ಬೀದರ್: ನಾವು ಯಾರಿಗೂ ಎಚ್ಚರಿಕೆ ಕೊಡದೆ, ಜನಜಾಗೃತಿ ಮಾಡುವ ಕೆಲಸ ಮಾತ್ರ ಮಾಡಲಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ (Arvind Limbavali) ಹೇಳಿದ್ದಾರೆ.
ಗಡಿ ಜಿಲ್ಲೆಯಲ್ಲಿ ಬಿಜೆಪಿ ರೆಬಲ್ಸ್ ಟೀಂ ಇಂದಿನಿಂದ (ನ.25) ವಕ್ಫ್ (Waqf Board) ವಿರುದ್ಧ ಹೋರಾಟ ಆರಂಭಿಸಿದೆ. ವಕ್ಫ್ ಹಠಾವೋ ಭಾರತ್ ದೇಶ್ ಬಚಾವೋ’ ಘೋಷವಾಕ್ಯದಡಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ತಂಡ ಹೋರಾಟ ನಡೆಸಿದೆ. ಈ ವೇಳೆ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ
Advertisement
Advertisement
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ವಕ್ಫ್ ವಿರುದ್ಧ ಬಿಜೆಪಿ ಹೋರಾಟವನ್ನು ಕೈಗೆತ್ತಿಕೊಂಡಿದೆ. ಯತ್ನಾಳ್ ಅವರು ಸ್ಥಳೀಯವಾಗಿ ಹೋರಾಟ ಮಾಡಿದ್ದಾರೆ. ನಿಮಗೆ ವಕ್ಫ್ ಸಮಸ್ಯೆ ಇದ್ರೆ ದಯವಿಟ್ಟು ತಿಳಿಸಿ. ಜನರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಯಾರಿಗೂ ಎಚ್ಚರಿಕೆ ಕೊಡದೇ ಜನರ ಸಮಸ್ಯೆ ಆಲಿಸಲು ಮುಂದಾಗಿದ್ದೇವೆ. ಜನರ ಸಮಸ್ಯೆ ಆಲಿಸಲು ಜಾಗೃತಿ ಮೂಡಿಸಲು ಸ್ಥಳೀಯವಾಗಿ ಎಲ್ಲರೂ ಒಟ್ಟಾಗಿ ಬನ್ನಿ ಎಂದು ಕರೆ ನೀಡಿದ್ದೇವೆ. ರಾಜ್ಯಾಧ್ಯಕ್ಷರ ಭಾವನೆಯನ್ನ ನಾವು ಗೌರವಿಸುತ್ತೇವೆ ಎಂದರು.
Advertisement
ಇಂದು ಧರ್ಮಾಪುರ ಹಾಗೂ ಚಟ್ನಹಳ್ಳಿಗೆ ಭೇಟಿ ಕೊಡ್ತಿದ್ದೇವೆ. ವಾರ್ ರೂಮ್ ಬಂದ ತಕ್ಷಣ ಜನಜಾಗೃತಿ ಮಾಡುತ್ತಿದ್ದೇವೆ. ಎಲ್ಲರೂ ಭಾಗವಹಿಸಲು ಬೀದರ್‌ನಿಂದ ನರಸಿಂಹ ಝಾರನಾ ದೇವಸ್ಥಾನಕ್ಕೆ ಭೇಟಿ ನೀಡಿ ಆರಂಭ ಮಾಡ್ತಿದ್ದೇವೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ ಸಿದ್ದೇಶ್ವರ್, ಬಿ.ಪಿ ಹರೀಶ್, ಜೆಡಿಎಸ್ ನಾಯಕ ಎನ್.ಆರ್ ಸಂತೋಷ್ ಇದ್ದಾರೆ. ಈಶ್ವರ್ ಸಿಂಗ್ ಠಾಕೂರ್ ಅವರು ಸ್ಥಳೀಯವಾಗಿ ನಾಯಕತ್ವ ವಹಿಸಿದ್ದಾರೆ ಎಂದು ಹೇಳಿದರು.
Advertisement
ಈಗಾಗಲೇ ಯತ್ನಾಳ್ ಅವರು ಬಿಜಾಪುರ ಜಿಲ್ಲೆಯಲ್ಲಿ ಅವರ ಗಮನಕ್ಕೆ ಬಂದ ತಕ್ಷಣ ಹೋರಾಟ ಮಾಡಿದ್ದರು. ಹೋರಾಟದ ಭಾಗವಾಗಿ ದೊಡ್ಡ ಸಭೆಯಾಯ್ತು. ಹಗಲು, ರಾತ್ರಿ ಹೋರಾಟ ಮಾಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು. ವಕ್ಫ್ ಜಂಟಿ ಸಮಿತಿಯ ಅಧ್ಯಕ್ಷರೂ ಕೂಡ ಬಂದು ಮನವಿ ತೆಗೆದುಕೊಂಡು ಹೋದರು. ನಮಗೆ ಮಾಹಿತಿ ಸಂಗ್ರಹಿಸಿ ಕಳಿಸುವಂತೆ ಸೂಚನೆ ನೀಡಿದರು. ಕೇವಲ ಮಾಹಿತಿ ಮಾತ್ರವಲ್ಲ, ಜನಜಾಗೃತಿ ಕೂಡ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಡಿಚ್ಚಿ ಹೊಡಿತಿನಿ ಅಂತ ಬಂದಿದ್ಯಲ್ಲ, ಡೆಪಾಸಿಟ್ ಬಂತಾ?: ಅಶೋಕ್‍ಗೆ ಡಿಕೆಶಿ ತಿರುಗೇಟು