BelgaumDistrictsKarnatakaLatestMain Post

ದೇಶ ಕಾಯುವ ಯೋಧರಿಂದ್ಲೇ ನಾವು ಸುರಕ್ಷಿತ- ಮೃತ ಸೈನಿಕರ ಕುಟುಂಬಗಳಿಗೆ ಜೊಲ್ಲೆ ಸಾಂತ್ವನ

ಚಿಕ್ಕೋಡಿ (ಬೆಳಗಾವಿ): ದೇಶ ಕಾಯುವ ಯೋಧರಿಂದಲೇ ನಮ್ಮ ದೇಶ ಸುರಕ್ಷಿತವಾಗಿದ್ದು, ಅವರಿಂದಲೇ ನಾವೆಲ್ಲ ನಿರಾಳವಾಗಿ ಜೀವನ ಸಾಗಿಸುತ್ತಿದ್ದೇವೆ ಎಂದು ಚಿಕ್ಕೋಡಿ ಲೋಕಸಭಾ ಸಂಸದ ಅಣ್ಣಾಸಾಹೇಬ ಜೊಲ್ಲೆ (Annasaheba Jolle) ಹೇಳಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವಾಗಲೇ ಅನಾರೋಗ್ಯದಿಂದ ಸಾವನ್ನಪ್ಪಿದ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧ (Soldier) ಶಿವಾನಂದ ಶಿರಗಾಂವಿ ಹಾಗೂ ಬೋರಗಲ್ ಗ್ರಾಮದ ಯೋಧ ಕೆಂಪಣ್ಣ ಚೌಗಲಾ ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಇದನ್ನೂ ಓದಿ: 30 ಸಾವಿರ ವಾಟ್ಸಾಪ್ ಉಸ್ತುವಾರಿಗಳ ನೇಮಕ – ಗುಜರಾತ್‍ನಲ್ಲಿ ಹೇಗಿದೆ ಬಿಜೆಪಿ ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್?

ಒಂದೇ ದಿನ ಎರಡು ಕುಟುಂಬಗಳ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ ಸಂಸದ ಜೊಲ್ಲೆ ಯೋಧರನ್ನ ಕಳೆದುಕೊಂಡಿರುವುದು ಕುಟುಂಬಸ್ಥರಿಗೆ ಅಷ್ಟೇ ನೋವು ತಂದಿಲ್ಲ. ನನ್ನನ್ನ ಸೇರಿ ಇಡೀ ಗ್ರಾಮವೇ ದುಃಖದಲ್ಲಿದೆ. ಯೋಧರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ನಿಮ್ಮ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ ಎಂದರು.

ಯೋಧರ ಕುಟುಂಬಗಳಿಗೆ ಯಾವುದೇ ತೊಂದರೆಗಳಿದ್ದರೆ ನಾನು ಸಹಾಯ ಮಾಡಲು ಸಿದ್ಧ ಎಂದರು. ಈ ಸಂದರ್ಭದಲ್ಲಿ ಬಿಜೆಪಿ (BJP) ಮುಖಂಡರಾದ ಶಶಿಕಾಂತ ನಾಯಿಕ, ರವಿ ಹಂಜಿ, ಪರಗೌಡ ಪಾಟೀಲ, ಮಹಾವೀರ ಭಾಗಿ, ಚಿದಾನಂದ ಕಿಲ್ಲೇದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Live Tv

Leave a Reply

Your email address will not be published. Required fields are marked *

Back to top button