಾಡೆ ಮಲಗಿಸಿ. ನಂತರ ನಾವು ನಿಮ್ಮೊಂದಿಗೆ ಬರುತ್ತೇವೆ. ಹಿಂದೂಗಳು-ಮುಸಲ್ಮಾನರು ಸೇರಿ ಒಟ್ಟಿಗೆ ರಾಮಮಂದಿರ ನಿರ್ಮಾಣ ಮಾಡೋಣ ಎಂದು ಹೇಳಿದ್ದಾರೆ.

vlcsnap 2018 12 03 20h47m20s196

ಈ ನಿಟ್ಟಿನಲ್ಲಿ ಸ್ವಾಮೀಜಗಳ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಮಮಂದಿರ ನಿರ್ಮಾಣ ಮಾಡಬೇಕು. ಆದರೆ ಈಗ ಚುನಾವಣಾ ಸಮಯದಲ್ಲಿ ಮಾತ್ರ ರಾಮಮಂದಿರ ನಿರ್ಮಾಣ ಕಾರ್ಯ ನೆನಪಾಗುತ್ತಿದೆ. ಘರ್ಷಣೆಗೆ ಅವಕಾಶ ನೀಡದೇ ರಾಮಮಂದಿರ ಮಾಡಲಿ. ಅದನ್ನು ಬಿಟ್ಟು ಚುನಾವಣೆಗಾಗಿ ರಾಮಮಂದಿರ ವಿಷಯವನ್ನು ಚರ್ಚೆಗೆ ತರುವುದನ್ನು ನಾವು ಒಪ್ಪುವುದಿಲ್ಲವೆಂದು ತಿಳಿಸಿದ್ದಾರೆ.

narendra modi

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *