ತುಮಕೂರು: ಮುಂಬರುವ ಚುನಾವಣೆಯಲ್ಲಿ (Elections) 123 ಸ್ಥಾನಗಳಲ್ಲಿ ಜೆಡಿಎಸ್ ಗೆದ್ದರೆ ದಲಿತ ಸಿಎಂ (Dalit CM) ಮಾಡಲು ನಾವು ತಯಾರಿದ್ದೇವೆ. ಅದಕ್ಕೆ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅಭಿಪ್ರಾಯಪಟ್ಟರು.
ಗುರುವಾರ ‘ಪಂಚರತ್ನ ರಥಯಾತ್ರೆ’ ತುಮಕೂರು ನಗರಕ್ಕೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್‌ಡಿಕೆ ಅವರು, ದಲಿತರ ಬಗ್ಗೆ ಅಭಿಮಾನ ಇಟ್ಕೊಂಡಿರೋ ಸಿದ್ದರಾಮಯ್ಯ ಏನ್ ಮಾತಾಡಿದ್ದಾರೆ ದಾಖಲೆ ಕೊಡ್ಲ? ಅಸ್ಪಶ್ಯರ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ದಾರೆ. ಮುಖ್ಯಮಂತ್ರಿ ಇದ್ದಾಗ ದಲಿತ ಕುಟುಂಬ ಮಹಿಳೆಯನ್ನ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲೇ ಆರೈಕೆ ಮಾಡಿದ್ದೆವು. ಯಾವ್ ಮುಖ್ಯಮಂತ್ರಿ ಮಾಡಿದ್ದಾರೆ ಹೇಳ್ಲಿ ಎಂದು ಸಿದ್ದು ವಿರುದ್ಧ ಗುಡುಗಿದರು. ಇದನ್ನೂ ಓದಿ: ಮುಂಬೈ ಹೋಟೆಲ್‌ವೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಿದ್ಧಾರ್ಥ್ -ಅದಿತಿ
Advertisement
Advertisement
ಜೆಡಿಎಸ್ (JDS) ಅಧಿಕಾರಕ್ಕೆ ಬಂದ್ರೆ ದಲಿತ ಸಿಎಂ ವಿಚಾರವಾಗಿ ಮಾತನಾಡಿ, 123 ಬಂದ್ರೆ ದಲಿತ ಮುಖ್ಯಮಂತ್ರಿ ಯಾಕೆ ಆಗ್ಬಾರದು? ದಲಿತರನ್ನ ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ದೇವೆಗೌಡರು (HD Devegowda) ಮೀಸಲಾತಿ ಇಲ್ಲದೇ ಇದ್ದಾಗ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನ ನಾವು ಮರೆಯೋ ಹಾಗಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: IAS ಆಕಾಂಕ್ಷಿ ಅಂತಾ ಬಿಲ್ಡಪ್; ಬೆತ್ತಲೆ ವೀಡಿಯೋ ಇಟ್ಕೊಂಡು ಯುವಕನಿಗೆ 40 ಲಕ್ಷ ಪಂಗನಾಮ – ಖತರ್ನಾಕ್ ಲೇಡಿ ಅರೆಸ್ಟ್
Advertisement
Advertisement
ರಥಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮದ ಮೂಲಕ ನಾಡಿನ ಪ್ರತಿ ಕುಟುಂಬಕ್ಕೆ ತಲುಪಬೇಕು. ಪರಿವರ್ತನೆ ಹಾದಿಗೆ ಈ ಕಾರ್ಯಕ್ರಮ ಉಪಯೋಗ ಆಗಲಿದೆ. ಈ ರೀತಿಯ ಜನತೆಯ ಅಲೆ ಬರುತ್ತಿರುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಹಣಕೊಟ್ಟ ಕರೆದುಕೊಂಡು ಬಂದಿಲ್ಲ. ಮಹಿಳೆಯರು ರಾತ್ರಿ 11, 12 ಗಂಟೆಯಾದ್ರೂ ಸಭೆಗೆ ಬರುತ್ತಿದ್ದಾರೆ. ಇದನ್ನು ನೋಡಿದರೆ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದಾರೆ. ಒಂದು ಬಾರಿ ಈ ಪಕ್ಷಕ್ಕೆ ಸಂಪೂರ್ಣ ಆಶೀರ್ವಾದ ಮಾಡಿ. ಇದನ್ನೇ ಜನತೆ ಮುಂದೆ ಇಟ್ಟಿದ್ದೇನೆ. ಮುಂದಿನ ಮಾರ್ಚ್ವರೆಗೂ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಬಿ ಟೀಂ ಎಂದು ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ವಿರುದ್ಧ ಮಾತನಾಡಲು ಕಾಂಗ್ರೆಸ್‌ಗೆ ಬೇರೆ ಏನಿಲ್ಲ. ಹೀಗೆ ಹೇಳಿ ಹೇಳಿ ಅವರು 70 ಸ್ಥಾನಕ್ಕೆ ಬಂದಿದ್ದಾರೆ ಎಂದು ಕುಟುಕಿದರು.