ಬಳ್ಳಾರಿ: ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಿಜೆಪಿ ಬಣ ಎಂದು ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವಕ್ಫ್ ವಿವಾದ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದೆ. ನಮ್ಮದು ಯತ್ನಾಳ್ ಬಣವಲ್ಲ. ಇರೋದು ಒಂದೇ ಬಣ, ಅದು ಬಿಜೆಪಿ ಬಣ. ನಾವು ಹೋರಾಟ ಮಾಡಿದ ಬಳಿಕ ಎಲ್ಲರೂ ಬಂದ್ರು. ಜೆಸಿಪಿ ಸಮಿತಿ ಬಂತು, ಎಲ್ಲವೂ ಬಂತು. ಮಾಧ್ಯಮಗಳಲ್ಲಿ ಕೆಲವನ್ನ ಬಿಂಬಿಸಲಾಗ್ತಿದೆ ಎಂದು ಬಣ ಬಡಿದಾಟ ಕುರಿತು ಸ್ಪಷ್ಟಪಡಿಸಿದರು.
Advertisement
ವಕ್ಫ್ ಬೋರ್ಡ್ ವಿಚಾರದಲ್ಲಿ ಎರಡನೇ ಹಂತದ ಹೋರಾಟ ಮಾಡುತ್ತೇವೆ. ಜ.4 ರಂದು ಬಳ್ಳಾರಿಯ ಕಂಪ್ಲಿಯಲ್ಲಿ ಸಮಾವೇಶ ಮಾಡ್ತೇವೆ. ಜ.6 ರಂದು ಕೂಡ ಹೋರಾಟ ನಡೆಯಲಿದೆ. ವಕ್ಫ್ ವಿಚಾರದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ. ವಕ್ಫ್ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಅಂತ ನಾವು ಹೋರಾಟ ಮಾಡ್ತೇವೆ ಎಂದು ತಿಳಿಸಿದರು.
Advertisement
ಬಿಜೆಪಿ ಕಚೇರಿಗಳಲ್ಲಿ ಮುಂದೆ ನಾವು ಸಭೆಗಳು ಮಾಡ್ತೇವೆ. ಪಕ್ಷಾತೀತವಾಗಿ ನಾವು ಹೋರಾಟ ಮಾಡ್ತೇವೆ ಎಂದರು.