ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲಿಯೇ ಸ್ಪರ್ಧಿಸಲಿ. ಅವರು ಸ್ಪರ್ಧೆ ಬಯಸಿದರೆ ಕುಷ್ಟಗಿಯಿಂದ ನಾನು, ಕೊಪ್ಪಳದಿಂದ ಕೆ.ರಾಘವೇಂದ್ರ ಹಿಟ್ನಾಳ್ ಬಿಟ್ಟುಕೊಡುತ್ತೀವಿ ಎಂದು ಅಮರೇಗೌಡ ಬಯ್ಯಾಪುರ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಈ ಶಕ್ತಿ ಇಲ್ಲ. ಕೊಪ್ಪಳ ಕ್ಷೇತ್ರಕ್ಕೆ ಬಂದರೂ ನಾನು ಬಿಟ್ಟು ಕೊಡಲು ರೆಡಿ ಇದ್ದೇನೆ. ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಕೆಲಸ ಮಾಡುತ್ತೇವೆ. ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲೇ ಬಂದರೂ ಗೆಲ್ಲುತ್ತಾರೆ ಎಂದು ಹೇಳಿದರು.
Advertisement
Advertisement
ರಾಜ್ಯದಲ್ಲಿ ಕೋಮು, ಜಾತಿಗಳು ಮೊದಲಿನಿಂದಲೂ ಇವೆ. ಆದರೆ ಈಗ ಅವುಗಳನ್ನು ಪ್ರಚೋದನೆ ಮಾಡಲಾಗುತ್ತಿದೆ. ಇದು ರಾಜಕೀಯ ಕಾರಣಕ್ಕೆ ಪ್ರಚೋದನೆ ಮಾಡಲಾಗುವುದು ಎಂದು ಅಮರೇಗೌಡ ಹೇಳಿದರು. ಇದನ್ನೂ ಓದಿ: ಇಂದು 90 ಕೇಸ್ – ಬೆಂಗ್ಳೂರಲ್ಲಿ 85, ಐದು ಜಿಲ್ಲೆಗಳಲ್ಲಿ ತಲಾ 5 ಪ್ರಕರಣ
Advertisement
ರಾಜ್ಯದಲ್ಲಿಯ ಶಾಖೋತ್ಪನ್ನ ಸ್ಥಾವರಗಳನ್ನು ಖಾಸಗಿ ನೀಡುವ ವದಂತಿ ಇದೆ. ಆರ್ ಟಿಪಿಎಸ್, ಬಿಟಿಪಿಎಸ್ ಹಾಗೂ ವೈಟಿಪಿಎಸ್ ಖಾಸಗಿಯವರಿಗೆ ನೀಡುತ್ತಾರೆ ಎಂಬ ವದಂತಿ ಇದೆ. ಇದು ಆತಂಕಕಾರಿ. ಏ.24 ರಂದು ಕುಷ್ಟಗಿಯಲ್ಲಿ ಸಂವಿಧಾನ ಉಳಿಸಿ, ಸಂವಿಧಾನ ರಕ್ಷಣೆ ಕಾರ್ಯಕ್ರಮ ವಿವಿಧ ಸಂಘಟನೆಗಳಿಂದ ಆಯೋಜನೆ, ಈ ಕಾರ್ಯಕ್ರಮವು ಪಕ್ಷಾತೀತವಾಗಿ ಆಯೋಜನೆ ಮಾಡಲಾಗಿದೆ. ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ ಸೇರಿ ಭಾಗಿಯಾಗುತ್ತಿದ್ದಾರೆ ಎಂದರು.
Advertisement
ಸಂವಿಧಾನವನ್ನು ಉಳಿಸಿಕೊಳ್ಳುವುದರ ಜೊತೆಗೆ ಇನ್ಜಷ್ಟು ಬಡವರಿಗೆ ಯೋಜನೆ ನೀಡುವ ಕುರಿತು ಚರ್ಚೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ಸಂವಿದಾನದ ಬದಲಾವಣೆ ಯಾದರೆ, ಸಮಾಜದಲ್ಲಿ ಆತಂಕವಿದೆ, ಸಂವಿದಾನ ಬದಲಾವಣೆ ಬೇಡ ಸಂವಿಧಾನ ಗಟ್ಟಿಗೊಳಿಸಬೇಕು, ಸಂವಿಧಾನ ತಿದ್ದಪಡಿ ಸಹಜ. ಆದರೆ ಮೀಸಲಾತಿ ವ್ಯವಸ್ಥೆ ಬದಲಾಗಿಲ್ಲ. ಸಂವಿಧಾನ ತಿದ್ದುಪಡಿಯಾಗಲಿ, ಸಂವಿಧಾನ ಬದಲಾವಣೆ ಬೇಡ ಎಂದರು.