ಬೆಂಗಳೂರು: ಕೋವಿಡ್ ನಿಯಮ ಪಾಲಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ. ಯಾಕೆ ರಾಮನಗರಕ್ಕೆ ಮಾತ್ರ ನಿಷೇಧಾಜ್ಞೆ ಹಾಕಿದ್ದಾರೆ. ಅದರ ಅರ್ಥ ಏನು? ದುರುದ್ದೇಶ ಸರ್ಕಾರದ್ದು, ನಮ್ಮ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿಳಂಬ ಆಗಿರುವುದು ಬಿಜೆಪಿಯಿಂದ. ಯಾವುದೇ ಅಡೆತಡೆ ಇಲ್ಲದಿದ್ದರೂ ಯಾಕೆ ಕೆಲಸ ಮಾಡಿಲ್ಲ. ಕೇಂದ್ರಕ್ಕೆ ಯಾಕೆ ಒತ್ತಾಯ ಮಾಡಿಯೇ ಇಲ್ಲ. ರಾಜಕೀಯ ಬಣ್ಣ ನೀಡುವ ಪ್ರಯತ್ನ ಬಿಜೆಪಿ ಸರ್ಕಾರ ಮಾಡುತ್ತಿದೆ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಬದಲು ನೀವೇನು ಮಾಡಿದ್ದೀರಿ ಹೇಳಿ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಎರಡೂವರೆ ವರ್ಷದಿಂದ ಏನೂ ಮಾಡದ ಬಿಜೆಪಿ ಸರ್ಕಾರ ಈಗ ಏನು ಮಾತುಕತೆ ನಡೆಸುತ್ತಿದೆ. ಗೋವಿಂದ ಕಾರಜೋಳ ಅವರು ಸುಳ್ಳು ಜಾಹೀರಾತು ನೀಡಿ ಜನರ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ನಾವು ಪಾದಯಾತ್ರೆ ಮಾಡುತ್ತೇವೆ. ನಿಷೇಧಾಜ್ಞೆ ಹಾಕಿದರೆ ಐದೈದು ಜನ ಹೋಗಿ ಪಾದಯಾತ್ರೆ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ನಾವು ಹೆಂಗಸ್ರು, ಶಿಖಂಡಿಗಳು… ಅವ್ರು ಗಂಡಸ್ರು, ನಾವು ಪಾದಯಾತ್ರೆ ಮಾಡೇ ಮಾಡ್ತೀವಿ: ಡಿಕೆಶಿ
Advertisement
ನಾವು ಹಠಕ್ಕೆ ಬಿದ್ದು ಕಾಂಗ್ರೆಸ್ ಅವರಂತೆ ಹೋರಾಟ ಮಾಡಲು ಹೋಗುವುದಿಲ್ಲ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ, ಅವರು ಹತಾಶೆಯಲ್ಲಿದ್ದಾರೆ ಏನೇನೋ ಮಾತನಾಡುತ್ತಿದ್ದಾರೆ. ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವ್ರು ರೈಲು, ಬಸ್ ಯಾವುದಲ್ಲಾದ್ರೂ ಹೋಗ್ಲಿ, ಆದ್ರೆ ಸಂದರ್ಭ ನೋಡಿ ಪ್ರತಿಭಟನೆ ಮಾಡ್ಲಿ: ಸುಧಾಕರ್
ಹದಿನೈದು ಇಪ್ಪತ್ತು ಜನ ಸೇರಿ ಪಾದಯಾತ್ರೆ ಮಾಡಲಿ ಎಂಬ ಗೋವಿಂದ ಕಾರಜೋಳ ಹೇಳಿಕೆ ವಿಚಾರ ನಾವು ಪಾದಯಾತ್ರೆ ಮಾಡುತ್ತೇವೆ. ಸರ್ಕಾರ ನಡೆಸುತ್ತಿರುವವರು ಏನೂ ಬೇಕಾದರೂ ಕ್ರಮ ಕೈಗೊಳ್ಳಲಿ. ಅರೆಸ್ಟ್ ಮಾಡಲಿ ನಾವು ಕೊರೊನಾ ನಿಯಮ ಪಾಲನೆ ಮಾಡಿ ಪಾದಯಾತ್ರೆ ಮಾಡುತ್ತೇವೆ. ಸರ್ಕಾರ ಏನು ಮಾಡುತ್ತದೆ ನೋಡೋಣ. ಮುಂದೆ ನಾವೇನು ಮಾಡುತ್ತೇವೆ ಅಂತ ಹೇಳುತ್ತೇವೆ ಎಂದು ಸವಾಲೊಡ್ಡಿದ್ದಾರೆ.
ಅನಗತ್ಯ ಗೊಂದಲ ಮಾಡುವ ಉದ್ದೇಶದಿಂದ ಸರ್ಕಾರ 144 ಸೆಕ್ಷನ್ ಹಾಕಿದೆ. ನಾವು 15 ಜನ ಪಾದಯಾತ್ರೆ ಮಾಡಿದರೆ ಬಿಡುತ್ತೇವೆ ಅಂತ ಕಾರಜೋಳ ಹೇಳುತ್ತಾರೆ. 15 ಜನ ನಡೆದರೆ ಅದು 144 ಕಲಂ ಉಲ್ಲಂಘನೆ ಅಲ್ವಾ? ನಾವು ನಿಯಮದ ಪ್ರಕಾರ ಪಾದಯಾತ್ರೆ ಮಾಡುತ್ತೇವೆ. ಎಲ್ಲೂ ಇಲ್ಲದ 144 ಕಲಂ ರಾಮನಗರಕ್ಕೆ ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೋಂ ಮಿನಿಸ್ಟರ್, ಹೋಂ ಮಿನಿಸ್ಟರ್ ರೀತಿ ನಡೆದುಕೊಂಡ್ರೆ ತಲೆ ಬಾಗ್ತೀವಿ: ಡಿಕೆಶಿ
ಮೇಕೇದಾಟು ಪಾದಯಾತ್ರೆಗೆ ಸಜ್ಜಾಗಿರುವ ಸಿದ್ದರಾಮಯ್ಯ ಅವರು ಪಾದಯಾತ್ರೆಗಾಗಿ 3 ಶೂಗಳನ್ನು ಖರೀದಿಸಿರುವುದಾಗಿ ಕ್ಯಾಮೆರಾಗೆ ತೋರಿಸಿದ್ದಾರೆ. ಹೊಸದಾಗಿ ಶೂ ಖರೀದಿಸಿದ್ದೇನೆ. ಈ ಹೊಸ ಶೂ ಇವತ್ತೇ ಮೊದಲು ಹಾಕಿಕೊಂಡಿರುವುದು ಎಂದಿದ್ದಾರೆ.