ನವದೆಹಲಿ: ಒಪೆಕ್(ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಸದಸ್ಯರ ವಿರುದ್ಧದ ನಿರ್ಬಂಧಗಳನ್ನು ತೆಗೆದುಹಾಕುವ ಕುರಿತು ಮಾತುಕತೆ ಮುಂದುವರಿಯುತ್ತಿರುವ ಹೊತ್ತಿನಲ್ಲೇ ಇರಾನ್ ಭಾರತದ ಇಂಧನ ಭದ್ರತೆಯ ಅಗತ್ಯಗಳನ್ನು ಪೂರೈಸಲು ಸಿದ್ಧವಾಗಿದೆ ಎಂದು ಅಲ್ಲಿನ ರಾಯಭಾರಿ ಕಚೇರಿ ಶುಕ್ರವಾರ ತಿಳಿಸಿದೆ.
ಇರಾನ್ ಭಾರತಕ್ಕೆ 2ನೇ ಅತಿದೊಡ್ಡ ತೈಲ ಪೂರೈಕೆದಾರರಾಗಿದೆ. ಆದರೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನೊಂದಿಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿದ್ದರಿಂದ ಹಾಗೂ ಅದರ ತೈಲ ರಫ್ತಿನ ಮೇಲೆ ನಿರ್ಬಂಧಗಳನ್ನು ಮರುಸ್ಥಾಪಿಸಿದ ನಂತರ ನವದೆಹಲಿ ಟೆಹ್ರಾನ್‌ನಿಂದ ಆಮದು ನಿಲ್ಲಿಸಬೇಕಾಯಿತು. ಇದನ್ನೂ ಓದಿ: ಮಂಗಳೂರಿಗೆ ಬರಲಿದೆ ರಷ್ಯಾದ ಅಗ್ಗದ ಕಚ್ಚಾ ತೈಲ
Advertisement
Advertisement
ಇದೀಗ ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದರಿಂದ, `ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನವನ್ನು ಎರಡು ದೇಶಗಳ ಕಂಪನಿಗಳು ಪರಸ್ಪರ ನೇರವಾಗಿ ವ್ಯವಹರಿಸಲು ಸಹಕರಿಸುತ್ತದೆ. ಇದರೊಂದಿಗೆ ಮಧ್ಯವರ್ತಿ ಹಾವಳಿ ತಪ್ಪಿಸಲು ಸಹಾಯ ಮಾಡುತ್ತದೆ’ ಎಂದು ಅಲಿ ಚೆಗೆನಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ
Advertisement
ವಿಶ್ವದ 3ನೇ ಅತಿ ದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಆಗಿರುವ ಭಾರತ, ತನ್ನ ಕಚ್ಚಾ ತೈಲದ ಶೇ.80 ರಷ್ಟು ಅಗತ್ಯಗಳನ್ನು ಆಮದು ಮಾಡಿಕೊಳ್ಳುತ್ತದೆ. ಈಗಾಗಲೇ ನಿರ್ಬಂಧಗಳಿಂದಾಗಿ ಭಾರತ-ಇರಾನ್ ವ್ಯಾಪಾರವು ಕಳೆದ ವರ್ಷಗಳಲ್ಲಿ 2 ಬಿಲಿಯನ್ ಡಾಲರ್ (ಸುಮಾರು 1ಲಕ್ಷ ಕೋಟಿ) ಗಳಷ್ಟು ನಷ್ಟ ಅನುಭವಿಸಿದೆ. ಎರಡೂ ದೇಶಗಳು ರೂಪಾಯಿ-ರಿಯಾಲ್ ವ್ಯಾಪಾರ ಕಾರ್ಯವಿಧಾನಗಳನ್ನು ಪ್ರಾರಂಭಿಸಿದರೆ, ದ್ವಿಪಕ್ಷೀಯ ವ್ಯಾಪಾರವು 30 ಶತಕೋಟಿ ಡಾಲರ್ (22 ಲಕ್ಷ ಕೋಟಿಗೂ ಅಧಿಕ)ನಷ್ಟು ವಹಿವಾಟು ಬೆಳೆಯಬಹುದು ಎಂದು ಚೆಗೆನಿ ಹೇಳಿದ್ದಾರೆ.