BidarDistrictsKarnatakaLatestMain Post

ಅಭಿವೃದ್ಧಿಯಾಗದಿದ್ರೆ ಕರ್ನಾಟಕ ಸೇರಲು ಸಿದ್ಧ – ಮಹಾ ಸರ್ಕಾರಕ್ಕೆ ಮರಾಠಿಗರಿಂದ ಎಚ್ಚರಿಕೆ

ಬೀದರ್: ಬೆಳಗಾವಿ (Belagavi) ಗಡಿ ವಿವಾದ (Border Dispute) ಭುಗಿಲೆದ್ದ ಬೆನ್ನಲ್ಲೇ ಬೀದರ್ (Bidar) ಗಡಿ ಭಾಗದ ಮರಾಠಿಗರು (Marathas) ನಮ್ಮ ಗ್ರಾಮ ಅಭಿವೃದ್ಧಿ ಮಾಡದೇ ಇದ್ದರೆ ಕರ್ನಾಟಕ (Karnataka) ಸೇರಲು ಸಿದ್ಧ ಎಂದು ಮಹಾರಾಷ್ಟ್ರ (Maharashtra) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಮನಸೋತಿರುವ ಬೀದರ್ ಗಡಿಯ ಮಹಾರಾಷ್ಟ್ರದ ಲಾತೂರು ಜಿಲ್ಲೆಯ ದೇವಣಿ ತಾಲೂಕಿನ ಬೊಂಬಳಿ (Bombali) ಗ್ರಾಮಸ್ಥರು ಮಹಾರಾಷ್ಟ್ರದ ಸರ್ಕಾರಕ್ಕೆ ಕರ್ನಾಟಕ ಸೇರುವುದಾಗಿ ಹೇಳಿ ಶಾಕ್ ನೀಡಿದ್ದಾರೆ.

ಅಭಿವೃದ್ಧಿಯಾಗದಿದ್ರೆ ಕರ್ನಾಟಕ ಸೇರಲು ಸಿದ್ಧ - ಮಹಾ ಸರ್ಕಾರಕ್ಕೆ ಮರಾಠಿಗರಿಂದ ಎಚ್ಚರಿಕೆ

ಅಭಿವೃದ್ಧಿ ವಂಚಿತ ಗಡಿ ಗ್ರಾಮ ಬೊಂಬಳಿ ಗ್ರಾಮಸ್ಥರು ಪಂಚಾಯಿತಿ ಚುನಾವಣೆಯನ್ನೂ ಕೂಡಾ ಬಹಿಷ್ಕಾರ ಮಾಡಿದ್ದು, ಲಾತೂರು ಜಿಲ್ಲಾಧಿಕಾರಿಗೆ ಹಾಗೂ ದೇವಣಿ ತಾಲೂಕಿನ ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ. ನಮ್ಮ ಗ್ರಾಮ ಮೂಲಸೌಕರ್ಯಗಳಿಂದ ಅಭಿವೃದ್ಧಿ ಹೊಂದದೇ ಇದ್ದರೆ ಕರ್ನಾಟಕ ರಾಜ್ಯಕ್ಕೆ ಸೇರಲು ನಿರ್ಧರಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರರಿಗೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಆಪ್‌ಗೆ ಬಿಜೆಪಿಯಿಂದಲೇ ಫಂಡಿಂಗ್: ಸಿದ್ದರಾಮಯ್ಯ

ಅಭಿವೃದ್ಧಿಯಾಗದಿದ್ರೆ ಕರ್ನಾಟಕ ಸೇರಲು ಸಿದ್ಧ - ಮಹಾ ಸರ್ಕಾರಕ್ಕೆ ಮರಾಠಿಗರಿಂದ ಎಚ್ಚರಿಕೆ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಿಂದ 50 ಕಿ.ಮೀ ದೂರದಲ್ಲಿರುವ ಬೊಂಬಳಿ ಗ್ರಾಮ ಕರ್ನಾಟಕದ ಬೀದರ್ ಜಿಲ್ಲೆಗೆ ಸೇರಲು ತುದಿಗಾಲಿನಲ್ಲಿ ನಿಂತಿದೆ. ಹಲವು ಬೇಡಿಕೆಗಳನ್ನಿಟ್ಟು ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಫಲ ನೀಡಿತು ಚಾಣಕ್ಯ ಜೋಡಿಯ ತಂತ್ರ – ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳೇನು?

Live Tv

Leave a Reply

Your email address will not be published. Required fields are marked *

Back to top button