ವಿಜಯಪುರ: ದೂರುದಾರ ಸ್ನೇಹಮಯಿ ಕೃಷ್ಣಗೆ (Snehamayi Krishna) ರಕ್ಷಣೆ ಕೊಡಲು ನಾವು ಬದ್ಧ ಎಂದು ಸಚಿವ ಎಂ.ಬಿ ಪಾಟೀಲ ಹೇಳಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರನ್ನು (CM Siddaramaiah) ಅರೆಸ್ಟ್ ಮಾಡಲು ಸ್ನೇಹಮಯಿ ಕೃಷ್ಣ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಂಧನ ಯಾಕೆ ಆಗಬೇಕು. ದೂರುದಾರರಿಗೆ ರಕ್ಷಣೆ ಕೊಡಲು ನಮ್ಮಲ್ಲಿ ಇದ್ದಾರೆ. ಆ ರೀತಿ ಸಿದ್ದರಾಮಯ್ಯ ಆಗಲಿ ಅಥವಾ ಬೇರೆಯಾರೇ ಆಗಲಿ ನಮ್ಮಲ್ಲಿ ಮಾಡುವುದಿಲ್ಲ. ನಿರ್ಭೀತಿಯಿಂದ ಅವರು ಇರಬಹುದು ಎಂದು ಪ್ರತಿಕ್ರಿಯಿಸಿದರು.ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆ ವೈದ್ಯೆಯ ಯಡವಟ್ಟಿಗೆ ಬಾಣಂತಿ ಬಲಿ!
Advertisement
Advertisement
ಖರ್ಗೆ ಕುಟುಂಬದಿಂದ ಸಿಎ ಸೈಟ್ ವಾಪಸ್ ವಿಚಾರ:
ಇದೇ ವೇಳೆ ಖರ್ಗೆ ಕುಟುಂಬ ಸಿಎ ಸೈಟ್ (CA Site) ವಾಪಸ್ ನೀಡಿರುವ ವಿಚಾರವಾಗಿ ಮಾತನಾಡಿ, ನಾನು ದೇಶದಲ್ಲಿ ಇರಲಿಲ್ಲ. ಬೆಂಗಳೂರಿಗೆ ಹೋಗಿಲ್ಲ. ಸಿದ್ದಾರ್ಥ ವಿಹಾರ ಟ್ರಸ್ಟ್‌ನ ಸಿಎ ಸೈಟ್ ವಾಪಸ್ ನೀಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಮೇರಿಕಾದಿಂದ ನೇರವಾಗಿ ವಿಜಯಪುರ ಬಂದಿದ್ದೇನೆ. ನಾನು ಬೆಂಗಳೂರು ಹೋದ ನಂತರ ನೋಡುತ್ತೇನೆ. ಗೊತ್ತಿರದ ವಿಷಯದ ಕುರಿತು ನಾನು ಹೇಗೆ ಮಾತನಾಡಲಿ ಎಂದು ಪ್ರಶ್ನಿಸಿದ್ದಾರೆ.
Advertisement
ಗೌರಿ ಲಂಕೇಶ್ ಹತ್ಯೆ ಕೇಸ್ ವಿಚಾರ:
ಗೌರಿ ಲಂಕೇಶ್ (Gauri Lankesh) ಹತ್ಯೆ ಕೇಸ್ ಆರೋಪಿಗಳಿಗೆ ಸನ್ಮಾನ ಮಾಡಿದ್ದು ಅತ್ಯಂತ ಕೆಟ್ಟ ಕೆಲಸ. ಸನ್ಮಾನ ಮಾಡಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಈ ರೀತಿ ಉಮೇಶ ವಂದಾಲ ಆಂಡ್ ಕಂಪನಿ ಎಂಬುವವರು ಮಾಡಿದ್ದಾರೆ. ಯಾರು ಸ್ವಾಗತ ಮಾಡಿ, ಸನ್ಮಾನ ಮಾಡಿದ್ದಾರೆ ಅವರು ಅರಿತುಕೊಳ್ಳಬೇಕು. ಯಾರ ಜೀವವನ್ನು ತಗೆದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂದರು.
Advertisement
ಎಂ.ಎಂ ಕಲಬುರಗಿ (MM Kalaburagi) ಅವರು ವಿಜಯಪುರದ ಮಗ, ಹೆಮ್ಮೆಯ ಪುತ್ರ. ಅವರು ಸಿಂದಗಿ ತಾಲೂಕಿನ ಯರಗಲ್‌ನವರು. ನಮ್ಮ ಜಿಲ್ಲೆಯ ಒಬ್ಬ ಮೇಧಾವಿ, ಸಾಹಿತಿಯನ್ನು ಕೊಂದವರಿಗೆ ಇವರು ಸನ್ಮಾನ ಮಾಡುತ್ತಾರೆ ಎಂದರೆ ಅದೊಂದು ಹೇಯ ಕೃತ್ಯ. ಹೊಲಸು ಕೃತ್ಯ. ಅದರ ಬಗ್ಗೆ ನಾನು ವಿಚಾರ ಮಾಡುತ್ತೇನೆ. ಸಾಧ್ಯವಾದರೆ ಕೇಸ್ ಕೂಡ ಮಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಗದಗ, ಧಾರವಾಡದಲ್ಲಿ ಧಾರಾಕಾರ ಮಳೆ- ರಸ್ತೆ ಸಂಪರ್ಕ ಸಂಪೂರ್ಣ ಬಂದ್